Skip to main content

ಬಲೂಚಿಸ್ತಾನ VS ಪಾಕಿಸ್ತಾನ ಒಂದು ಆರ್ಟಿಕಲ್

                                        


ನಮಸ್ಕಾರ ಸ್ನೇಹಿತರೇ ಸಿಂಧು ನದಿ ನಾಗರಿಕತೆಗೆ ಸಮನಾದ ನಾಗರಿಕತೆಯೊಂದು ಬಲೂಚಿಸ್ತಾನದಲ್ಲಿದೆ, ಇದರ ಹೆಸರು ಮೇಹರಗಢ್ ನಾಗರಿಕತೆ ಇದು ಕ್ರಿ.ಪೂ 7000 ವರ್ಷಗಳ ಇತಿಹಾಸ ಹೊಂದಿದೆ. ಹಾಗೂ ಇಲ್ಲಿನ ಕೆಲವು ಬುಡಕಟ್ಟುಗಳ ಜನಾಂಗಗಳ ಇತಿಹಾಸ ಬಾರತದ ದಕ್ಷಿಣ ಭಾರತದಲ್ಲಿನ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದೆ. ಇಂತಹ ಹಲವು ಅಂಶಗಳಲ್ಲಿ ವಿಶೇಷತೆ ಹೊಂದಿರುವ ಬಲೂಚಿಸ್ತಾನದ ಪರಿಸ್ಥಿತಿ ಈಗ ಹೇಗಿದೆ ಎಂದು ನಾವು ಈ ವಿಡಿಯೋದಲ್ಲಿ ತಿಳಿಯೋಣ.

ಮೆಹರಗಢ್ ನಾಗರಿಕತೆ ಬೋಲಾನ್ ದಡದಲ್ಲಿ ಕಂಡುಬರುತ್ತದೆ. ಇದು  ಬಲೂಚಿಸ್ತಾನದಲ್ಲಿ ಕ್ರಿ.ಪೂ.7000 ರಿಂದ ಕ್ರಿ.ಪೂ 2500 ವರೆಗೆ ಕಂಡುಬರುತ್ತದೆ. ಈ ನಾಗರಿಕತೆಯೂ ಸಿಂಧೂ ನಾಗರಿಕತೆ ಪೂರ್ವದಲ್ಲಿ ಕಂಡುಬರುತ್ತದೆ. ಈ ನಾಗರಿಕತೆಯೂ ಕೃಷಿಗೆ ಪಶುಸಂಗೋಪನೆಗೆ ಸಾಕಷ್ಟು ಕೊಡುಗೆ ನೀಡಿದೆ. ಕ್ರಿ.ಪೂ 5000 ಹೊತ್ತಿಗೆ ಮೇಹರಗದ ಮಧ್ಯ ಏಷ್ಯಾದೊಂದಿಗೆ ಹಾಗೂ ಇತರ ಭೂಪ್ರದೇಶಗಳೊಂದಿಗೆ ಸರಕುಗಳನ್ನು ವಿನಿಮಯ ಮಾಡಿಕೊಳ್ಳಿ ಮಾಡಿಕೊಳ್ಳುತ್ತಿತ್ತು.

ಅಂದಹಾಗೆ ಸ್ಥಳೀಯ ಕೇಳ್ವು ಬುಡಕಟ್ಟುಗಳು ಡ್ರಾವಿಡ ಜನಾಂಗಕ್ಕೆ ಸೇರಿದೆ ಎಂದು ಹೇಳಿದರು. ಭಾರತದ ದ್ರಾವಿಡ ಭಾಷೆಗಳು ದಕ್ಷಿಣ ಏಷ್ಯಾದ 70 ಬಾಷೆಗಳ ಕುಟುಂಬವಾಗಿದೆ. ಮುಖ್ಯವಾಗಿ ದಕ್ಷಿಣ ಭಾರತ 5 ರಾಜ್ಯಗಳ ಜೊತೆಗೆ ಪಾಕಿಸ್ತಾನದ ಬಲೂಚಿಸ್ತಾನ "ಬ್ರಾಹುಯಿ" ಭಾಷೆ ಸೇರಿದೆ. ಬಲೂಚಿಗರ ಸಾಂಸೃತಿಕ ಜೀವನ ಶೈಲಿಯು ಬಹಳ ಪ್ರಾಚೀನವಾದುದು ಶ್ರೀಮಂತವಾದುದು. ಪಾಕಿಸ್ತಾನ ಬಲೂಚಿಸ್ತಾನದಿಂದ ಹೆಚ್ಚು ಗುರುತಿಸಲು ಪ್ರಯತ್ನಿಸುತ್ತದೆ. 

