ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ
ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು!
ಇದು ಏಕೆ ಆಗುತ್ತಿದೆ?
ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು:
- ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ.
- Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸೇರಿದಾಗ ಹಸುರು ಶಿಲೀಂಧ್ರ ಹೆಚ್ಚಾಗಿ ಬೆಳೆಯುತ್ತವೆ. ಇದರಿಂದ ನದಿ ಹಸಿರು ಕಾಣುತ್ತದೆ, ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ, ಮತ್ತು ಜಲಚರ ಜೀವಿಗಳು ಸಾಯುತ್ತವೆ.
- ನದಿಯ ನೈಜ್ಯಹರಿವಿಗೆ ಅಡ್ಡಿ – ನದಿಗೆ ಬರಬೇಕಾದ ನೀರಿನ ಹರಿವುವನ್ನ ಕೆಲ ಪ್ರದೇಶಗಳಲ್ಲಿ ತಡೆಹಿಡಿಯಲಾಗಿದೆ. ಹಾಗಾಗಿ ನಿಂತ ನೀರು ಹೇಗಿರುತ್ತದೋ, ಹಾಗೆ ಪಾಚಿಗಟ್ಟಿ ಕಲುಶೀತಗೊಳ್ಳುತ್ತದೆ.
* ಯಾರಿಗೆ ತೊಂದರೆ ಆಗುತ್ತಿದೆ?
- ನಗರ ಮತ್ತು ಗ್ರಾಮೀಣ ಜನರಿಗೆ ಕುಡಿಯುವ ನೀರಿಗೆ ತೊಂದರೆ.
- ಕೃಷಿಕರ ತೋಟಕ್ಕೆ ಹೋಗುವ ನೀರಿನ ಗುಣಮಟ್ಟ ಕುಸಿತ.
- ಜೀವರಾಶಿಗೆಗಳಿಗೆ ಮತ್ತು ಮೀನುಗಾರರ ಜೀವನಕ್ಕೆ ಹೊಡೆತ.
- ಶಾಲಾ ಮಕ್ಕಳ ಭಾವನೆಯಲ್ಲಿ – “ನದಿ ನೀರು ನಮ್ಮದು ಇದು ಆರೋಗ್ಯಕರ ಅಂತ ಅನ್ನಿಸೊದಿಲ್ಲ”ಪ್ರಕೃತಿ ಮೇಲೆ ನಂಬಿಕೆ ಕಳೆದುಹೋಗುತ್ತದೆ.
*ನಾವು ಏನು ಮಾಡಬೇಕು?
- ಸ್ಥಳೀಯ ಪಂಚಾಯಿತ್/ನಗರಸಭೆ ಸಹಯೋಗದಲ್ಲಿ ಈ ವಿಚಾರವನ್ನ ಗಂಭಿರವಾಗಿ ತೆಗೆದುಕೊಳ್ಳಬೇಕಿದೆ.(ನೀರು ಪರೀಕ್ಷೆ, ನಿರ್ವಹಣೆ).
- ಜಾಗೃತಿ ಅಭಿಯಾನ – ಫೋಟೋಗ್ರಾಫರ್‌ಗಳು ಮತ್ತು ಯುವಕರು ಚಿತ್ರಗಳ ಮೂಲಕ ಜನರಿಗೆ ತೋರಿಸಬೇಕು.
- ಕಸ ಬಿಸಾಕುವಾಗ ಜವಾಬ್ದಾರಿ – ಮನೆಮಾಲೀಕರು, ವ್ಯಾಪಾರಸ್ಥರು, ಎಲ್ಲರೂ ಬದಲಾಗಬೇಕು.
*ಕೊನೆಗೆ – ನಾವು ನದಿಗೆ ಏನು ಕೊಟ್ಟಿದ್ದೇವೆ?
ನದಿ ಉಳಿಸೋಣ, ನದಿ ನಮ್ಮ ಜೀವಾಳ, ನದಿಯ ಪರಿಸರ ಉಳಿಸೋದು ನಮ್ಮ ಹೊಣೆ. ಇದಕ್ಕಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕು.
ಲೇಖಕ: ಶಿವಲಿಂಗಯ್ಯ ಕುಲಕರ್ಣಿ
Kavya Digital’s Studio – ಗಂಗಾವತಿ