Skip to main content

ಪ್ರಥಮ ಮತ್ತು ದ್ವೀತಿಯ ಮಹಾಯುದ್ಧಗಳ ಮಾಹಿತಿ ಭಾಗ - 01

         

            ಯದ್ದೆದ್ದು ಬಿಳುತಿಹೇ ಗುದ್ದಾಡಿ ಸೋಲುತಿಹೇ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹಿ  ಉದ್ಧರಿಸುವೇನು ಜಗವ ಎನ್ನುತಿಹ ಸಕನೇ ನಿನ್ನುದ್ಧಾರವೇಷ್ಟಾಯಿತೋ ಮಂಕುತಿಮ್ಮ ನಮಸ್ಕಾರ ವಿಕ್ಷಕರೇ, ನಾವೀದಿನ ಹೇಳುತ್ತಿರುವ ಈ ಸ್ಟೋರಿಗೆ ಡಿ.ವಿ.ಜಿಯವರ ಈ  ಅದ್ಬುತ ಸಾಲುಗಳು ಅಕ್ಷರಶಹ ಸರಿಹೊಗುತ್ತವೆ ಎಂದೆನ್ನಿಸುತ್ತಿದೆ. ಅಂದಹಾಗೆ ಈ ಸ್ಟೋರಿಯಲ್ಲಿ ಯೂರೋಪನ  ಶ್ರೀಮಂತ ಇತಿಹಾಸ ಹೊಂದಿದ ಎರಡು ಮಹಾಸಾಮ್ರಾಜ್ಯಗಳು ಪ್ರಥಮ ಹಾಗೂ ದ್ವೀತಿಯ ಮಹಾಯುದ್ಧಕ್ಕೇ ನೇರ ಕಾರಣವಾಗಿದ್ದವು. ಈ ಸಾಮ್ರಾಜ್ಯದಲ್ಲಿನ ನಾಯಕರುಗಳ ಅಹಂಕಾರದ ಆತ್ಮವಂಚನೆಯಿಂದಾಗಿ ಇಲ್ಲಿನ ಜನತೆ ತಿವ್ರ ಅವಮಾನಕ್ಕಿಡಾಗಿದ್ದರು. ಅಷ್ಟಕ್ಕೂ ಈ ಮಹಾಯುದ್ಧಗಳಿಗೆ ನೇರ ಕಾರಣವಾಗಿದ್ದ ಆ ಎರಡು ಮಹಾಸಾಮ್ರಾಜ್ಯಗಳು ಯಾವದು ಅಂತಾ ನೀಡುವುದಾದರೇ ಅಲ್ಲಿ ನಮಗೆ ಗೊಚರಿಸುವ ಹೆಸರುಗಳು ಆಸ್ಟ್ರೋಹಂಗೇರಿಯನ್ ಉರ್ಫ ಆಸ್ಟ್ರೀಯಾ ಹಾಗೂ ಜರ್ಮನ್ ಮಹಾಸಾಮ್ರಾಜ್ಯಗಳು.. 

      20ನೇ ಶತಮಾನ ಪ್ರಪಂಚದ ಬಹುತೇಕ ಸಂಪತ್ಪಭರಿತ ಭೂ ಭಾಗಗಳನ್ನೇಲ್ಲಾ ಬ್ರೀಟಿಷ್ ಸಾಮ್ರಾಜ್ಯ ವಶಪಡಿಸಿಕೊಂಡಿದ್ದ ಸಮಯವದು, ಅಮೇರಿಕಾ ಅದಾಗಲೇ ಸುಪರ್ ಪವರ್ ರಾಷ್ಟ್ರವಾಗಿತ್ತು,ಈ ದೇಶ ಇಗ್ಲೇಂಡ್ ದೇಶದಿಂದ ಸ್ವಾತಂತ್ರ್ಯ ಪಡೆದಿತ್ತು, ಕಾರಣ ಆ ದೇಶವೆಂದು ಇಂಗ್ಲೇಂಡ್ ದೇಶಕ್ಕೆ ಪ್ರತಿಸ್ಪರ್ಧಿಯಾಗಿ ವರ್ತಿಸಲಿಲ್ಲ.. 

