ಉತ್ತರಕರ್ನಾಟಕ – ಇದು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ, ಇದು ಶ್ರಮ, ತಾಳ್ಮೆ,ಶಾಂತಿ ಮತ್ತು ಜ್ಞಾನದ ಪವಿತ್ರಭೂಮಿ. ಆದರೂ ಈ ನಾಡು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸತ್ಯವನ್ನು ಅನೇಕರು ಮನಗಂಡಿದ್ದಾರೆ.
ಈ ನಾಡಿನ ಬಡತನವೂ ಶ್ರಮದ ಫಲವಲ್ಲ,ಅದುನಿರ್ಲಕ್ಷ್ಯದಶಾಪ. ಸಾವಿರಾರು ಎಕರೆ ಭೂಸಂಪತ್ತು, ಮಾನವಶಕ್ತಿ ಇರುವ ಈನಾಡಿನಲ್ಲಿ ಟೇಕ್ನಾಲಜಿಯ ಆಧಾರಿತ ಉದ್ಯಮಗಳಿಲ್ಲ,ಸಂಶೋಧನಾ ಕೇಂದ್ರಗಳಿಲ್ಲ, ನಾಡಿನಪರಂಪರೆಯನ್ನುಗೌರವಿಸುವ ಜವಾಬ್ದಾರಿಗಳಿಲ್ಲ. ಏಕೆ? "ಸಮಗ್ರ ಕರ್ನಾಟಕ ಸಾವಿರಾರು ವರ್ಷಗಳ ಇತಿಹಾಸವನ್ನು ಹೊತ್ತು ಬಂದಿದೆ. ಹಳೆ ಯುಗದಲ್ಲಿ ಇಂದಿನ ವಿಜ್ಞಾನಕ್ಕೂ ಮೀರಿ ಇಲ್ಲಿ ಜ್ಞಾನೋದಯವಿತ್ತು. ಇಲ್ಲಿಯವರು ಹೆಮ್ಮೆಪಡುವಂತೆ ಜ್ಞಾನ, ಸಂಸ್ಕೃತಿ ಮತ್ತು ಶ್ರಮದ ಹಾದಿಯಲ್ಲಿ ನಡೆದುಕೊಂಡವರು.
ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ಈ ನಾಡು ಹರಡಿದ ಬೆಳಕು ಈಗ ಎಲ್ಲೋ ಮರೆಯಾಗಿದೆ. ಕನ್ನಡ ನಾಡಿನ ಸನಾತನ ಶರಣರು ಕೊಟ್ಟ ಜ್ಞಾನಕ್ಕೆ ಗ್ರಹಣ ಹಿಡಿದಂತಿದೆ ಇದು ಹೀಗೆ ಮುಂದುವರೆಯಬಾರದು.
ಇಂದು ಈ ನಾಡು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿನ ಜನರ ಜ್ಞಾನವು ಅನೇಕ ವಚನಗಳ ತಾತ್ವಿಕ ಚಿಂತನೆಗಳ ಮೂಲಕ ಇಂದು ಕೂಡಾ ಸಾರ್ವಜನಿಕರ ಮೇಲೆ ಪ್ರಭಾವ ಬಿರುತ್ತಿಲೇ ಇದೆ. ಈ ತಾತ್ವಿಕ ಚಿಂತನೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸ್ಪರ್ಶ ನೀಡಲು ನಮ್ಮ ಸರ್ಕಾರಗಳು ಅವಕಾಶಗಳನ್ನ ಮಾಡಿಕೊಡಬೇಕಿದೆ. ಇಲ್ಲಿನ ಜನರ ಶ್ರಮವನ್ನು ದುಡಿಮೆ ಕಾಯಕ ಎಂದೇ ನೋಡಿ ಹಿಂದೆ ತಳ್ಳದೆ ಕೇಂದ್ರ, ರಾಜ್ಯ ಸರ್ಕಾರಗಳು ಈ ನಾಡಿಗೆ ಬೇಕಾದಷ್ಟು ತಾಂತ್ರಿಕ ಬೆಂಬಲ ನೀಡಬೇಕಿದೆ ಜೊತೆಗೆ Aerospace, Robotics, AI, Defence
Technology ಅಂತಹ ಆಧುನಿಕ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕದ ಯುವಕರಿಗೆ ಅವಕಾಶ ಸಿಗುವಂತೆ ಮಾಡಬೇಕಾಗಿದೆ.
ಈ ನಾಡಿನಲ್ಲಿ:
· ಸಾವಿರಾರು ಎಕರೆ ಅನೇಕ ಉಪಯುಕ್ತ ಭೂಮಿ ಇದೆ.
· ಶತಮಾನಗಳಿಂದ ರೂಪುಗೊಂಡ ಜ್ಞಾನ ಪರಂಪರೆ ತವರು ಈ ಭೂಮಿ ಆಗಿದೆ.
