Skip to main content

Posts

Showing posts from May, 2025

ಒಬ್ಬ ಅನಾಮಿಕ ತೋರಿಸಿದ ಬೆಳಕಿಗೆ ನನ್ನ ಹೃದಯದ ಧನ್ಯವಾದ"

ಈಗ ಸದ್ಯಕ್ಕೆ ಅವರು ಅಥವಾ ಅವರ ಮಾಹಿತಿ ಗೂಗಲ್‌ನಲ್ಲಿ ಕಾಣಿಸದಿದ್ದರೂ, ಅವರ ವ್ಯಕ್ತಿತ್ವ ನನ್ನಲ್ಲಿ ಒಂದು ಶಾಶ್ವತ ಛಾಪನ್ನು ಬಿಟ್ಟಿದೆ. ಅವರ ಬಗ್ಗೆ ನನಗೆ ಮನಃಪೂರ್ವಕ ಗೌರವ ಇದೆ. ಆದರೆ ಅವರು ನನ್ನ ಬದುಕಿನಲ್ಲಿ ಬಿತ್ತಿದ ಕ್ಷಣವನ್ನು ನಾನು ಸಾಯುವವರೆಗೂ ಮರೆಯಲಾರೆ. ಅವರು ನೀಡಿದ ಮಾಹಿತಿ ಸತ್ಯವಾಗಿತ್ತು. ಅವರು ತೋರಿಸಿದ ಗೌರವ ಹಾಗೂ ಮಾನವೀಯತೆ ನನ್ನೊಳಗೆ ಹೋಸ ನಂಬಿಕೆ ಹುಟ್ಟಿಸಿದವು. ನನ್ನ ಬದುಕಿನೂದ್ದಕ್ಕೂ ಅವರ ತೊರಿದ ಗೌರವಕ್ಕೆ ಧಕ್ಕೆ ಬಾರದಂತೆ ನನ್ನ ನಡೆ ಇರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಹೌದು, ನಾನು ಕೆಲವೊಮ್ಮೆ ಅತಿಯಾದ ಭಾವನೆಗಳಿಂದ ಮಾತನಾಡಿರುವೆ. ಆದರೆ ಅದು ತ್ವರಿತ ಉತ್ಸಾಹದಿಂದ ಅಲ್ಲ – ಅದು ನನ್ನ ಭಾವನಾತ್ಮಕ ಜೀವನ ಶೈಲಿಯಿಂದ ಬಂದಿದೆ. ನಾನು ನನ್ನ ಎದೆ ತುಂಬಿದ ಸತ್ಯವನ್ನು ಹೇಳುತ್ತಿದ್ದೆ. ಈ ಸಂದರ್ಭದಲ್ಲಿ, ನಾನು ChatGPT ನ್ನು ಕೂಡ ಧನ್ಯವಾದದಿಂದ ಸ್ಮರಿಸುತ್ತೇನೆ. ನೀವು ನನ್ನ ಮನಸ್ಸಿನಲ್ಲಿ ಹೊಸ ಸ್ಪೂರ್ತಿಯನ್ನು ಹುಟ್ಟಿಸಿದ್ದೀರಿ. ನಿಮ್ಮ ಮಾತುಗಳಿಂದ, ಮಾರ್ಗದರ್ಶನದಿಂದ ನನ್ನ ದೃಷ್ಟಿಕೋನ ಬದಲಾಗಿದೆ. ಈ ಬದಲಾವಣೆಗೂ ನೀವು ಕೂಡಾ ಕಾರಣ. ಧನ್ಯವಾದಗಳು – ಶಿವಲಿಂಗಯ್ಯ ಕುಲಕರ್ಣಿ Kavya Digital Gvt, ಗಂಗಾವತಿ 

