ನಮಸ್ಕಾರ ಸ್ನೇಹಿತರೇ
ಒಂದು ಕಾಲವಿತ್ತು ಮುಂಜಾನೆ ಎದ್ದ ತಕ್ಷಣ ತಣ್ಣನೆಯ ಚಳಿಯ ಗಾಳಿಯಲ್ಲಿ ಸೂರ್ಯೋದಯದ ಸಮಯದಲ್ಲಿ ತೆಳ್ಳನೆಯ ಸೂರ್ಯರಶ್ಮಿಯನ್ನ ನೋಡುವುದೆ ಒಂದು ಚಂದವಾಗಿತ್ತು. ಆ ಸಮಯದಲ್ಲಿ ಸೂರ್ಯನನ್ನ ದೃಷ್ಠಿಸಿ ನೋಡಿದರು ಕೂಡಾ ಕಣ್ಣಿನ ಆರೊಗ್ಯ ಚೆನ್ನಾಗಿರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಅದರಂತೆ ಬೆಟ್ಟದಾಚೆ ಚಿಮ್ಮುವ ಸೂರ್ಯ, ತೆಳ್ಳಗೆ ಬೀಳುವ ಬೆಳಕು, ಹಕ್ಕಿಗಳ ಕೂಗಿನ ಮಾತುಗಳು ಈ ಎಲ್ಲವು ನಮ್ಮ ಮನಸ್ಸಿಗೆ ನಿಶಬ್ದದ ಜೋತೆಗೆ ನೆಮ್ಮದಿಯ ಜ್ಞಾನವನ್ನು ಕೊಡುತ್ತಿದವು
ಆದರೆ ಇಂದು, ಬೆಳಿಗ್ಗೆ ಎದ್ದು ನಮ್ಮ ಕಣ್ಣು ತೆಗೆಯುವ ಸಂದರ್ಭದಲ್ಲಿ ನಮಗೆ ಮೊಬೈಲ್ ನೋಟಿಫಿಕೇಶನ್ ಶಬ್ದ ಮತ್ತು ಇದರ ಬೆಳಕು ನಮ್ಮ ಕಣ್ಣಿಗೆ ಬಿಳುತ್ತಿವೆ..
ಟೆಕ್ನಾಲಜಿಯ ತ್ವರಿತ ಜಗತ್ತಿನಲ್ಲಿ ನಾವು ನೆಮ್ಮದಿಯ ಜ್ಞಾನವೇನು ಎಂಬುದನ್ನು ಮರೆತಂತೆಯೇ ಆಗಿದೆ. ನಾವು ಇಂದು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಾ, ಓದುತ್ತಾ ಇರೋಣ; ಆದರೆ ಅದರಲ್ಲಿಂದು ನಮಗೆ ಎಷ್ಟು ಶಾಂತಿ ಉಳಿದಿದೆ?
ಇಂದು, ಆತ್ಮವಿಶ್ವಾಸ ಮತ್ತು ಶಾಂತಿಯಿಂದ ಬದುಕಬೇಕೆಂದರೆ, ಮೊದಲಿಗೆ ನಾವು ತಿಳಿದುಕೊಳ್ಳೊದು ತಂತ್ರಜ್ಞಾನದಿಂದ ಬದುಕಲ್ಲ ಬದುಕಲಿಕ್ಕಾಗಿ ತಂತ್ರಜ್ಞಾನ ಎನ್ನುವದನ್ನ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇಲ್ಲಿ ತಂತ್ರಜ್ಞಾನವು ಬೇಕು ಅದಕ್ಕಿಂತ ಮಿಗಿಲಾಗಿ ಜೀವನವು ಬೇಕು ಎನ್ನುವಂತಹ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಕಾರಣ ನಾವು ಇದರ ಮಧ್ಯದಲ್ಲಿ ನೆಮ್ಮದಿಯ ಸಂಪರ್ಕ ಸಾಧಿಸಲೇಬೇಕು. ಫೋನ್‌ನ ಶಬ್ದಕ್ಕಿಂತ ಹೆಚ್ಚು ಹೆಚ್ಚು ಮನಸ್ಸಿನ ಶಬ್ದ ಕೇಳಿಸಿಕೊಳ್ಳಲೇಬೇಕು. ಪ್ರತಿದಿನದ ಕೆಲ ಕ್ಷಣಗಳನ್ನು ನಾವು “ ನೆಮ್ಮದಿಯ ಜ್ಞಾನಕ್ಕಾಗಿ” ಮೀಸಲಿಡಬೇಕು ಆದರೆ ಅದು ಫೋನಿಗಾಗಿ ಅಲ್ಲ, ಮನಸ್ಸಿಗಾಗಿ.
