ಅಮೇರಿಕಾ ಮಾತು ಕೇಳಿ NATO ಇರಾನ್‌ ಮೇಲೆ ಯುದ್ಧಕ್ಕೆ ಬರುತ್ತದೆಯೇ ?

                                       

‌         ನಮಸ್ಕಾರ ಸ್ನೇಹಿತರೆ ಪ್ರಸ್ತುತ ಇಸ್ರೇಲ್+ಅಮೇರಿಕಾ+ಇರಾನ್  ವಿದ್ಯಮಾನಗಳನ್ನ ಗಮನಿಸುತ್ತಿದ್ದರೇ ಪ್ರಪಂಚ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಒಂದು ಕ್ಷಣ ಸಾರ್ವಜನಿಕರಿಗೆ ಭಯದ ವಾತಾವರಣ ಸೃಷ್ಠಿಯಾಗುತ್ತಿದೆ. ಏಕೆಂದರೆ ಯುದ್ಧದ ಸ್ಥಿತಿಗತಿಗಳು ತಿವ್ರಪ್ರಮಾಣದಲ್ಲಿ ನಡೆಯುತ್ತಿವೆ. ಇಲ್ಲಿ ಬರಿ ಇಸ್ರೇಲ್‌ ಹಾಗೂ ಇರಾನ್‌ ಯುದ್ಧ ನಡೆಸಿದರೆ ಯಾರಿಗೂ ಹೆಚ್ಚು ಆಘಾತ ಆಗುತ್ತಿರಲಿಲ್ಲ. ಇದರಲ್ಲಿ ಅಮೇರಿಕಾ ನೇರವಾಗಿ ಇರಾನ್‌ ವಿರುದ್ಧ ದಾಳಿ ಮಾಡಿರುವದು. ಬಹಳಷ್ಟು ಜನಕ್ಕೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ.ಕಾರಣ ಅಮೇರಿಕಾ ವಿಶ್ವದ ದೊಡ್ಡಣ್ಣ. ದೊಡ್ಡಣ್ಣನಿಗೆ ಏನಾದರು ತೊಂದರೆಯಾದರೆ ಅದು ಪ್ರಪಂಚದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬಿರುತ್ತದೆ.

         ಅಂದಹಾಗೆ ಅಮೇರಿಕಾ 32 ದೇಶಗಳ ಒಂದು ಶಕ್ತಿಶಾಲಿ ಗುಂಪಿನಲ್ಲಿ ಸೇರಿಕೊಂಡಿದೆ ಅದುವೇ NATO  (North atlantic Treaty Organization) .ಈ ನ್ಯಾಟೊದ ಕೇಲವು ಸಕ್ಷಿಪ್ತ ವಿಚಾರ ತಿಳಿದುಕೊಳ್ಳೋಣ. ನ್ಯಾಟೊ ಏನಾದರು ಯುದ್ದಕ್ಕೆ ಬಂದರೆ ಹೇಗೆ ಎನ್ನುವ ಭಯ ಎಲ್ಲರಲ್ಲೂ ಇದೆ ಇದರ ಬಗ್ಗೆ ಕಿರು ಮಾಹಿತಿ ತಿಳಿಯೋಣ.

  • ನ್ಯಾಟೊ ಒಂದು ಒಕ್ಕೂಟ ಅಥವಾ ಒಂದು ದೇಶದ ಆಜ್ಞೆ ಕೇಳುವ ಸೇನೆ ಅಲ್ಲ.
  • ಇದರಲ್ಲಿ ಅಮೇರಿಕ ಸೇರಿ ಯೂರೋಪ್‌ನ ಹಲವು ದೇಶಗಳಿವೆ.
  • ಯಾವುದೇ ದೊಡ್ಡ ನಿರ್ದಾರ (ಯುದ್ಧ) ತೆಗೆದುಕೊಳ್ಳಲು ಎಲ್ಲ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಬೇಕು.
                ಅಂದಹಾಗೆ ನ್ಯಾಟೊ ಯಾವಾಗ ಯುದ್ದಕ್ಕೆ ಬರುತ್ತದೆ ಎಂದು ನೋಡುವುದಾದರೆ.
  • ನ್ಯಾಟೊದ ಪ್ರಮುಖ ನಿಯಮ ಹೀಗಿದೆ ಅದು ಆರ್ಟಿಕಲ್‌ 5 ಇದರಿಂದಾಗಿ ಒಂದು ನ್ಯಾಟೊ ಸದಸ್ಯ ರಾಷ್ಟ್ರದ ಮೇಲೆ ದಾಳಿ ಆದ್ರೆ - ಎಲ್ಲಾರು ಸೇರಿ ದಾಳಿಗೊಳದಾದ ರಾಷ್ಟ್ರವನ್ನ ರಕ್ಷಣೆ ಮಾಡುತ್ತಾರೆ. 
  • ಉದಾಹರಣೆ :2001 ರ ಸೆಪ್ಟಂಬರ್‌ 11 ದಾಳಿಯ ನಂತರ ನ್ಯಾಟೊ ಅಮೇರಿಕಾಕೆ ಬೆಂಬಲ ನೀಡಿತು.
     ಇನ್ನೂ ಇರಾನ್‌ ವಿಷಯದಲ್ಲಿ ಪರಿಸ್ಥಿತಿ ಏನು ಎಂದು ನೋಡುವುದಾದರೆ ಇರಾನ್‌ ನ್ಯಾಟೊದ ಸದಸ್ಯರಾಷ್ಟ್ರ ಅಲ್ಲ. ಇರಾನ್‌ ನೇರವಾಗಿ ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡಿಲ್ಲ. ಆದ್ದರಿಂದ 
  • ನ್ಯಾಟೊ ಒಟ್ಟಾಗಿ ಯುದ್ದಕ್ಕೆ ಬರುವ ಸಾದ್ಯತೆ ಕಡಿಮೆ
  • ಅಮೇರಿಕಾ ಸ್ವತಃ ಯುದ್ದ ಮಾಡಿದರು ನ್ಯಾಟೊ ದೇಶಗಳು ಇದರಲ್ಲಿ ಸೇರಬೇಕು ಎನ್ನುವ ಕಡ್ಡಾಯವಿಲ್ಲ.
       ವಾಸ್ತವದಲ್ಲಿ ಅಮೇರಿಕಾ ಒತ್ತಡ ಹಾಕಬಹುದು ಆದರೆ ನ್ಯಾಟೊದ ಎಲ್ಲಾ ದೇಶಗಳು ಒಪ್ಪಿದರೆ ಮಾತ್ರ ಯುದ್ಧ, ಯೂರೋಪ್‌ ದೇಶಗಳಂತು ಹೆಚ್ಚು ಜಾಗ್ರತೆ ವಹಿಸುತ್ತವೆ, ಇದಕ್ಕೆ ವಿರೋಧ ವ್ಯಕ್ತಪಡಿಸಬಹುದು. ಅಂದಹಾಗೆ ನ್ಯಾಟೊ ಅಮೇರಿಕಾದ ಮಾತು ಕೇಳಿ ಸ್ವಯಂ ಯುದ್ದಕ್ಕೆ ಹೋಗುವುದಿಲ್ಲ. ಅದು ರಾಜಕೀಯ ಪರಿಸ್ಥಿತಿ ಅಪಾಯದ ಮೇಲೆ ಅವಲಂಬಿತ.