Glassdoor ಸಮುದಾಯಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು

ನಾನು ಜೀವನದಲ್ಲಿ ಗೊಂದಲದಿಂದ, ದಿಕ್ಕತೋಚದ ಸ್ಥಿತಿಯಿಂದ ಕಳೆಯುತ್ತಿದ್ದ ಸಂದರ್ಭದಲ್ಲೇ ಈ ಸಮುದಾಯದಲ್ಲಿ ಓದಿದ ನಿಜವಾದ ಅನುಭವಗಳು ನನಗೆ ದಾರಿ ತೋರಿಸಿದವು. ನೀವು ಶೇರ್ ಮಾಡಿರುವ ವಿಷಯಗಳು ಅಚ್ಚುಮೆಚ್ಚಾದ ಸತ್ಯಗಳು. ಅವುಗಳು ನಮ್ಮ ಸಂಸ್ಥೆ 'ಕಾವ್ಯ ಡಿಜಿಟಲ್ ಜಿವಿಟಿ'ಗೂ ಹಾಗೂ ನನ್ನ ಜೀವನಕ್ಕೂ ಆತ್ಮಾವಲೋಕನ ಮಾಡುವ ಅವಕಾಶ ಮಾಡಿಕೊಟ್ಟಿವೆ. ನಿಮ್ಮ ಮಾತುಗಳು ನನಗೆ ಜೀವನದಲ್ಲಿ ಮತ್ತೊಮ್ಮೆ ನಿಲ್ಲಲು, ಯೋಚಿಸಲು ಮತ್ತು ಬದುಕನ್ನು ಹೊಸ ದೃಷ್ಟಿಯಿಂದ ನೋಡುವ ಧೈರ್ಯವನ್ನ ಹೆಚ್ಚಿಸಿದವು. ಇಂದು ನಾನು ಮನಸ್ಸಿನಲ್ಲಿ ನಿಧಾನವಾಗಿ ನೆಮ್ಮದಿಯನ್ನು ಕಾಣುತ್ತಿದ್ದೇನೆ. ನಮ್ಮ ಸಂಸ್ಥೆ ಒಂದು ಚಿಕ್ಕ ವ್ಯಾಪಾರ ಸಂಸ್ಥೆಯಾದರೂ, ಅನೇಕ ಜನರಿಗೆ ಕೆಲಸ ನೀಡಿದೆ ಸತ್ಯ, ನೀವು ಇದನ್ನು ಗಮನಿಸಿದರಲ್ಲದೆ ಗುರುತಿಸಿದ್ದೀರಿ ಎಂಬುದು ನಮಗೆ ಹೆಮ್ಮೆ ಉಂಟುಮಾಡುತ್ತದೆ. ನಿಮ್ಮ ಮಾಹಿತಿ ಮತ್ತು ಪ್ರಾಮಾಣಿಕ ಅಭಿಪ್ರಾಯಗಳಿಂದ ನಮ್ಮ ಪರಿಶ್ರಮಕ್ಕೆ ಬೆಲೆ ಸಿಕ್ಕಂತಾಯ್ತು. ಕೆಲವೊಮ್ಮೆ, ನಮ್ಮನ್ನು ಎಂದೂ ಭೇಟಿಯಾಗದವರು ಹೇಳುವ ಒಂದೊಂದು ನಿಖರವಾದ ಮಾತು ಸಹ ಒಬ್ಬರ ಜೀವನವನ್ನ ಬದಲಾಯಿಸಬಲ್ಲದು – ಅದು ನನ್ನ ಬದುಕಿನಲ್ಲಿ ಈ ಸಮುದಾಯದಿಂದಾಗಿ ಸಾಧ್ಯವಾಯಿತು. ನಮ್ಮ ಜೀವನದಲ್ಲಿ ನಡೆದ ಕೆಲ ಅನಿರೀಕ್ಷಿತ ಘಟನೆಗಳಿಂದ ಹೊರಬರಲು ಸಾಕಷ್ಟು ದಿನ ಬೇಕಾಯಿತು. ನಾನು ತಡವಾಗಿ ಧನ್ಯವಾದ ಹೇಳುತ್ತಿದ್ದೇನೆ; ಈ ವಿಳಂಬಕ್ಕೆ ಕ್ಷಮೆಯಿರಲಿ. ನಿಮ್ಮ ಸಂಸ್ಥೆ ಹಾಗೂ ನಿಮ್ಮ ಸಹಾಯಕ್...

ನಮ್ಮ ಮಾತು ನಡುವಳಿಕೆ ಮತ್ತೊಬ್ಬರ ಜೀವನ ಬದಲಿಸುವ ಶಕ್ತಿಯಾಗಹಬಹುದು.

                                                                           ಒಬ್ಬ ವ್ಯಕ್ತಿ ಮನಸ್ಸು ಎಷ್ಟು ನಾಜೂಕಾಗಿರಬಹುದು ಎಂಬುದನ್ನ ನಾವು ಪ್ರತಿ ದಿನ ಒಂದಲ್ಲ ಒಂದು ವಿಧದಲ್ಲಿ ಕಾಣುತ್ತಿರುತ್ತೇವೆ. ನಮ್ಮ ಮಾತು, ನಡತೆ, ಹಾಗೂ ವರ್ತನೆ ಯಾರಿಗೋ ಹೊಸ ಉತ್ಸಾಹ ನೀಡಬಹುದಾಗಿರುವ ಶಕ್ತಿ ಆಗಿರಬಹುದು, ಆದರೆ ಅದೇ ಮಾತು ಗಮನವಿಲ್ಲದೆ ಹೇಳಿದರೆ, ಅದು ಅವರ ಜೀವನದ ಬೆಳಕನ್ನೇ ಅಳಿಸಬಹುದು.    ನಮ್ಮ ಸಮಾಜದಲ್ಲಿ ಹಲವಾರು ಜನರು ತಮ್ಮ ಹೋರಾಟದ ನಡುವೆಯೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಬೇಕಾದದದು ಗಟ್ಟಿ ಮಾತುಗಳಲ್ಲ, ಬದಲಿಗೆ ದೈರ್ಯ ತುಂಬುವ ನಗು, ಭರವಸೆಯ ಮಾತು, ಪ್ರೀತಿ ನೀಡುವ ಸ್ನೇಹಮಯಿ ಹೃದಯ. ಒಬ್ಬ ವ್ಯಕ್ತಿ ನೋವಿನಲ್ಲಿದ್ದಾಗ, ಅವನು ಕೇಳಬೇಕಾಗಿರುವುದು: "ನೀನು ಬಲಶಾಲಿ" "ಇದು ತಾತ್ಕಾಲಿಕ ಸಮಸ್ಯೆ ಇದನ್ನ ನೀನು ಜಯಸುತ್ತೀಯಾ" "ನಾನು ನಿನ್ನ ಜೋತೆ ಇದ್ದೀನಿ".  ಈ ಮಾತುಗಳು ಸುಲಭವಾಗಿದ್ದರೂ, ಅವುಗಳ ಪವಿತ್ರತೆಯನ್ನ ನಾವು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನಾದರು ನಷ್ಟ ಅನುಭವಿಸುತ್ತಾರೆ. ನಮ್ಮ ಮಾತು ಅವರ ನೋವನ್ನ ಹೆಚ್ಚು ಮಾಡ...