    ಕ್ರಿ.ಶ 1887 ಜರ್ಮನ್ ದೇಶ ಏಕೀಕರಣವಾಗಿತ್ತು. ಏಕೀಕರಣದ ನಂತರ ಈ ದೇಶ ವರ್ಷದಿಂದ ವರ್ಷಕ್ಕೆ ಶಿಘ್ರಗತಿಯಲ್ಲಿ ಆರ್ಥಿಕ‌ ಸಂಪತ್ಬರಿತ ದೇಶವಾಗಿ ಗುರುತಿಸಿಕೊಂಡಿತ್ತು. ಅಲ್ಲಿಯವರೆಗೂ ಯೂರೊಪ್ ಖಂಡದ ಸಂಪೂರ್ಣ ವ್ಯವಹಾರವನ್ನ  ಇಂಗ್ಲೇಂಡ್ ದೇಶವೇ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುತ್ತೆ.. 

       ಮೊದಲಿನಿಂದಲೂ ಆಸ್ಟ್ರೀಯಾಹಂಗೇರಿ  ಹಾಗೂ ಜರ್ಮನ್ ಸಾಮ್ರಾಜ್ಯಗಳು ಇಂಗ್ಲೇಂಡ್ ದೇಶದಿಂದ ಹೆಚ್ಚು ವಸ್ತುಗಳನ್ನ ಅಮದು ಮಾಡಿಕೊಳ್ಳುತ್ತಿದ್ದವು, ಕಾರಣ ಈ ದೇಶಗಳು ಯೂರೋಪಖಂಡದ ಅಂತ್ಯಂತ ದೊಡ್ಡ ಶ್ರೀಮಂತ ಸಾಮ್ರಾಜ್ಯಗಳಾಗಿದ್ದವು. ಜರ್ಮನ್ ಏಕೀಕರಣದ ನಂತರದಲ್ಲಿ ಈ ಸಾಮ್ರಾಜ್ಯಗಳು ತಮಗೆ ಅವಶ್ಯವಿರುವ ವಸ್ತುಗಳನ್ನ ತಾವೇ ಸಿದ್ಧಪಡಿಸಿಕೊಂಡು ಇಂಗ್ಲೇಂಡ್ ಗೆ ಬ್ಯೂಸಿನೆಸ್ ಕೊಡುವದನ್ನೇ ನಿಲ್ಲಿಸಿಬಿಡುತ್ತವೆ. ಇಲ್ಲಿ ಜರ್ಮನಿಯ ಈ ನಡೆ ಯಾರಿಗೂ ಕೊಪವನ್ನುಂಟು ಮಾಡಿರಲಿಲ್ಲ  ಕಾರಣ ಹತ್ತಿರವಿರುವ ನಾವೆಲ್ಲಾರು ಸಹೋದರರು ಎನ್ನುವದಾಗಿತ್ತು. ಹೀಗಿರುವಾಗ ಜರ್ಮನಿ ದೇಶವು ಅಮೇರಿಕಾ ಹಾಗೂ ಆಪ್ರೀಕಾದ ಮಾರಕ್ಕೊ ದೇಶಗಳಲ್ಲಿ ತನ್ನ ದೇಶದ ಸಿದ್ಧವಸ್ತುಗಳನ್ನ ಅಗ್ಗ ದರದಲ್ಲಿ ಮಾರಾಟ ಮಾಡಲು ಹೋಗಿ ಇಂಗ್ಲೆಂಡ್,ಫ್ರಾನ್ಸ್ ದೇಶಗಳ ಕೆಂಗಣ್ಣಿಗೆ ಗುರಿಯಾಗುತ್ತದೆ. ಹೀಗೆ ಬೇರೆ ದೇಶಗಳ ಮೇಲೆ ತಮ್ಮ ವ್ಯಾಪಾರ ದೃಷ್ಟಿಯ ಪ್ರಭಾವ ಬೀರಲು ಆರಂಭಿಸುತ್ತದೆ ಜರ್ಮನಿ.

