ಮಳೆ ಬರುತಿತ್ತುಆಕಾಶದಿಂದ
ಬೀಳುವ ತಂಪಾದ ಮಳೆಹನಿ ,ಮತ್ತೊಂದು ಕಡೆ ಮಳೆಹನಿ ಭೂಮಿಗೆ ಬಿದ್ದ ತಕ್ಷಣ
ಭೂಮಿಯಿಂದ ಸಂಪಾದ ಸುಮುಧುರ ಗಾಳಿ ಮನಸ್ಸಿಗೆ ಸ್ಪರ್ಶಿಸುತ್ತಿತ್ತು, ಆದರೆ ಮನೆಯೊಳಗೆ – ಎಂದಿನಂತೆ ಒಂದು ತಾಯಿಯ ಹೃದಯ ನಿತ್ಯ ಮಗನ ಸ್ಪೂರ್ತಿದಾಯಕ ಸಂಗೀತ ಆಲಿಸುತ್ತಿದ್ದಳು.
ಆಕೆಗೆ ಮಗನ ಸಂತೋಷವೇ ಮುಖ್ಯವಾಗಿತ್ತು. ಮಗನಿಗೆ ಹುಟ್ಟಿನಿಂದ ಮಾತು ಬರುತ್ತಿರಲಿಲ್ಲ ಸಂಗೀತವೇ ಅವನ
ಪ್ರಪಂಚವಾಗಿತ್ತು.
ಒಂದು ಸಂಜೆ, ತಾಯಿ ಏಕಾಂತದಲ್ಲಿ ಹಾಳಾದ ಹಾರ್ಮೋನಿಯಮ್ ಕೈಗೆ ತಗೊಂಡು, ದೇವರಿಗೆ ಮೊರೆ ಇಡುತ್ತಿದ್ದಳು. ಆಗ ಮಗು ಮೌನವಾಗಿ ಎದುರಿಗೆ ಬಂದು ಹಾರ್ಮೋನಿಯಮ್ ಮುಟ್ಟಿದ ತಾಯಿಯ ಕಣ್ಣಿಗೆ ಈ ದೃಶ್ಯ ಅರ್ಥವಾಗಲಿಲ್ಲ. ಆದರೆ ಮೊದಲ ತಾಳ – ಮೊದಲ ಸ್ಪಂದನೆ – ಮೊದಲ ನಾದ! ತಾಯಿಗೆ ಅವನ ಮೌನವೂ ಹಾಡಾಗಿ ಕೇಳಿಸಿತು. ಆ ಕ್ಷಣದಿಂದ ಪ್ರತಿ
ಸಂಜೆ, ಮಗನ ಸಂಗೀತವೇ ತಾಯಿಗೆ ಪವಿತ್ರವಾಯಿತು. ತಾಳದಲ್ಲಿ ಮಾತು, ನಾದದಲ್ಲಿ ಸ್ಪಂದನೆ, ಮೌನದಲ್ಲಿ ಕಥೆ.
ಅವನಿಗೆ ಸಾಮಾಜಿಕ ಜಾಲ ತಾಣ ಗೊತ್ತಿರಲಿಲ್ಲ, ಆಂಗ್ಲದಲ್ಲಿ ಬರೆಯಲಿಕ್ಕೆ ಸಾಧ್ಯವಿರಲಿಲ್ಲ. ಆದರೆ ಆ ದಿನ ಸ್ನೇಹಿತರಿಂದ ತಿಳಿದುಕೊಂಡು – ಅವನು
ತನ್ನ ನಿನ್ನೆಯ ಸಂಗೀತವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದ, ಅದು ಬೇರೆ ಯಾರಿಗೋ ಮಧುರ ಸೌಂದರ್ಯ, ಆದರೆ ತಾಯಿಗೆ – ತನ್ನ ಮಗನ ಪ್ರೇಮ ಪತ್ರ.
ಹತ್ತು ತಿಂಗಳ ನಂತರ ಅವನ ಮೊಬೈಲ್ ಸ್ಕ್ರೀನ್ ಮಿಂಚಿತು: 📩 “Your music has reached 2
million hearts. $5,000 credited to your account.” ಇದನ್ನ ತಾಯಿ ನೋಡಿದಳು, ತಾಯಿ ಕಣ್ಣು ನೀರಾಯಿತು, ಅವನು ತಾಯಿ ಎದುರು ನಿಂತು ಆತ್ಮವಿಶ್ವಾಸದಿಂದ ಮುಗುಳ್ನಗುತ್ತಿದ್ದ, ಅಮ್ಮ ಅವನ ಕೈ ಹಿಡಿದು ಹೇಳಿದಳು: “ಮಗು ನೀನು ಮಾತನಾಡುವುದಿಲ್ಲ ನಿಜ, ಆದರೆ ನಿನ್ನ ಸಂಗೀತದ ರಾಗವಂತು ಎಷ್ಟು ಜನರ ಮನಸ್ಸನ್ನ ಮಾತಾಡಿಸಿದೆ.
ಒಬ್ಬ ಮಗನ ಮನಸಿನ ಕನಸು ತಾಯಿಗೆ ಅರ್ಥವಾಗಿತ್ತು, ಅವನ ಮೌನಕ್ಕೆ ತಾಯಿಯ ಪ್ರೇಮ ಸ್ಪಂದಿಸಿತ್ತು. ಇವೆರಡರ ನಡುವೆ – ಹಾರ್ಮೊನಿಯಂ, ತಾಳ, ನಾದ ಇದೆಲ್ಲ ಮಗುವಿನ ಮೌನದ ಭಾವನೆಗಳಿಗೆ ಸೃಜನಶೀಲತೆಯ ಕಾವ್ಯವಾಯಿತು.
ಪಾಠ: ಮೌನವೂ ಮಾತನಾಡುತ್ತದೆ
ಸತ್ಯ ಪ್ರೀತಿ, ಶ್ರದ್ಧೆ ಮತ್ತು ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಶಕ್ತಿ ಇರುತ್ತದೆ, ನಮ್ಮ ಜೀವನದಲ್ಲಿ ನ್ಯೂನ್ಯತೆಗಳಿದ್ದರು, ಆತ್ಮದ ಶಕ್ತಿ ಮಹತ್ತರವಾದದು.