Skip to main content

Rewarded Ads – ವೀಕ್ಷಕರಿಗೆ ಉಡುಗೊರೆ, ನಿಮಗೆ ಆದಾಯ! | Google AdSense ನ ಹೊಸ ಆಯ್ಕೆ

 ಪರಿಚಯ:

ನೀವು ಒಬ್ಬ ಬ್ಲಾಗರ್ ಆಗಿದ್ದೀರಾ? ಅಥವಾ ಫೋಟೋಗ್ರಫಿ, ಎಡಿಟಿಂಗ್ ಅಥವಾ ಕಂಟೆಂಟ್ ಕ್ರಿಯೇಟರ್ ಆಗಿದ್ದೀರಾ? ಹಾಗಾದರೆ, ನಿಮ್ಮ ಜಾಹೀರಾತುಗಳಿಂದ ನಿಮಗೂ ಲಾಭವಾಗಬೇಕು ಮತ್ತು ಓದುಗರಿಗೂ ಆಸಕ್ತಿ ಮೂಡಬೇಕು. ಇದರ ಪರಿಹಾರವೇ – Google AdSense Rewarded Ads.

Rewarded Ads ಎಂದರೇನು?

Rewarded Ads ಅಂದರೆ, ಒಬ್ಬ ಓದುಗ ಅಥವಾ ವೀಕ್ಷಕ ಜಾಹೀರಾತು ನೋಡಿದ ನಂತರ ಅವರಿಗೆ ಒಂದು 'ಪ್ರಶಸ್ತಿ' (reward) ಸಿಗುತ್ತದೆ.

ಉದಾಹರಣೆ:

EBook access

Locked article ಓದುವ ಅವಕಾಶ, Photography preset ಅಥವಾ template ಡೌನ್‌ಲೋಡ್ ಮಾಡೋ ಅವಕಾಶ. ಇದು ನಿಮ್ಮ ಓದುಗರಲ್ಲಿ ಆಸಕ್ತಿ ಹೆಚ್ಚಿಸುತ್ತದೆ ಮತ್ತು ನಿಮ್ಮ ಆದಾಯವನ್ನೂ ಹೆಚ್ಚಿಸುತ್ತದೆ.

ಈ Ads ಅನ್ನು ನೀವು ಹೇಗೆ ಬಳಸಬಹುದು?

1. ನಿಮ್ಮ ಬ್ಲಾಗ್‌ನಲ್ಲಿ:

Locked content ಮುನ್ನ, “Watch an Ad to Unlock” ಎಂಬ ಬಟನ್ ಹಾಕಬಹುದು.

ಕೆಲವು ಸ್ಪೆಷಲ್ ಫೋಟೋ ಟಿಪ್ಸ್ ಅಥವಾ PDF ಗಾಗಿ Rewarded Ads integrate ಮಾಡಬಹುದು.

2. ನಿಮ್ಮ YouTube ಚಾನೆಲ್‌ನಲ್ಲಿ:

Subscribers ಗೆ free presets ಅಥವಾ Lightroom filters ಕೊಡುತ್ತೀರಿ ಅಂದ್ರೆ, ಅದಕ್ಕೂ rewarded ad ಬಳಸಿ ಮಾಡಬಹುದು.

Google AdSense ನಲ್ಲಿ ಸೆಟಪ್ ಹೇಗೆ ಮಾಡೋದು?

Google AdSense ಗೆ ಲಾಗಿನ್ ಆಗಿ

Ads > By site > ನಿಮ್ಮ site ಆಯ್ಕೆಮಾಡಿ

Rewarded Ads ಆಯ್ಕೆ ಮಾಡಿ

Placement ಸೆಟ್ ಮಾಡಿ – ಉದಾಹರಣೆಗೆ: locked blog post, PDF download page

ಇದರ ಲಾಭಗಳು:

User engagement ಹೆಚ್ಚು

CTR (Click Through Rate) ಹೆಚ್ಚಾಗುವುದು

AdSense ಆದಾಯ ಹೆಚ್ಚುವುದು

ಓದುಗರಿಗೆ ಒಂದು “ಮೌಲ್ಯಯುತ ಅನುಭವ” ಲಭಿಸುತ್ತದೆ.

ಕೊನೆಯದಾಗಿ ಹೇಳುವುದಾದರೆ:- Rewarded Ads ಮೂಲಕ, ನೀವು ಓದುಗರಿಗೆ ಉಡುಗೊರೆ ಕೊಡಬಹುದು, ಜೊತೆಗೆ ನಿಮ್ಮ ಬ್ಲಾಗ್‌ನಿಂದ ಆದಾಯವೂ ಗಳಿಸಬಹುದು. ಇದು photography blogs, tutorials, ಅಥವಾ creative content blogs ಗೆ ಅತ್ಯುತ್ತಮ ಆಯ್ಕೆ.


Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...