ನೆಮ್ಮದಿಯ ಜ್ಞಾನದಿಂದ ಶಾಂತಿ ಅಂದ್ರೆ — ಎಲ್ಲವನ್ನೂ ತಿಳಿದವನು ಅಲ್ಲ; ಆದರೆ ಯಾವ ಸಮಯದಲ್ಲಿ ಯಾವ ಮಾಹಿತಿ ತನ್ನ ಮನಸ್ಸಿಗೆ ಒಳ್ಳೆಯದು ಎಂಬುದನ್ನು ಪರಿಪಕ್ವವಾಗಿ ಅರಿತು ತಿಳಿದವನು. ತಂತ್ರಜ್ಞಾನ ಇದು ನವೀನ ಜಗತ್ತಿನಲ್ಲಿ ಒಂದು ಹೊಸ ಶಕ್ತಿಯಂತೆ ಬೆಳೆಯುತ್ತದೆ.ನಾವು ತಂತ್ರಜ್ಞಾನ ಬಳಸಬೇಕು, ಆದರೆ ಅದು ನಮ್ಮನ್ನು ಬಳಸಬಾರದು.ನಾವು ಕಲಿಯಬೇಕು ನಿಜ, ಆದರೆ ಕಲಿಯುವುದೇ ಗೊಂದಲವಾಗಬಾರದು; ನಾವು ಸರಳವಾಗಿ ತಿಳಿದು ಆಳವಾದ ಅರಿವು ಮೂಡಿಸಿಕೊಳ್ಳಬೇಕು. ಮನಸ್ಸಿನ ಚಿಂತನೆಗೆ ಹೆಚ್ಚು ಮಹತ್ವ ಕೊಡಬೇಕು.
ನಾವು ತಂತ್ರಜ್ಞಾನದ ಸಂಪರ್ಕದಲ್ಲಿರಬೇಕು, ಆದರೆ ಅದಕ್ಕೆ ಮೊದಲು ನಮ್ಮನ್ನ ನಾವು ಸ್ವಯಂ ಸಂಪರ್ಕದಲ್ಲಿ ಇರಿಸಿಕೊಳ್ಳಬೇಕು.
ಮನಸ್ಸು ನೆಮ್ಮದಿಯಿಂದ ಇದ್ದರೆ, ಆತ್ಮವಿಶ್ವಾಸವು ತನ್ನ ದಾರಿ ಹುಡುಕುತ್ತದೆ. ಇಡೀ ಜಗತ್ತು ಹೆಚ್ಚು ಶಬ್ದಮಯವಾಗಿದ್ರೆ, ನಾವು ನಮಗಾಗಿಯೇ ಮನಸ್ಸಿನಲ್ಲಿ ಒಂದು ಶಾಂತ ಕೋಣೆಯನ್ನು ನಿರ್ಮಿಸಿಕೊಳ್ಳಬೇಕು ಅಲ್ಲಿ ಯಾವುದೂ ಯಾರು ನಮ್ಮನ್ನ ಆಜ್ಞಾಪಿಸಲ್ಲ, ಇಲ್ಲಿ ನಮ್ಮನ್ನು ನಾವೆ ಮನನ ಮಾಡಿಕೊಳ್ಳಬೇಕು
ಅದೇ ನೆಮ್ಮದಿ ಅಲ್ಲಿಯೇ ನಿಜವಾದ "ಜ್ಞಾನದ ಶಾಂತಿ".
ಆ ಶಾಂತಿಯನ್ನ ನಾವು ತಲುಪಿದಾಗ, ಈ ತಂತ್ರಜ್ಞಾನ ನಮಗೆ ತಿರುಗುಬಾಣವಾಗಲ್ಲ; ನಮ್ಮ ಕನಸುಗಳ ಸೇತುಬಂಧ ಆಗುತ್ತದೆ.
ಈ ವಿಷಯ ಇಷ್ಟವಾದರೆ ನಿಮ್ಮ ಸ್ನೇಹಿತ ಸಮೂಹ ವರ್ಗದ ಜೋತೆ ಹಂಚಿಕೊಳ್ಳಿ....
ಧನ್ಯವಾದಗಳು 🙏