ಅಂದಹಾಗೆ ಈ ಬಲೂಚಿಸ್ತಾನ ತನ್ನ ಇತಿಹಾಸದಿಂದಲೂ ಸಂಪೂರ್ಣ ಹೋರಾಟಗಳನ್ನೇ ಮಾಡಿಕೊಂಡಿದೆ, ತಾನು ಅನುಭವಿಸಿದ ಹೋರಾಟಕ್ಕೆ ಮನ್ನಣೆ ಸಿಗುತ್ತದೆ ಎಂದು ಎನ್ನುತ್ತಿರುವಾಗಲೇ 1948 ರಲ್ಲಿ ಪಾಕಿಸ್ತಾನದ ಹಿಡಿತಕ್ಕೆ ಬರುತ್ತದೆ. ಕಾರಣ ಬ್ರಿಟಿಷರು ತಾವು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಸಂದರ್ಭದಲ್ಲಿ ಪಾಕಿಸ್ತಾನವನ್ನು ಹುಟ್ಟುಹಾಕಿದ್ದರು, ಅದರಂತೆ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ತಮ್ಮ ದೋರಣೆಯನ್ನ ಹೊಂದಿದ್ದರು ಹೀಗೆ ಪಾಕಿಸ್ತಾನಕ್ಕೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬಂಗಾಳ ಪ್ರಾಂತವನ್ನ ಒಡೆದು ಎರಡು ಭಾಗ ಮಾಡಿ ಒಂದು ಭಾಗವನ್ನ ಪಾಕಿಸ್ತಾನಕ್ಕೆ ಕೊಟ್ಟು ಪಶ್ವಿಮದಲ್ಲಿ ಪಂಜಾಬನ್ನು ಎರಡು ಭಾಗ ಮಾಡಿ ಒಂದು ದೊಡ್ಡ ಭೂಭಾಗವನ್ನ ಭಾಗ ಮಾಡಿ ಪಾಕಿಸ್ತಾನಕ್ಕೆ ನೀಡ್ತಾರೆ ಈ ಬ್ರೀಟಿಷರುಇದೇ ತರಹಾ ಬಲೂಚಿಸ್ತಾನವನ್ನ ಪಾಕಿಸ್ತಾನಕ್ಕೆ ನೀಡ್ತಾರೆ. ಅಲ್ಲಿಂದ ಬಲುಚಿಸ್ತಾನ ಹೋರಾಟದ ಹೊಸ ಅಧ್ಯಾಯ ಶುರುವಾಗುತ್ತದೆ. ಇನ್ನೊಂದು ಅಂಶದಿಂದ ನೋಡುವುದಾದರರೆ ನೇಪಾಳಕ್ಕೆ ಹೇಗೆ ಸ್ವತಂತ್ರ್ಯ ರಾಜಪ್ರಭುತ್ವ ನೀಡಿರ್ತಾರೊ ಅದೇ ತರಹದ ಬ್ರಿಟಿಷರು ಬಲೂಚಿಸ್ತಾನದ ಕಲಾತ್ ರಾಜ್ಯಕ್ಕೆ ಸಾರ್ವಭೌಮ ಆಡಳಿತದ ಮನ್ನಣೆ ನೀಡಲಾಯಿತು. 