       ಜರ್ಮನಿ ಹೀಗೆ  ಕಾಂಪಿಟೇಶನ್ ನೀಡಲು ಪ್ರಾರಂಭ ಮಾಡಿದ್ದು ಇಂಗ್ಲೆಂಡ್,ಫಾನ್ಸ್ ದೇಶಗಳು ವ್ಯವಹಾರದಲ್ಲಿ  ದೊಡ್ಡ ಮಟ್ಟದ ಹಿನ್ನಡೆ ಅನುಭವಿಸುವಂತೆ ಮಾಡಿರುತ್ತದೆ. ಜರ್ಮನಿ  ಕಚ್ಚಾಪದಾರ್ಥ‌ ಹಾಗೂ ವ್ಯವಹಾರದ ದೃಷ್ಠಿಕೊನದ ಕಾರಣದಿಂದ ಅನೇಕ ದೇಶಗಳನ್ನ ವಸಾಹತು ಮಾಡಿಕೊಳ್ಳಲು ಪ್ರಾರಂಭ ಮಾಡುತ್ತದೆ. ಅದಾಗಲೇ ಜಗತ್ತಿನಾದ್ಯಂತ ಇಂಗ್ಲೆಂಡ್ ದೇಶ ಹೆಚ್ಚು ವಸಾಹತು ಭೂಪ್ರದೇಶಗಳನ್ನ ಆಕ್ರಮಿಸಿಕೊಂಡುಬಿಟ್ಟಿತ್ತು. ಇದರಿಂದ ಹೆಚ್ಚು ವಸಾಹತು ಭೂಪ್ರದೇಶಗಳು ಕೈಗೆ ಸಿಗದಿದ್ದಾಗ ಜರ್ಮನ್ ದೇಶ ಇಂಗ್ಲೇಂಡ್ ದೇಶವನ್ನ ಶಪಿಸುತ್ತಿತ್ತು. ಜರ್ಮನ್ ರಾಜ 2ನೇ ವಿಲಿಯಂ ಕೈಸರ್ ಕಾಲದಲ್ಲಿ ಜರ್ಮನ್ ದೇಶದ ವಸಾಹತುಶಾಹಿತನದ  ನಡೆ ಮತ್ತಷ್ಟು ಕ್ರೂರತೆಯಿಂದ ಕೂಡಿಬಿಟ್ಟಿರುತ್ತದೆ. ಇದರಿಂದ ಅದಾಗಲೇ ಯೂರೊಪ್ ನ ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಿದ್ದ ಇಂಗ್ಲೇಡ್ ದೇಶಕ್ಕೆ ತನ್ನ ವ್ಯವಹಾರ ಮತ್ತು ಅದರ ವಸಾಹತುಗಳು ಕೈಬಿಟ್ಟು ಹೊಗುವ ಆತಂಕ ಶುರುವಾಗುತ್ತದೆ.  ಕೇಲವೇ ವರ್ಷಗಳಲ್ಲಿ ಜರ್ಮನ್ ಹಾಗೂ ಇಂಗ್ಲೇಂಡ್ ಈ ಎರಡು ದೇಶಗಳ ಆರ್ಥಿಕ‌, ವಸಾಹತು,ವ್ಯಾಪಾರದ ಜಿದ್ದಾಜಿದ್ದಿನ ವಿಷಯಗಳು ಅತಿರೇಕ ಎನ್ನುವ ಹಂತ ತಲುಪಿ ಬಿಟ್ಟಿದ್ದವು. ಆದರೂ ಕೂಡಾ ಮೊದಮೊದಲು ಈ ವಿಷಯ ಬೂದಿ‌ಮುಚ್ಚಿದ‌ ಅಗ್ನಿ ಕುಂಡದತ್ತಿತ್ತು. ಯಾವಾಗ ಬಾಲ್ಕನ್ ದೇಶಗಳ‌ ವೈಮನಸ್ಸಿನ‌ ಉಸಿರು ಯೂರೋಪ್ ಖಂಡದಲ್ಲಿ ಬಿರುಗಾಳಿಯನ್ನೇಬ್ಬಿಸಿತ್ತೋ ಇಂತಹ ಸಂಧರ್ಭಕ್ಕಾಗಿ ಕಾದು ಕುಳಿತಿದ್ಧ ಸಮಯ ಮಹಾಯುದ್ಧಗಳ ಜ್ವಾಲಾಗ್ನಿಯನ್ನೆಬ್ಬಿಸಿಬಿಟ್ಟಿತು, ಈ ಜ್ವಾಲಾಗ್ನಿಯಂತಹ ಮಹಾಯುದ್ಧಗಳು ಮುಕ್ತಾಯ ಹಂತಕ್ಕೆ ಬಂದಂತೆಲ್ಲಾ ಯಾರ ಉಹೇಗೂ ಅಸಾಧ್ಯ ಎನ್ನಿಸುವಂತಹ ಅನಾಹುತಗಳು ಸಂಭಂವಿಸಿಬಿಟ್ಟಿದ್ದವು. ಈ ಯುದ್ದಗಳಲ್ಲಿ ಪ್ರಥಮ‌ ಬಾರಿಗೆ ಅಟೊಮೆಟಿಕ ಮಷಿನ್ ಗನ್ನಗಳು,ಮಿಸೈಲ್ ಗಳು, ಖಂಡಾತರ ಕ್ಷಿಪಣಿಗಳು, ಯುದ್ಧವಿಮಾನಗಳು,ಸದ್ದು ಮಾಡಿದ್ದರ ಜೋತೆಗೆ ಯುದ್ದಗಳಿಂದಲೇ ಜನ್ಮತಾಳಿದ್ದ ಜರ್ಮನ್ ಸಾಮ್ರಾಜ್ಯದ ಸೇನೆ ಉಸಿರಾಡುವ ಗಾಳಿಯಲ್ಲೂ ವಿಷಾನಿಲವನ್ನ ಸೇರಿಸಿಬಿಟ್ಟಿತ್ತು, 

