ನಮಸ್ಕಾರ ಸ್ನೇಹಿತರೇ, ನಮಗೆ ಗೊತ್ತಿದೆಯಾ? ಭಾರತದಲ್ಲಿ ಪುರಾತನ ಕಾಲದಲ್ಲಿಯೇ ವಿಶ್ವದ ಒಂದು ಅತ್ಯಂತ ಪ್ರಾಚೀನ ನಾಗರಿಕತೆ ಬೆಳೆದಿತ್ತು! ಅದನ್ನು ನಾವು ಸಿಂಧು ಸರಸ್ವತಿ ನಾಗರಿಕತೆ ಎಂದು ಕರೆಯುತ್ತೇವೆ. ಇದನ್ನ ದಯಾರಾಮ ಸಹಾನಿ 1921 ರಲ್ಲಿ ಹರಪ್ಪ ನಾಗರಿಕತೆಯನ್ನ ಪತ್ತೆಪಚ್ಚಿದರೆ 1922 ರಲ್ಲಿ ಆರ್,ಡಿ.ಬ್ಯಾನರ್ಜಿ ಇವರು ಮೊಹೆಂಜೊದಾರ ನಗರವನ್ನ ಪತ್ತೆ ಹಚ್ಚಿದರು ಇವು ಈಗ ಪಾಕಿಸ್ತಾನದಲ್ಲಿವೆ.. ಇನ್ನೂ ಸಿಂಧು ನಾಗರಿಕತೆ ಪಾಕಿಸ್ತಾನ ಮತ್ತು ಉತ್ತರ ಪಶ್ಚಿಮ ಭಾರತದಲ್ಲಿ ಸಿಂದು ನದಿ ಅವಲಂಭಿತ ಭೂಪ್ರೇಶದಲ್ಲಿ ಹುಟ್ಟಿಕೊಂಡಿತ್ತು ಪಾಶ್ಚಿಮಾತ್ಯ ವಿದ್ವಾಂಸರ ಪ್ರಕಾರ ಈ ನಾಗರಿಕತೆಗೆ ಕ್ರ.ಪೂ3000 ರಿಂದ ಕಿ.ಫು 1300 ವಷಗಳ ಇತಿಹಾಸವಿದೆ ಆದರೆ ಭಾರತೀಯ ಪೌರಾಣಿಕ ಗ್ರಂಥಗಳ ಆಧಾರದ ಪ್ರಕಾರ ನೋಡುವುದಾದರೆ.. ಬಾರತೀಯ ನಾಗರಿಕತೆಗೆ ಸುಮಾರು 10 ಸಾವಿರ ವಷಗಳ ಹಿಂದೆನ ಇತಿಹಾಸ ಇದೆ ಎಂದು ಹೇಳಬಹುದಾಗಿದೆ. ಅದಾಯೂ ಕೂಡಾ ದ್ವಂದ್ವ ನಿರ್ಧಾರದ ಆಧಾರದ ಮೇಲೆ ಮತ್ತು ಪುಸ್ತಕಗಳಲ್ಲಿ ಮಾತ್ರ ಮೆಸಪೋಟಮಿಯಾ ಜಗತ್ತಿನ ಪ್ರಥಮ ನಾಗರಿಕತೆ ಈಜಿಷ್ಟ್ ಎರಡನೇ ನಾಗರಿಕತೆ ಮತ್ತು ಮೂರನೇಯದಾಗಿ ಸಿಂಧು ನಾಗರಿಕತೆ ಎನ್ನಲಾಗುತ್ತಿದೆ. ನಾವು ಸಿಂಧು ನಾಗರಿಕತೆ ಯ ಮಹತ್ವ, ಅದರ ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ
1️⃣ ಸಿಂಧು ನಾಗರಿಕತೆಯ ಇದು ಬಾರತದ ನಾಗರಿಕತೆಯ
ತೊಟ್ಟುಲು ಎನ್ನಲಾಗುತ್ತಿದೆ.