ಅಂದಹಾಗೆ ಭಾರತ ಮತ್ತು ಪಾಕಿಸ್ತಾನದ ಭಾಗ ಮಾಡಿದ ಬ್ರಿಟಿಷರು ಇವುಗಳಿಗೆ ಸ್ವತಂತ್ರ ಘೋಷಣೆ ಮಾಡಿದ ನಂತರ ಕಲಾತ್ ರಾಜಪ್ರಭುತ್ವವು ಆಯಾಕಟ್ಟಿನ ಭೂಪ್ರದೇಶವಾದ ತನ್ನ ಭೂಮಿಯನ್ನ ಭಾರತ ಪಾಕಿಸ್ತಾನ ಯಾರೊಂದಿಗೂ ಸೇರಿಸಲು ಇಷ್ಟ ಪಡದೆ ಕಲಾತ್ ರಾಜ್ಯ 1947 ಆಗಸ್ಟ್ 11 ರಂದು ಸ್ವತಂತ್ರ್ಯವನ್ನ ಪ್ರಕಟಿಸಿಕೊಂಡು ಸ್ವತಂತ್ರ್ಯವಾಗುತ್ತದೆ. ಆದರೆ ಪರಿಸ್ಥಿತಿ ಬೇಗ ಬದಲಾಗುತ್ತದೆ. ಪಾಕಿಸ್ತಾನವು ಕಲಾತ್ ರಾಜ್ಯ ತನ್ನ ಪಕ್ಕದಲ್ಲಿ ಉತ್ತಮ ಭೌಗೋಳಿಕ ಭೂಪ್ರದೇಶವನ್ನು ತನಗೆ ಸೇರಬೇಕು ಎಂದು ಒತ್ತಾಯಿಸುತ್ತದೆ. ಪಾಕಿಸ್ತಾನ 1948 ಮಾರ್ಚ್ ತಿಂಗಳಿನಲ್ಲಿ ತನ್ನ ಸೇನಾ ಒತ್ತಡವನ್ನು ಹೆಚ್ಚು ಮಾಡುತ್ತದೆ . ಕೊನೆಯದಾಗಿ 1948 ಮಾರ್ಚ್ 27 ರಂದು ಮೀರ್‌ ಅಹ್ಮದ್ ಯಾರ್ ಖಾನ್‌ ಪಾಕಿಸ್ತಾನಕ್ಕೆ ವಿಲೀನ ಒಪ್ಪಂದಕ್ಕೆ ಸಹಿ ಹಾಕುತ್ತಾನೆ. 

ಅಂದಹಾಗೆ ಬಲೂಚ್ ನಾಯಕರು ಮತ್ತು ರಾಜವಂಶದೊಳಗೆ ಬಿನ್ನಾಭಿಪ್ರಾಯವು ಇದ್ದವು. ಬಲೂಚ್ ನಾಯಕರು ಪಾಕಿಸ್ತಾನ ಸೇರುವುದಕ್ಕೆ ವಿರೋಧಿಸಿದ್ದರು ಮತ್ತು ಹಲವು ಹಂತಗಳಲ್ಲಿ 1950,60,70,2000 ಹೀಗೆ ಬಂಡಾಯಗಳಾಗಿದ್ದಾರೆ. ನ್ಯಾಯಯುತ ಬೇಡಿಕೆಗಾಗಿ ನಡೆಯುತ್ತಿದೆ. ..


*ಪಾಕಿಸ್ತಾನಕ್ಕೆ ಚಲೂಚಿಸ್ತಾನ ಯಾಕೆ ಅನಿವಾರ್ಯ..

ಸ್ನೇಹತರೇ, ಬಲೂಚಿಸ್ತಾನದಲ್ಲಿ ಸಾಕಷ್ಟು ಪ್ರಾಕೃತಿಕ ಸಂಪತ್ತಿದೆ, ಪ್ರಕೃತಿಕ ಅನೀಲ,ಚಿಕ್ಕ,ಕಲ್ಲಿದ್ದರು,ತಾಮ್ರ ಗ್ವಾದರ ಸಮುದ್ರ ಬಂದರು ಇವೆಲ್ಲವೂ ಸಾಕಷ್ಟಿದ್ದರು ಸ್ಥಳದ ಅಭಿವೃದ್ಧಿ ಕಡಿಮೆ ಎಂದು ಅಸಮಾಧಾನ ಹಾಗೂ ವಿರೋಧಿಸಲಾಗುತ್ತಿದೆ.