      ಈ ಎಲ್ಲಾ ಕ್ರೂರತೆಯ ಪರಿಣಾಮ ಯುದ್ಧಗಳಲ್ಲಿ ಸಾವನ್ನಪ್ಪಿ ಗಾಯಗೊಂಡ ಸೈನಿಕರು, ಮನೆಮಠ  ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾದರು ಇಲ್ಲಿನ ನಾಗರಿಕರು. ವಿಕ್ಷಕರೇ  ಹೀಗೆ ಅನೇಕಾನೇಕ ಸಮಸ್ಯೆಗಳ ಸುಳಿಯನ್ನಪ್ಪಿಕೊಂಡ ಜನಗಳ ಸಂಖ್ಯೆಯೂ ಕೋಟಿ‌ ಕೋಟಿ  ಲೆಕ್ಕಗಳನ್ನೂ ಮೀರಿಬಿಟ್ಟಿತ್ತು. ಹೀಗೆ ಯೂರೋಪ್ ಸ್ವರ್ಗದಂತಿದ್ದ ಬೃಹತ್ ನಗರಗಳೆಲ್ಲಾ  ನರಕದ ಕೂಪಗಳಾಗಿ ಪರಿಣಮಿಸಿದ್ದವು. ಅಷ್ಟಕ್ಕೂ ಈ ಪ್ರಪಂಚ ಯುದ್ದಗಳಿಗೆ ಪ್ರಮುಖ ಕಾರಣವೇನು ಎನ್ನುವದರ ಕುರಿತ ಸ್ಪಷ್ಠ ಮೂನ್ಸೂಚನೆಯನ್ನ ಪ್ರಾರಂಭದಲ್ಲೇ  ತಮಗೆ  ತಿಳಿಸಿದ್ದೇನೆ. ಇನ್ನೂ ಈ ಯುದ್ದಗಳಿಗೆ ತತ್ತಕ್ಷಣದ ಕಾರಣಗಳಾ ಬಾಲ್ಕನ್ ಪ್ರದೇಶಗಳ ಸಮಸ್ಯೆಗಳೇನು ?  ಈ ಯುದ್ಧಗಳಲ್ಲಿ ಭಾರತದ ಪಾತ್ರವೇನು ?  ಅಷ್ಟಕ್ಕೂ ಯೂರೋಪ್ ಖಂಡದ ಅರಾಜಕತೆಯ ಪ್ರಮುಖ ಇತಿಹಾಸವೇನು ? ಇದರಲ್ಲಿ ಆಸ್ಟ್ರೀಯಾಹಂಗೇರಿ, ರಷ್ಯಾ ಸಾಮ್ರಾಜ್ಯ ಹಾಗೂ ಸೃರ್ಬಿಯಾ,ಬೊಸ್ನಿಯಾ ದೇಶಗಳ ಪಾತ್ರವೇನು ? ಹಾಗೆಯೇ ಯೂರೊಪಗೆ ಸಿಮೀತವಾಗಿದ್ದ ಈ ಯುದ್ಧಗಳಲ್ಲಿ ಅಮೇರಿಕಾ,ಆಸ್ಟ್ರೇಲಿಯಾ,ಜಪಾನ್, ಚೀನಾ,ಭಾರತದ ರಾಜರುಗಳು ಸೇರಿದಂತೆ, ಆಪ್ರಿಕಾ ದೇಶಗಳು ಕೂಡಾ ಈ ಯುದ್ಧಗಳಲ್ಲಿ ಪಾಲ್ಗೊಳ್ಳಲು ಕಾಣವೇನು.? ಎನ್ನುವ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ.. 

ಮಾಹಿತಿ (ವಿಕಿಪಿಡಿಯಾ ):- 
ಸಂಗ್ರಹ ಮತ್ತು ಸಮ್ಮಿಶ್ರ ಲೇಖನ :- ಶಿವಲಿಂಗಯ್ಯ ಕುಲಕರ್ಣಿ 

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...