ರಾಷ್ಟ್ರಕೂಟರ ವೀರರ ಮತ್ತು ಜ್ಞಾನದ ಚಿಕ್ಕ ಕಥೆ
ಅಜ್ಜಿ: "ಮಗು, 8ನೇ ಶತಮಾನದಲ್ಲಿ ರಾಷ್ಟ್ರಕೂಟರು ದಕ್ಷಿಣ ಭಾರತದ ಶಕ್ತಿಶಾಲಿ ಸಾಮ್ರಾಜ್ಯದವರಾಗಿದ್ದರು. ಇವರ ಮೂಲ ಪುರುಷ ದಂತಿದುರ್ಗಾ ಇವರ ರಾಜಧಾನಿ ಮಾನ್ಯಖೇಟ (ಗುಲ್ಬರ್ಗಾ) ಇದು ಜ್ಞಾನ-ಸಂಸ್ಕೃತಿಯ ಕೇಂದ್ರವಾಗಿತ್ತು."
ಮೊಮ್ಮಗ: "ರಾಜರು ಹೇಗಿದ್ದರು?"
ಅಜ್ಜಿ: ರಾಜರು ತುಂಭಾ ಬುದ್ಧಿವಂತರಾಗಿದ್ದರು ರಾಷ್ಟ್ರಕೂಟ ವಂಶದ ಶ್ರೇಷ್ಠ ದೊರೆ "ರಾಜ ಅಮೋಘವರ್ಷ ಇತ ಬುದ್ಧಿವಂತ ಮತ್ತು ಸ್ವಯಂಕವಿಯಾಗಿದ್ದ. ಒಮ್ಮೆ ಬೇಟೆಯಲ್ಲಿ ಗಾಯಗೊಂಡಾಗ, ಒಬ್ಬ ಬಡ ಬೇಟೆಗಾರ ಅವನನ್ನು ಉಳಿಸಿದನು ಇದರ ಪ್ರತಿಫಲವಾಗಿ, ರಾಜನು ಅವನಿಗೆ 'ವೀರಸಿಂಹ' ಬಿರುದು ನೀಡಿ, ಅವನ ಹಳ್ಳಿಗೆ ಶಾಲೆ ಕಟ್ಟಿಸಿ ಕೊಡುತ್ತಾನೆ!"
ಮೊಮ್ಮಗ: "ಕನ್ನಡಕ್ಕೆ ಅವರ ಕೊಡುಗೆ ಏನು ?"
ಅಜ್ಜಿ: ಒಮ್ಮೆ ಸಾಮ್ರಾಜ್ಯದಲ್ಲಿ ಕ್ಷಾಮ, ಬರಗಾಲ ಉಂಟಾದಾಗ ಸ್ವತಃ ರಾಜನೇ ಸಾಮ್ರಾಜ್ಯದ ಹಿತದೃಷ್ಠಿಯಿಂದ ತನ್ನ ಕೈ ಹೆಬ್ಬೇರಳನ್ನೇ ಕತ್ತರಿಸಿಕೊಂಡು ಕೊಲ್ಲಾಪೂರ ಮಹಾಲಕ್ಷ್ಮಿಗೆ ಹರಕೆ ತಿರಿಸಿ ಪ್ರಜೆಗಳ ಯೋಗಕ್ಷೇಮ ಕಾಪಾಡಿದ. "ರಾಜನೇ ಸ್ವತಃ ಕವಿಯಾಗಿದ್ದರಿಂದ ಇತ ಅನೇಕ ಗ್ರಂಥಗಳನ್ನು ಬರೆದಿದ್ದಾನೆ ಜೊತೆಗೆ 'ಕವಿರಾಜಮಾರ್ಗ' ಬರೆದು ಕನ್ನಡವನ್ನು ಗೌರವಿಸಿದನು. ಅವರ ಕಾಲದಲ್ಲಿ ಜಿನಸೇನ, ಗುಣಭದ್ರರಂತಹ ವಿದ್ವಾಂಸರು ಹುಟ್ಟಿದರು. 3೦೦ ವರ್ಷ ಆಳಿದ ಈ ಸಾಮ್ರಾಜ್ಯದ ಅರಸರ ವೀರತ್ವ, ನ್ಯಾಯ ಮತ್ತು ಕಲೆಗಳಿಗೆ ಹೆಸರಾಗಿತ್ತು." ತಮ್ಮ ಸುತ್ತಮುತ್ತಲಿನ ಸಾಮ್ರಾಜ್ಯ ರಾಜರೊಂದಿಗೆ ಉತ್ತಮ ಸ್ನೇಹ ಇಟ್ಟುಕೊಂಡಿದ್ದ.
ಸಾರಾಂಶ: ರಾಷ್ಟ್ರಕೂಟರು ಕೇವಲ ಯೋಧರಲ್ಲ, ಜ್ಞಾನದ ಪೋಷಕರು ಆಗಿದ್ದರು, ಅವರ ಕಾಲದಲ್ಲಿ ಸಾಹಸ, ನ್ಯಾಯ ಮತ್ತು ಕನ್ನಡ ಉಚ್ಚ್ರಾಯ ಸ್ಥಿತಿಗೆ ಏರಿತು. ಇಂದಿಗೂ ಅವರ ಮಾದರಿ ರಾಜಕಾರಣಕ್ಕೆ ಪ್ರೇರಣೀಯ!
"ಗತವನ್ನು ತಿಳಿದರೆ, ಭವಿಷ್ಯವನ್ನು ಕಟ್ಟಬಹುದು" – ಇತಿಹಾಸದ ಪಾಠ.