ಒಬ್ಬ ವ್ಯಕ್ತಿ ಮನಸ್ಸು ಎಷ್ಟು ನಾಜೂಕಾಗಿರಬಹುದು ಎಂಬುದನ್ನ ನಾವು ಪ್ರತಿ ದಿನ ಒಂದಲ್ಲ ಒಂದು ವಿಧದಲ್ಲಿ ಕಾಣುತ್ತಿರುತ್ತೇವೆ. ನಮ್ಮ ಮಾತು, ನಡತೆ, ಹಾಗೂ ವರ್ತನೆ ಯಾರಿಗೋ ಹೊಸ ಉತ್ಸಾಹ ನೀಡಬಹುದಾಗಿರುವ ಶಕ್ತಿ ಆಗಿರಬಹುದು, ಆದರೆ ಅದೇ ಮಾತು ಗಮನವಿಲ್ಲದೆ ಹೇಳಿದರೆ, ಅದು ಅವರ ಜೀವನದ ಬೆಳಕನ್ನೇ ಅಳಿಸಬಹುದು.
ನಮ್ಮ ಸಮಾಜದಲ್ಲಿ ಹಲವಾರು ಜನರು ತಮ್ಮ ಹೋರಾಟದ ನಡುವೆಯೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಬೇಕಾದದದು ಗಟ್ಟಿ ಮಾತುಗಳಲ್ಲ, ಬದಲಿಗೆ ದೈರ್ಯ ತುಂಬುವ ನಗು, ಭರವಸೆಯ ಮಾತು, ಪ್ರೀತಿ ನೀಡುವ ಸ್ನೇಹಮಯಿ ಹೃದಯ.
ಒಬ್ಬ ವ್ಯಕ್ತಿ ನೋವಿನಲ್ಲಿದ್ದಾಗ, ಅವನು ಕೇಳಬೇಕಾಗಿರುವುದು:
"ನೀನು ಬಲಶಾಲಿ""ಇದು ತಾತ್ಕಾಲಿಕ ಸಮಸ್ಯೆ ಇದನ್ನ ನೀನು ಜಯಸುತ್ತೀಯಾ""ನಾನು ನಿನ್ನ ಜೋತೆ ಇದ್ದೀನಿ".
ಈ ಮಾತುಗಳು ಸುಲಭವಾಗಿದ್ದರೂ, ಅವುಗಳ ಪವಿತ್ರತೆಯನ್ನ ನಾವು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನಾದರು ನಷ್ಟ ಅನುಭವಿಸುತ್ತಾರೆ. ನಮ್ಮ ಮಾತು ಅವರ ನೋವನ್ನ ಹೆಚ್ಚು ಮಾಡುವಂತೆ ಇರಬಾರದು. ಬದಲಾಗಿ ನಮ್ಮ ಮಾತುಗಳಿಂದ ಅವರಿಗೆ ಹೊಸ ಜೀವನೋತ್ಸಾಹ ಬಾಳಿಗೆ ಹೊಸ ಬೆಳಕು ಹರಡುವಂತಿರಬೇಕು.
ಹಾಗಾಗೀ ನಾವು ಜೀವನದಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೇವೆ, ಹೇಗೆ ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಜಾಗರೂಕರಾಗೋಣ.
ನಮ್ಮ ಮಾತು "ಬೆಳಕು" ಆಗಲಿ "ಬೇಲಿ" ಆಗದಿರಲಿ .
ಒಬ್ಬರ ಬಾಳಿಗೆ ಶಕ್ತಿಯ ಕಿರಣವಾಗೋಣ. ಮಾತು ಬಳಸೋಣ, ಆದರೆ ಪ್ರೀತಿಯಿಂದ. .
✍️ ಶಿವಲಿಂಗಯ್ಯ ಕುಲಕರ್ಣಿ, ಕಾವ್ಯ ಡಿಜಿಟಲ್ ಸ್ಟುಡಿಯೋ, ಗಂಗಾವತಿ.