🌿 ಅವರಿಗೂ ಒಳ್ಳೆಯದು ಆಗಲಿ… ನಮ್ಮಿಗೂ ಒಳ್ಳೆಯ ಸ್ನೇಹ ಸಿಗಲಿ 🌿
– ಲೇಖನ: ಶಿವಲಿಂಗಯ್ಯ ಕುಲಕರ್ಣಿ, ಕಾವ್ಯ ಡಿಜಿಟಲ್ಸ್ ಗಂಗಾವತಿ
ಒಬ್ಬರನ್ನು ನಾವೆಷ್ಟು ಪ್ರೀತಿಸುತ್ತೇವೆ… ಅವರು ನಮ್ಮ ಬದುಕಿನ ಭಾಗವಾಗಿರುವಾಗಿ ಉಳಿಯುತ್ತಾರಾ ಕಂಡಿತ ಇಲ್ಲ, ನಮ್ಮ ಹೃದಯದಲ್ಲಿ ಮಾತ್ರ ಶ್ರೇದ್ಧಾಪೂರ್ವಕವಾಗಿ ಉಳಿಯುತ್ತಾರೆ...
ನಾವು ಬಯಸೋದು ಅವರು ಸದಾ ಸಂತೋಷವಾಗಿರಲಿ, ಆರೋಗ್ಯವಾಗಿರಲಿ, ಅವರ ಜೀವನ ಚೆನ್ನಾಗಿ ಬೆಳೆಯಲಿ ಎನ್ನುವದಷ್ಟೆ .
ನಾವು ಮಾತನಾಡಬೇಕು, ಖುಷಿ ವಿಚಾರ ಹಂಚಿಕೊಳ್ಳಬೇಕು, ಅವರ ಬಗ್ಗೆ ನಾವು ಶ್ರದ್ಧೆ ಈಟ್ಟಿದ್ದೇವೆ ಎಂದು ತಿಳಿದು ಅವರ ಜೀವನವು ಕೂಡಾ ಬದಲಾಗಬಹುದು ಎಂದು ಹಲವಾರು ಬಾರಿ ಪ್ರಯತ್ನಿಸುತ್ತೇವೆ.
ಆದರೆ ಕೆಲವೊಮ್ಮೆ... ಈ ಒಳ್ಳೆಯ ಭಾವನೆ ಅಪಾರ್ಥಗಳಾಗುತ್ತದೆ.
ಮನದ ಮಾತು ತಿಳಿಯದ misunderstandingಗಳು ಉಂಟಾಗುತ್ತವೆ.
ಅವರು ದೂರವಾದರೂ, ನಾವು ಒಳಗೊಳಗೇ ಹೃದಯದಿಂದ ಅವರಿಗೆ ಒಳ್ಳೆಯದನ್ನು ಬಯಸುತ್ತೇವೆ.
ಅವರಿಗೆ ನಾವು ಏನು ಮಾಡುವದು ಕೂಡಾ ಬೇಡವಾದರು ನಾವು ತೋರಿಸುವ ಕಾಳಜಿ, ಪ್ರೀತಿಯಿಂದಲೂ ಕೂಡಾ ಅವರ ಜೀವನ ಬದಲಾಗಬಹುದು, ಅವರ ಪ್ರತಿಕ್ರಿಯೆ ಕಮ್ಮಿಯಾಗಬಹುದು.
ಆದರೂ… ನಾವು ಬದಲಾಗಲ್ಲ ಏಕೆಂದರೆ ಅವರ ಸಂತೋಷವೇ ಕೆಲವು ಬಾರಿ ನಮಗೆ ಮುಖ್ಯವಾಗುತ್ತದೆ.
ಏಕೆಂದರೆ ಅದು ಸ್ವಾರ್ಥದ ಪ್ರೀತಿ ಸ್ನೇಹ ಅಲ್ಲ. ಅದು ಪ್ರಾರ್ಥನೆಯ ಭಾವನಾತ್ಮಕ ಭಾಂಧವ್ಯ.
ನಿಜವಾದ ಸ್ನೇಹ,ಪ್ರೀತಿ ಭಾಂದವ್ಯ ಸತ್ಯವಾದರೆ ಅದು ಅಂತರಾತ್ಮಕ್ಕೆ ಜಾಗೃತಗೊಳಿಸುತ್ತಲೇ ಇರುತ್ತವೆ, ಅದನ್ನ ಅನಾವಶ್ಯಕ ತಪ್ಪುಕಲ್ಪನೆಗಳೊಂದಿಗೆ ಹೋಲಿಕೆ ಮಾಡಬಾರದು.
ಒಂದು ನಿಷ್ಕಲ್ಮಷ ಪ್ರೀತಿಯ ಸ್ನೇಹ ಭಾಂದವ್ಯ ಅನೇಕ ಅದ್ಬುತ ಸೃಜಲನಾತ್ಮಕ ವಿಚಾರಗಳನ್ನ ಸೃಷ್ಟಿಸಬಹುದು ಅನೇಕ ಬದಲಾವಣೆಗಳನ್ನು ಕೂಡಾ ತರಬಹುದು.
🌸
"ಅವರು ನಮ್ಮ ಬದುಕಿನಲ್ಲಿ ಇರಲಿ-ಇರದಿರಲಿ, ಅವರಿಗೂ ಒಳ್ಳೆಯದು ಆಗಲಿ.
ನಮ್ಮ ಬದುಕಿಗೂ ಉತ್ತಮ ಸ್ನೇಹಿತರು ಸಿಗಲಿ, ಶುದ್ಧ ಹೃದಯದವರು ಸಿಗಲಿ.
ಯಾರು ಹತ್ತಿರದಲ್ಲಿದ್ದರೂ, ದೂರದಲ್ಲಿದ್ದರೂ…
ಸ್ನೇಹ ಎಂದರೆ ಮನಸ್ಸಿನಲ್ಲಿ ನೆಲೆಸಿದ ಬೆಳಕು ಮಾತ್ರ ಅದು ಸದಾ ಹೃದಯಸ್ಪರ್ಶಿಯಾಗಿರುತ್ತದೆ .🌸