ಕಲೆಯ ನೆರಳಲ್ಲಿಅರಳಿದ ಪ್ರತಿಭೆ.
ಒಂದು
ದಿನ, ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು. ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು ಕಾಯಕಕ್ಕೆ ಸಿದ್ಧರಾಗಿದ್ದರು, ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು. ಆತನಿಗೆ ಅವಕಾಶ ಕೊಡಲಾಯಿತು.
ಶಿವಣ್ಣನು
ಹಂಪೆಗೆ ಹೋಗಿ, ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ ಶಿಲ್ಪಗಳನ್ನ
ನಿರ್ಮಿಸಿದ. ಇದರಲ್ಲಿ ವಿಶೇಷ ಎನ್ನುವಂತ ಶಿಲ್ಪವೂ ಇತ್ತು ಅದು ದೇವಸ್ಥಾನದ
ಗೋಪುರದ ನಡುವೆ ಬಿಂಬಿತವಾಗುವ
ಶಿಲ್ಪವಾಗಿತ್ತು, ಸೂರ್ಯನಿಂದ
ಪ್ರಕಾಶಮಾನವಾಗುವ ಬೆಳಕು ಗೋಪುರದ
ಮೇಲೆ ಬಿದ್ದು, ಆ ಬೆಳಕಿನ ನೆರಳಿನಿಂದ
ಮತ್ತೊಂದು ಚಿತ್ರ ಸೃಷ್ಠಿಯಾಗಿತ್ತು, ಶಿವಣ್ಣ ರಚಿಸಿದ ಶಿಲ್ಪ ಉಲ್ಟಾ ರೀತಿಯಲ್ಲಿ ದೇವಸ್ಥಾನದ ಮತ್ತೊಂದು
ಗೋಡೆಯ ಮೇಲೆ ಅಮೋಘವಾಗಿ ಕಂಡುಬಂದಿತ್ತು. ಈ ಶಿಲ್ಪ ಸಾಕಷ್ಟು ಅಧ್ಬುತ ಮತ್ತು ಹೊಸ ಬಗೆಯ ಸೃಜನಶೀಲತೆಯಿಂದ
ಕೂಡಿತ್ತೂ. ಅದನ್ನು ನೋಡಿ
ರಾಜ ಮೂಕವಿಸ್ಮಿತನಾಗಿದ್ದ "ಇದು ಕೇವಲ ಶಿಲ್ಪವಲ್ಲ, ಇದು ನಮ್ಮ ಸಂಸ್ಕೃತಿಯ ಶ್ರೇಷ್ಠತೆಯ ಸಂಕೇತ," ಎಂದು ಶಭಾಷ್ ಹೇಳಿದ, ಶಿವಣ್ಣನಿಗೆ “ಶಿಲ್ಪ
ರತ್ನ” ಎಂಬ ಬಿರುದನ್ನು ನೀಡಿದ.
ಆ
ಶಿಲ್ಪಗಳು ಇಂದಿಗೂ ಹಂಪೆಯಲ್ಲಿ ಇವೆ, ಪ್ರವಾಸಿಗರು ಅವುಗಳನ್ನ ನೋಡಿದಾಗಲೆಲ್ಲಾ ಬೆರಗಾಗುತ್ತಾರೆ. ಆದರೆ ಬಹುಪಾಲು ಜನರಿಗೆ ಇದು ತಿಳಿದಿಲ್ಲ, ಅದು ಸಾಮಾನ್ಯ ಶಿಲ್ಪಿಯ ಕಷ್ಟದ ಫಲವೆಂಬುದು.
ಈ
ಕಥೆ ನಮಗೆ ಹೇಳುವ ಪಾಠ:
ಪ್ರತಿಭೆ
ಯಾರಲ್ಲಿ ಬೇಕಾದರೂ ಅರಳಬಹುದು. ಪ್ರತಿಭೆಯ ಕಾರ್ಯ ಕಾರಣಗಳು ಇದರ ಮಹತ್ವ, ಮನಸ್ಸಿನ ಶುದ್ಧತೆಯಲ್ಲಿದೆ. ಕರ್ನಾಟಕದ ಇತಿಹಾಸ ಕೇವಲ ರಾಜರು ಅಥವಾ ಯುದ್ಧಗಳ ಕಥೆ ಅಲ್ಲ ಅದು ಸಂಸ್ಕೃತಿ ಸಂಸ್ಕಾರಗಳಲ್ಲಿನ ಕೊಡುಗೆ, ಇಲ್ಲಿನ ಶಿಲ್ಪಕಲೆಗಳು, ಉತ್ತರ ನಾಗರ ಶೈಲಿ, ದಕ್ಷಿಣದ ದ್ರಾವಿಡ ಶೈಲಿ, ಮತ್ತು ಕನ್ನಡ ವೈವಿಧ್ಯಮಯದಿಂದ ಕೂಡಿದ ವೇಸರ ಶೈಲಿಯಿಂದಲೂ ಕೂಡಿದೆ. ಕಷ್ಟಪಟ್ಟು ಬೆವರು ಹರಿಸಿದ ಬದುಕಿದ ಶ್ರೀಸಾಮಾನ್ಯರ ಮತ್ತು ಕಾಯಕದ
ಮಹತ್ವ ಸಾರುವ ಹಲವು ಹೆಮ್ಮೆಯ ದಾಖಲೆಗಳು ಕೂಡಾ ಕನ್ನಡ ಮಣ್ಣಿನಲ್ಲಿವೆ.
ಈ ಕಥೆಯ ಬಗ್ಗೆ
ನಿಮ್ಮ ಅನಿಸಿಕೆ ಅಭಿಪ್ರಾಯ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಇಂತಹ ಮತ್ತಷ್ಟು ಕಥೆಗಳನ್ನುರಚಿಸಲು ನಮಗೆ ಬೆಂಬಲಿಸಿ ..