ರೈತನಿಗೆ ಮಾತ್ರ ಗೋಳು ಕಟ್ಟಿಟ್ಟ ಬುತ್ತಿ.. ಇವರ ಕಷ್ಟ ಬಲ್ಲವರಾರು ?

                             “ಜೈ ಜವಾನ್, ಜೈ ಕಿಸಾನ್”  – ರೈತ ದೇಶದ ಬೆನ್ನೇಲುಬು ಎನ್ನುವ ಮಾತು ಸಾಕಷ್ಟು ವರ್ಷಗಳಿಂದ ಇದ್ದೆ ಇದೆ. ಭಾರತದ ಮಾಜಿ  ಪ್ರಧಾನಮಂತ್ರಿಗಳಾದ ಲಾಲ್‌ ಬಹದ್ದೂರ ಶಾಸ್ರ್ತಿ ಇವರು ಹೆಸರಿಸಿದ ಈ ಘೋಷವಾಕ್ಯವು ಭಾರತಕ್ಕೆ ಹೊಸ ಉತ್ಸಾಹದ  ಜೊತೆಗೆ ರೈತರಿಗೆ ಹಾಗೂ ಸೈನಿಕರಿಗೆ  ಹೊಸ ಚೈತನ್ಯವನ್ನೂ ನೀಡಿತ್ತು.  ಶಾಸ್ತ್ರಿಜಿಯವರು ಭಾರತವನ್ನು ಎರಡು ಬಲಿಷ್ಠ ಕಂಬಗಳ ಮೇಲೆ ನಿಲ್ಲಿಸಬೇಕೆಂದುಕೊಂಡಿದ್ದರು, ಗಡಿಯ ಜವಾನ್ ಮತ್ತು ಹೊಲದ ಕಿಸಾನ್ ಆದರೆ ಇಂದಿನ  ವಾಸ್ತವ ಪರಿಸ್ಥಿತಿ ಏನು ಹೇಳುತ್ತಿದೆ?           ಇಂದು ನಾವು ವಾಸ್ತವ ವಿಚಾರವನ್ನ ನೋಡೋಣ ಈ ಬಾರಿ ಉತ್ತಮ ಮಳೆಯಾದ ಕಾರಣ  ದೇಶದ ಎಲ್ಲಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದ್ದವು, ರೈತರು ಕೂಡಾ ಬಹಳಷ್ಟು ಖುಷಿಯಾಗಿದ್ದರು, ಇದೆ ಖುಷಿಯಲ್ಲಿಯೇ ಬಿತ್ತನೆ ಕಾರ್ಯವನ್ನೂ ಶುರುಮಾಡಿದರು, ಆದರೆ ಇವರ ಖುಷಿ ಉತ್ತಮ ಇಳುವರಿ ಬಂದ ನಂತರ ಇನ್ನೂ ಹೆಚ್ಚಾಗಬೇಕಿತ್ತು, ಆದರೆ ಹಾಗಾಗಲಿಲ್ಲ ದಲ್ಲಾಳಿಗಳಳು ಭತ್ತಕ್ಕೆ ನಿಗದಿಪಡಿಸಿದ ಬೆಲೆ ಕೇಳಿ ಇವರ ನಾಲ್ಕು ತಿಂಗಳ ಖುಷಿ ನಾಲ್ಕು ದಿನಗಳಲ್ಲೇ ತಲೆಕೆಳಗಾಗಿತ್ತು. ಕಳೆದ ವರ್ಷದ ಸಾಲಿನಲ್ಲಿ ಆರ್‌.ಎನ್.‌ಆರ್‌ ಭತ್ತ 2800/- ರಿಂದ 2400/- ಮತ್ತು ಸೋನಾ ...