ಸಿಂಧು ನಾಗರಿಕತೆ ಇತಿಹಾಸದ ಬಗ್ಗೆ ಹಲವಾರು ಗೊಂದಲಗಳಿವೆ ಇದರ ಹೊರತಾಗಿ ಇತಿಹಾಸಕಾರರು ಇದಕ್ಕೆ ಕ್ರಿ.ಪೂ. 5000 ರಿಂದ 1300ರ ಅವಧಿಯಲ್ಲಿ ಇದು ಮಹಾನ್ ನಾಗರಿಕತೆಯಾಗಿದೆ. ಇದನ್ನು ಹರಪ್ಪಾ ಮತ್ತು ಮೋಹೆಂಜೊದಾರೊ ನಗರಗಳ ಮೂಲಕ ಹೆಚ್ಚು ಗುರುತಿಸಲಾಗುತ್ತದೆ. 1920ರ ದಶಕದಲ್ಲಿ ಮೊದಲ ಬಾರಿಗೆ ಆಗಿನ ಸಿಂಧ್ ಪ್ರಾಂತದ ಬಿಟಿಷ್ ಪುರಾತ್ವ
ಸಂಶೋದಕರಾಗಿದ್ದ ಸರ್ ಜಾನ್ ಹಬ್ಬರ್ಟ್ ಮಾರ್ಷಲ್, ಇವರು ಈ ನಾಗರಿಕತೆಯನ್ನು
ಅನ್ವೇಷಣೆ ಮಾಡಿದ್ದಾರೆ. ಈ ನಾಗರಿಕತೆ ಇಂದಿಗೂ ವಿಜ್ಞಾನಿಗಳಿಗೆ ಆಕರ್ಷಣೆಯಾಗಿದೆ! ಏಕೆಂದರೆ ಈ ನಾಗರಿಕತೆಯೂ ಪ್ರಪಂಚದಲ್ಲೆ
ಅಂತ್ಯಂತ ಶ್ರಿಮಂತ ನಾಗರಿಕತೆ ಮತ್ತು ಉನ್ನತ ಮಟ್ಟದ ಜೀವನ ಹೊಂದಿದ ನಾಗರಿಕತೆ ಎಂದು
ಗುರುತಿಸಲಾಗಿದ್ದರು ಕೂಡಾ ಇದರ ಲಿಪಿಯ ಬಗ್ಗೆ ಹೆಚ್ಚು ಅನ್ಷೇಶಣೆಗಳು ನಡೆಯುತ್ತಿಲ್ಲ.ಇನ್ನೂ ಈ
ಸಿಂಧು ನಾಗರಿಕತೆ ಜನರು ಕಾಲನಂತರದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬಂದು ನೆಲೆಸಿದ್ದಾರೆ ಎಂದು
ಹೇಳಲಾಗುತ್ತಿದೆ. ಈ ಹಲವು ಗೊಂದಲಕ್ಕೆ ತೆರೆ ಎಳೆಯಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ
ಸ್ಟಾಲೀನ್ ಇವರು ಸಿಂಧು ನಾಗರಿಕತೆ ಲಿಪಿಯ ಬಗ್ಗೆ ಅನ್ಷೇಷಣೆ ನಡೆಸಿ ಇದರ ನಿಜವಾದ ಇತಿಹಾಸ ತಿಳಿಸಿಕೊಟ್ಟವರಿಗೆ 1 ಬಿಲಿಯನ್ ಡಾಲರ್ ಘೊಷಣೆ ಮಾಡಿದ್ದಾರೆ. ಕರ್ನಾಟಕದ ಸಾಮಾಜಿಕ ಜೀವನಕ್ಕೂ ಈ ಸಿಂಧು
ನಾಗರಿಕತೆಗೂ ಸಾಕಷ್ಟು ಹೋಲಿಕೆಯಾಗಿದೆ ಅದಾಗಿಯೂ ಕೂಡಾ ಬಹಳಷ್ಟು ಇದರ ಇತಿಹಾಸದ ಬಗ್ಗೆ ಇನ್ನೂ
ಕೂಡಾ ಸಂಶೊಧನೆ ಹೇಗೆ ನಡೆದಿಲ್ಲ ಎನ್ನುವದು ಸ್ಪಷ್ಟವಾಗಿ ತಿಳಿಯುತ್ತಿದೆ…
ಇನ್ನು ಸಿಂಧು ನಾಗರಿಕತೆಯಲ್ಲಿ ಯಾವು ಮುಖ್ಯ ನಗರಗಳು:ಪಾಕಿಸ್ತಾನದಲ್ಲಿ ಹರಪ್ಪಾ, ಮೋಹೆಂಜೊದಾರೊ, ಭಾರತದಲ್ಲಿ ಧೋಳಾವಿರಾ, ಲೋಥಲ್, ಕಾಳಿ ಬಂಗನ್ ಇನ್ನೂ ಲೋಥಲ್ ನಗರವನ್ನ ಸಿಂಧು ನಾಗರಿಕತೆಯ ಪ್ರಮುಖ ಬಂದರು ನಗರವನ್ನಾಗಿ ಉಪಯೋಗಿಸಲಾಗುತ್ತು.
ಮೋಹೆಂಜೊದಾರೊದಲ್ಲಿ ಪತ್ತೆಯಾದ "ಗ್ರೇಟ್ ಬಾತ್" ಪುರಾತನ ಸ್ನಾನಗೃಹ ಆಗಿನ ಕಾಲದಲ್ಲಿ ಭಾರತೀಯ ನಾಗರಿಕತೆಗೆಯ ಪ್ರಾಮುಖ್ಯತೆಗೆ ಸಾಕ್ಷೀಯಾಗಿದೆ.