* ಪ್ರಸ್ತುತ ಜಿಯೋಪಾಲಿಟಿಕ್ಸ್ ಬದಲಾದರೆ ಪಾಕಿಸ್ತಾನಕ್ಕೆ ತೊಂದರೆಗಳು  

  •  ಗ್ವಾದರ ಬಂಧರು ಅಂತರಾಷ್ಟ್ರೀಯ ಗಮನ ಸೆಳೆಯುತ್ತಿದೆ.
  • ಭದ್ರತಾ ಸಮಸ್ಯೆಗಳು ಹೆಚ್ಚಾಗಿವೆ.
  •  ಬಹಳಷ್ಟು ಪ್ರದೇಶದ  ಮಹತ್ವ.
  • ಪಾಕಿಸ್ತಾನ ಪಶ್ವಿಮದ ಭೂ ಮಾರ್ಗಕ್ಕೆ ಸಮಸ್ಯೆ.
  • ಪಾಕಿಸ್ತಾನದ ಅರ್ಧಕಿಂತಲೂ ಹೆಚ್ಚು ಭೂಪ್ರದೇಶ ಬಲೂಚಿಸ್ತಾನದಲ್ಲಿದೆ.
  • ಬಲೂಚಿಸ್ತಾನದ ಸ್ವತಂತ್ರ್ಯವಾದರೆ ಇದಕ್ಕೆ ಇರಾನ್‌ ಗಡಿ,ಅಫ್ಘಾನಿಸ್ತಾನ,ಅರಬ್ಬಿಸಮುದ್ರ ಇವರನ್ನು ಗಡಿಯಾಗಿಸಿಕೊಳ್ಳುತ್ತದೆ.

* ಗ್ವಾದರ ಬಂಧರು 

 ಗ್ವಾದರನ್ನ ಪಾಕಿಸ್ತಾನದ ಗೇಮ್‌ ಚೇಂಜರ್‌ ಎಂದು ಕರೆಯಲಾಗುತ್ತಿದೆ. ಇದರಿಂದ
  • ಮಧ್ಯ ಏಷ್ಯಾ,ಚೀನಾ,ಮಧ್ಯಪೂರ್ವ ದೇಶಗಳಿಗೆ ಸಮುದ್ರದ ದಾರಿ ಮಾಡಿಕೊಂಡಿದೆ.
  • ವ್ಯಾಪಾರ, ತೈಲಸಾಕಾಣಿಕೆ, ನೌಕಾಪಡೆಗೆ ಮಹತ್ವ 
  •  ಚೀನಾ ಪಾಕಿಸ್ತಾನದ ಆರ್ಥಿಕ ಕಾರಿಡಾರ್ ಯೋಜನೆ ಇದೆ ಬಲೂಚಿಸ್ತಾನದ ಮುಲಕ ಅಭಿವೃದ್ಧಿ ಪಡಿಸಲಾಗುತ್ತಿದೆ.


* ಸರಳವಾಗಿ ಹೇಳುವುದಾದರೆ ಬಲೂಚಿಸ್ತಾನ ಇಲ್ಲದ ಪಾಕಿಸ್ತಾನ 

  • ಸಮುದ್ರದ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತದೆ.
  • ಬಹುಸಂಪತ್ತು ಕಳೆದುಕೊಳ್ಳುತ್ತದೆ
  • ತಂತ್ರಜ್ಞಾನದ ಗಡಿ ದುರ್ಬಲವಾಗಿದೆ.

ಕಾರಣ ಬಲೂಚಿಸ್ತಾನ ಪಾಕಿಸ್ತಾನ ಸ್ಟ್ರಾಟೆಜಿಕ್‌ ಹೃದಯಭಾಗವಾಗಿದೆ.


   

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...