ಇತ್ತೀಚಿನ ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಸಂಭವಿಸಿದ ಕ್ರಾಂತಿಕಾರಿ ಬದಲಾವಣೆಗಳು ನಮ್ಮ ಬದುಕಿನ ಪ್ರತಿಯೊಂದು ಕ್ಷೇತ್ರಕ್ಕೂ ತಲುಪಿವೆ. ಈ ಕ್ರಾಂತಿಯ ಹೃದಯಸ್ಥಾನದಲ್ಲಿ ಇರುವ ಇರುವಿಷಯವೇ – ಕೃತಕ ಬುದ್ಧಿಮತ್ತೆ (Artificial Intelligence). ಇನ್ನೂ ಈ Artificial Intelligence ಯಾವ ಯಾವ ಕ್ಷೇತ್ರನ್ನ ವ್ಯಾಪಿಸಿದೆ ಎಂದು ನೋಡುವುದಾದರೆ.
1. ಶಿಕ್ಷಣ ಕ್ಷೇತ್ರದಲ್ಲಿ AI: AI ಆಧಾರಿತ ಟ್ಯೂಟೋರಿಂಗ್ ಸಿಸ್ಟಮ್ ವಿದ್ಯಾರ್ಥಿಗಳ ಕಲಿಕೆ ಶೈಲಿಗೆ ತಕ್ಕಂತೆ ಪಾಠಗಳನ್ನು ರೂಪಿಸುತ್ತಿವೆ. ಪ್ರತ್ಯೇಕ ಅಧ್ಯಯನ ಮಾರ್ಗದರ್ಶನ, ತ್ವರಿತ ಉತ್ತರ ವ್ಯವಸ್ಥೆ, ಹಾಗೂ ಪಠ್ಯವಸ್ತು ವಿಶ್ಲೇಷಣೆಯಲ್ಲಿ AI ಮಹತ್ತರವಾಗಿದೆ.
2. ಕೃಷಿ ಕ್ಷೇತ್ರದಲ್ಲಿ: ನೀರೆರವು, ಮಣ್ಣು ವಿಶ್ಲೇಷಣೆ, ಪೆಸ್ಟಿಸೈಡ್ ಬಳಕೆ, ಬೆಳೆ ನಿರ್ವಹಣೆ ಇತ್ಯಾದಿ ಎಲ್ಲವನ್ನು AI ಬಳಸಿಕೊಂಡು ನಿಖರವಾಗಿ ನಿರ್ವಹಿಸಬಹುದು. ರೈತರು ಈಗ ಡ್ರೋನ್ ಹಾಗೂ ಸೆನ್ಸರ್‌ಗಳ ಸಹಾಯದಿಂದ ಭೂಮಿಯ ಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ.
3. ಆರೋಗ್ಯ ಮತ್ತು ವೈದ್ಯಕೀಯ: ರೋಗ ಪತ್ತೆ, ಚಿಕಿತ್ಸೆ ಮಾದರಿಗಳ ಶಿಫಾರಸು, ಔಷಧ ಅಭಿವೃದ್ಧಿ – ಇವೆಲ್ಲೆಲ್ಲವೂ AI ಸಹಾಯದಿಂದ ಸಾಧ್ಯವಾಗಿದೆ. ಇಂದು ಕೇವಲ ಕೆಲವು ಸೆಕೆಂಡುಗಳಲ್ಲಿ ಕ್ಯಾನ್ಸರ್ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳ ಪತ್ತೆ ಮಾಡಲು ಸಾಫ್ಟ್‌ವೇರ್‌ಗಳು ಸಿದ್ಧವಿವೆ.
4. ಉದ್ಯಮ ಮತ್ತು ಉದ್ಯೋಗ: ಆಟೋಮೇಶನ್, ಡೇಟಾ ಅನಾಲಿಸಿಸ್, ಗ್ರಾಹಕ ಸೇವೆಗಳಲ್ಲಿ ಚಾಟ್‌ಬಾಟ್‌ಗಳ ಬಳಕೆ AI ನ್ನು ಕೇಂದ್ರವಾಗಿಟ್ಟುಕೊಂಡಿದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಾಗಿದೆ, ಆದರೆ ಕೆಲವೊಂದು ಕಡೆ ಇದರಿಂದ ನಿರುದ್ಯೋಗ ಸಮಸ್ಯೇಯೂ ಕೂಡ ಉಂಟಾಗಿದೆ.
5. ಸಾಮಾಜಿಕ ಮಾಧ್ಯಮ ಮತ್ತು ಕಲ್ಪನೆಯ ದುನಿಯಾ: ಇಂದು ನಾವು ನೋಡುತ್ತಿರುವ ಚಿತ್ರಗಳ ಫಿಲ್ಟರ್‌ಗಳು, ವೈಯಕ್ತಿಕ ಆಧಾರಿತ ಪೋಸ್ಟ್‌ಗಳು, – ಇವೆಲ್ಲವೂ AI ಯೆ! ಲೇಖಕರಾಗಿ, ಛಾಯಾಗ್ರಾಹಕರಾಗಿ ಅಥವಾ ಕಂಟೆಂಟ್ ಕ್ರಿಯೇಟರ್ ಆಗಿ ನಾವು AI ನಿಂದ ಹೆಚ್ಚು ಪಾಠ ಕಲಿಯಬಹುದು.
ಒಟ್ಟರೆಯಾಗಿ AI ಒಂದು ಶಕ್ತಿಶಾಲಿ ಸಾಧನ. ಇದು ಕಾಲಿಡದ ಕ್ಷೇತ್ರಗಳಿಲ್ಲ, ಇದು ನಮ್ಮ ಬದುಕನ್ನು ಸುಲಭಗೊಳಿಸುತ್ತಿದೆ, ಆದರೆ ಇದರ ಜವಾಬ್ದಾರಿ ನಮ್ಮದಾಗಿದೆ – ನಾವು ಮಾನವೀಯ ಮೌಲ್ಯಗಳನ್ನು ಕಾಪಾಡುತ್ತಾ, ಈ ತಂತ್ರಜ್ಞಾನವನ್ನು ಒಳ್ಳೆಯದಿಗಾಗಿ ಬಳಸಬೇಕಾದ ಅವಶ್ಯಕತೆ ಇದೆ ಮತ್ತೊಂದು ಕಡೆ ಅನಿವಾರ್ಯತೆಯೂ ಇದೆ.