“ಜೈ ಜವಾನ್, ಜೈ ಕಿಸಾನ್” – ರೈತ ದೇಶದ ಬೆನ್ನೇಲುಬು ಎನ್ನುವ ಮಾತು ಸಾಕಷ್ಟು ವರ್ಷಗಳಿಂದ ಇದ್ದೆ ಇದೆ. ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಲಾಲ್ ಬಹದ್ದೂರ ಶಾಸ್ರ್ತಿ ಇವರು ಹೆಸರಿಸಿದ ಈ ಘೋಷವಾಕ್ಯವು ಭಾರತಕ್ಕೆ ಹೊಸ ಉತ್ಸಾಹದ ಜೊತೆಗೆ ರೈತರಿಗೆ ಹಾಗೂ ಸೈನಿಕರಿಗೆ ಹೊಸ ಚೈತನ್ಯವನ್ನೂ ನೀಡಿತ್ತು. ಶಾಸ್ತ್ರಿಜಿಯವರು ಭಾರತವನ್ನು ಎರಡು ಬಲಿಷ್ಠ ಕಂಬಗಳ ಮೇಲೆ ನಿಲ್ಲಿಸಬೇಕೆಂದುಕೊಂಡಿದ್ದರು, ಗಡಿಯ ಜವಾನ್ ಮತ್ತು ಹೊಲದ ಕಿಸಾನ್ ಆದರೆ ಇಂದಿನ ವಾಸ್ತವ ಪರಿಸ್ಥಿತಿ ಏನು ಹೇಳುತ್ತಿದೆ?
ಇಂದು ನಾವು ವಾಸ್ತವ ವಿಚಾರವನ್ನ ನೋಡೋಣ ಈ ಬಾರಿ ಉತ್ತಮ ಮಳೆಯಾದ ಕಾರಣ ದೇಶದ ಎಲ್ಲಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದ್ದವು, ರೈತರು ಕೂಡಾ ಬಹಳಷ್ಟು ಖುಷಿಯಾಗಿದ್ದರು, ಇದೆ ಖುಷಿಯಲ್ಲಿಯೇ ಬಿತ್ತನೆ ಕಾರ್ಯವನ್ನೂ ಶುರುಮಾಡಿದರು, ಆದರೆ ಇವರ ಖುಷಿ ಉತ್ತಮ ಇಳುವರಿ ಬಂದ ನಂತರ ಇನ್ನೂ ಹೆಚ್ಚಾಗಬೇಕಿತ್ತು, ಆದರೆ ಹಾಗಾಗಲಿಲ್ಲ ದಲ್ಲಾಳಿಗಳಳು ಭತ್ತಕ್ಕೆ ನಿಗದಿಪಡಿಸಿದ ಬೆಲೆ ಕೇಳಿ ಇವರ ನಾಲ್ಕು ತಿಂಗಳ ಖುಷಿ ನಾಲ್ಕು ದಿನಗಳಲ್ಲೇ ತಲೆಕೆಳಗಾಗಿತ್ತು. ಕಳೆದ ವರ್ಷದ ಸಾಲಿನಲ್ಲಿ ಆರ್.ಎನ್.ಆರ್ ಭತ್ತ 2800/- ರಿಂದ 2400/- ಮತ್ತು ಸೋನಾ 1500/- ರಿಂದ 1900/- ರರವರೆಗೆ ಮಾರಾಟವಾಗಿದ್ದರೆ, ಈ ವರ್ಷದಲ್ಲಿ ಆರ್.ಎನ್.ಆರ್ ಭತ್ತ 1700/- ರಿಂದ 1900/- ರೂ,ಗಳಿದ್ದರೆ, ಸೋನಾ 1300/- ರಿಂದ 1500/- ಬಂದಿದೆ ಇದಕ್ಕೆ ಕಾರಣ ಉತ್ತಮ ಇಳುವರಿಯೇ ಆಗಿದೆ.. ಮಳೆ ಬೆಳೆ ಚೆನ್ನಾಗಿ ಆದರು ಒಂದು ಕಷ್ಟ, ಮಳೆ ಬೆಳೆ ಚೆನ್ನಾಗಿ ಆಗದಿದ್ದರು ಒಂದು ಕಷ್ಟ .. ರೈತನಿಗೆ ಮಾತ್ರ ಗೋಳು ಕಟ್ಟಿಟ್ಟ ಬುತ್ತಿ… ಕಾರಣ ಏನು ?
ಭತ್ತದ ಬೆಲೆ ಏರುಪೇರಾಯಿತು.
-
2023-24 ರಲ್ಲಿ: ಉತ್ತಮ ಗುಣಮಟ್ಟದ ಭತ್ತ ₹2800 - ₹2400. ಕಡಿಮೆ ಗುಣಮಟ್ಟದ ಭತ್ತ ₹1700 - ₹1900
-
2024-25 ರಲ್ಲಿ: ಅದೇ ಭತ್ತ ₹1700 - ₹1900 ಅಥವಾ ಕಡಿಮೆ ಗುಣಮಟ್ಟದ ಭತ್ತ ₹1300 - ₹1500.
ಮಳೆ ಬಂದರೂ ಗೋಳು, ಬರಬಂದರೂ ಗೋಳು.
ಇಲ್ಲಿ ತಪ್ಪು ಯಾರದು?
-
ಪ್ರಕೃತಿಯದಾ? – ಇಲ್ಲ. ಪ್ರಕೃತಿ ತನ್ನ ಕೆಲಸ ತಾನು ಮಾಡುತ್ತಿದೆ.
-
ಸರ್ಕಾರದದಾ? – ರೈತನಿಗೆ ಬೆಲೆ ಭರವಸೆ, ಖರೀದಿ ಕೇಂದ್ರಗಳ ನಿಯಂತ್ರಣ, ಮತ್ತು ನ್ಯಾಯಯುತ ಮೌಲ್ಯ ನೀಡುವ ನೈತಿಕ ಜವಾಬ್ದಾರಿ ಸರ್ಕಾರದ ಮೇಲಿದೆ. ಇದನ್ನ ಸರ್ಕಾದ ಸರಿಯಾಗಿ ನಿರ್ವಹಿಸುತ್ತದೆಯಾ ?
-
ದಲ್ಲಾಳಿಗಳದಾ? – ಅವರು ಮಾರುಕಟ್ಟೆ ನಿಯಂತ್ರಿಸುತ್ತಿದ್ದಾರೆ. ರೈತರ ಶ್ರಮವನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಂಡು, ಸಾಮಾನ್ಯ ಗ್ರಾಹಕರಿಗೆ ದ್ವಿಗುಣ ದರಕ್ಕೆ ಮಾರುತ್ತಾರೆ.
ರೈತನು ನಮ್ಮ ಅನ್ನದಾತ. ಆದರೆ ಈ ದೇಶದಲ್ಲಿ ಅತಿ ಕಡಿಮೆ ಗೌರವ, ಸುರಕ್ಷತೆ, ಮತ್ತು ಭರವಸೆ ಇರುವ ವೃತ್ತಿ ಎಂದರೆ ಅದು ರೈತನದೇ.