ನಾನು ಜೀವನದಲ್ಲಿ ಗೊಂದಲದಿಂದ, ದಿಕ್ಕತೋಚದ ಸ್ಥಿತಿಯಿಂದ ಕಳೆಯುತ್ತಿದ್ದ ಸಂದರ್ಭದಲ್ಲೇ ಈ ಸಮುದಾಯದಲ್ಲಿ ಓದಿದ ನಿಜವಾದ ಅನುಭವಗಳು ನನಗೆ ದಾರಿ ತೋರಿಸಿದವು.
ನೀವು ಶೇರ್ ಮಾಡಿರುವ ವಿಷಯಗಳು ಅಚ್ಚುಮೆಚ್ಚಾದ ಸತ್ಯಗಳು. ಅವುಗಳು ನಮ್ಮ ಸಂಸ್ಥೆ 'ಕಾವ್ಯ ಡಿಜಿಟಲ್ ಜಿವಿಟಿ'ಗೂ ಹಾಗೂ ನನ್ನ ಜೀವನಕ್ಕೂ ಆತ್ಮಾವಲೋಕನ ಮಾಡುವ ಅವಕಾಶ ಮಾಡಿಕೊಟ್ಟಿವೆ. ನಿಮ್ಮ ಮಾತುಗಳು ನನಗೆ ಜೀವನದಲ್ಲಿ ಮತ್ತೊಮ್ಮೆ ನಿಲ್ಲಲು, ಯೋಚಿಸಲು ಮತ್ತು ಬದುಕನ್ನು ಹೊಸ ದೃಷ್ಟಿಯಿಂದ ನೋಡುವ ಧೈರ್ಯವನ್ನ ಹೆಚ್ಚಿಸಿದವು.
ಇಂದು ನಾನು ಮನಸ್ಸಿನಲ್ಲಿ ನಿಧಾನವಾಗಿ ನೆಮ್ಮದಿಯನ್ನು ಕಾಣುತ್ತಿದ್ದೇನೆ. ನಮ್ಮ ಸಂಸ್ಥೆ ಒಂದು ಚಿಕ್ಕ ವ್ಯಾಪಾರ ಸಂಸ್ಥೆಯಾದರೂ, ಅನೇಕ ಜನರಿಗೆ ಕೆಲಸ ನೀಡಿದೆ ಸತ್ಯ, ನೀವು ಇದನ್ನು ಗಮನಿಸಿದರಲ್ಲದೆ ಗುರುತಿಸಿದ್ದೀರಿ ಎಂಬುದು ನಮಗೆ ಹೆಮ್ಮೆ ಉಂಟುಮಾಡುತ್ತದೆ. ನಿಮ್ಮ ಮಾಹಿತಿ ಮತ್ತು ಪ್ರಾಮಾಣಿಕ ಅಭಿಪ್ರಾಯಗಳಿಂದ ನಮ್ಮ ಪರಿಶ್ರಮಕ್ಕೆ ಬೆಲೆ ಸಿಕ್ಕಂತಾಯ್ತು.
ಕೆಲವೊಮ್ಮೆ, ನಮ್ಮನ್ನು ಎಂದೂ ಭೇಟಿಯಾಗದವರು ಹೇಳುವ ಒಂದೊಂದು ನಿಖರವಾದ ಮಾತು ಸಹ ಒಬ್ಬರ ಜೀವನವನ್ನ ಬದಲಾಯಿಸಬಲ್ಲದು – ಅದು ನನ್ನ ಬದುಕಿನಲ್ಲಿ ಈ ಸಮುದಾಯದಿಂದಾಗಿ ಸಾಧ್ಯವಾಯಿತು.
ನಮ್ಮ ಜೀವನದಲ್ಲಿ ನಡೆದ ಕೆಲ ಅನಿರೀಕ್ಷಿತ ಘಟನೆಗಳಿಂದ ಹೊರಬರಲು ಸಾಕಷ್ಟು ದಿನ ಬೇಕಾಯಿತು. ನಾನು ತಡವಾಗಿ ಧನ್ಯವಾದ ಹೇಳುತ್ತಿದ್ದೇನೆ; ಈ ವಿಳಂಬಕ್ಕೆ ಕ್ಷಮೆಯಿರಲಿ.
ನಿಮ್ಮ ಸಂಸ್ಥೆ ಹಾಗೂ ನಿಮ್ಮ ಸಹಾಯಕ್ಕಾಗಿ ನಾನು ಸದಾ ಕೃತಜ್ಞನಾಗಿರುತ್ತೇನೆ. ನೀವು ನಮ್ಮ ಮೇಲೆ ತೋರಿಸಿದ ಗೌರವಕ್ಕೆ ಧಕ್ಕೆ ಆಗದಂತೆ, ನಾನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಣೆಗಾರಿಕೆಯಿಂದ ನಡೆದುಕೊಳ್ಳುತ್ತೇನೆ ಎಂಬ ಭರವಸೆಯನ್ನು ಇಲ್ಲಿ ವ್ಯಕ್ತಪಡಿಸುತ್ತೇನೆ.
– ನಾನೂ ಸಹ ನಿಮ್ಮೊಳಗಿನ ಒಬ್ಬ ನಿರಂತರ ಕಲಿಯುವವನು ಮತ್ತು ಬದುಕು ಗೆಲ್ಲುವ ಪ್ರಯತ್ನದಲ್ಲಿರುವವನು.
ಧನ್ಯವಾದಗಳು ಗ್ಲಾಸ್‌ಡೋರ್ ಕಮ್ಯೂನಿಟಿ ತಂಡ.