· ತಾತ್ವಿಕ ಚಿಂತನೆಯ ನಾಡಾಗಿರುವ ಕರುನಾಡಿನಲ್ಲಿ ಅನೇಕ ಶರಣರ ಶರಣೆಯರು, ಕಾಯಕಯೋಗಿಗಳು ಜನ್ಮತಾಳಿದ ಪುಣ್ಯಭೂಮಿ ಇದು ಅವರ ಆಶಿರ್ವಾದ ಇಲ್ಲಿನ ಜನರ ಮೇಲಿದೆ ಹಾಗಾಗಿ ಕಾಯಕವೇ ಕೈಲಾಸ ಎನ್ನುವ ತತ್ವದಡಿ ಇಲ್ಲಿನ ಜನ ಜೀವನ ಸಾಗಿಸುತ್ತಿದ್ದಾರೆ.
ಆದರೂ ಏಕೆ ಈ ನಾಡಿಗೆ ಭಾರತೀಯ ಏರೋಸ್ಪೇಸ್ನಂತಹ ಯೋಜನೆಗಳು ಬರಬಾರದು?
ಇದು ಉತ್ತರ ಕರ್ನಾಟಕದ ಸಮಸ್ಯೆ ಮಾತ್ರವಲ್ಲ. ಇದು ಭಾರತದ ಸಮಸ್ಯೆ. ದೇಶದ ಪ್ರತಿಯೊಂದು ಭಾಗವೂ ಸಮಾನವಾಗಿ ಬೆಳೆಯಬೇಕಾದಾಗಿದೆ, ಇಲ್ಲವಾದರೇ ಈ ನಿರ್ಲಕ್ಷ್ಯಕ್ಕೆ ಒಳಗಾದ ಭಾಗದ ಶೋಷಣೆಯು ರಾಷ್ಟ್ರದ ಸಮಗ್ರತೆಯನ್ನೇ ಪ್ರಶ್ನಿಸುತ್ತದೆ.
ಸರ್ಕಾರಗಳಲ್ಲಿ ವಿನಂತಿ: ಇಂಡಿಯನ್ ಏರೋಸ್ಪೇಸ್ ಈಂತಹ ಸಂಸ್ಥೆಗಳನ್ನು ಕರ್ನಾಟಕ ನಿರ್ಲಕ್ಕೆ ಒಳಗಾದ ಸಂಸ್ಕಾರಯುತ ಇತಿಹಾಸ ತುಂಬಿದ ಸಕಲ ಸೌಕರ್ಯವುಳ್ಳ ಉತ್ತರ ಕರ್ನಾಟಕದ ಭಾಗದಲ್ಲಿಸ್ಥಾಪಿಸಬೇಕು. ಇದು ಬಡತನ ನಿವಾರಣೆಯ ಪ್ರಶ್ನೆಅಲ್ಲ. ಇದು ನವ ಭಾರತ ನಿರ್ಮಾಣದ ಮೊದಲಹೆಜ್ಜೆಎಂದೆ ತಿಳಿಯಬೇಕಾಗಿ ವಿನಂತಿ. ಈ ಕನ್ನಡ ನಾಡಿನ ಪ್ರತಿ ಜಿಲ್ಲೆಗಳ ಜನರ ರಕ್ತದಲ್ಲಿ ದೇಶ ಭಕ್ತಿ, ಶ್ರದ್ಧೆ, ಶ್ರಮ, ಶಾಂತಿ ಮತ್ತು ಕಾಯಕ ತತ್ವ ಹಾಗೂ ಸತತ ಹೋರಾಟದ ಗುರುತುಗಳಿವೆ. ಅದನ್ನುಗುರುತಿಸಿ, ಈ ಭಾಗದ ಯುವಶಕ್ತಿಯನ್ನ, ಬುದ್ಧಿವಂತಿಕೆಯನ್ನುಅಭಿವೃದ್ಧಿಗೆ ಬಳಸುವ ಸಮಯ ಬಂದಿದೆ.
ದ್ವೇಷ, ಅಸೂಹೆಯಿಲ್ಲದ ಜವಾಬ್ದಾರಿಯುತ ಯುವ ಅಡಿಯಾಳಾಗಿರುವ ಕರುನಾಡಿನ ಅನೇಕ ಯುವಕರ ಕೂಗಿನ ದ್ವನಿಯು ಈ ಆರ್ಟಿಕಲ್ ಆಗಿದೆ. ನಾವು ಈ ಭಾಗದ ಜನರು ಸರ್ಕಾರಗಳನ್ನ ಕೇಳುವುದು ಕೇವಲ ನ್ಯಾಯ ಮಾತ್ರ.
ಕನ್ನಡಿಗರಿಗಾಗಿ ಒಂದು ಕೊನೆಯ ಸಾಲು
"ಕರುನಾಡಿನ ಜ್ಞಾನದ ಕಲೆಯು ದೇಹಕ್ಕೆ ಅಂಟಿದರೆ ಹೊಗಬಹುದು, ಆದರೆ ರಕ್ತಕ್ಕೆ ಅಂಟಿದರೆ ಕಾರಣ ಅದು ಹೋಗುವುದಿಲ್ಲ. ಅದು ವಂಶಪಾರಂಪರಿಕವಾಗಿ ಮುಂದಿನ ಪೀಳಿಗೆಗೆ ಸಾಗುತ್ತದೆ. ಅದನ್ನು ನಾವು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು... Be Positive."
" ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಇದು ಕನ್ನಡಿಗರ ನಡೆ. ಇದನ್ನ ನಮ್ಮ ನಾಡನ್ನು ಆಳುವ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕಿದೆ..