ಭಾರತದಲ್ಲಿ LPG ಗ್ಯಾಸ್ ಕೊರತೆ ಇದೆಯೇ ? ಇಂದಿನ ನಿಜವಾದ ಸ್ಥಿತಿ

 

                                


          ಇತ್ತಿಚಿನ ದಿನಗಳಲ್ಲಿ ಎಲ್.ಪಿ.ಜಿ ಗ್ಯಾಸ್ ಸರಬರಾಜಿನ ಕುರಿತು ಜನರಲ್ಲಿ ಹಲವಾರು ಪ್ರಶ್ನೆಗಳು ಕೇಳಿಬರುತ್ತಿವೆ. ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಗ್ರಾಸ್ ಸಿಲಿಂಡರ್ ಸರಿಯಾಗಿ ಸಿಗುತ್ತಿದೆಯೇ ? ದೇಶದಲ್ಲಿ ಗ್ಯಾಸ್ ಕೊರತೆ ಸಮಸ್ಯೆ ಉಂಟಾಗಿದೆಯೇ ? ಆಥವಾ ಇದು ತಾತ್ಕಾಲಿಕ ಸಮಸ್ಯೆಯೇ ? ಎಂಬ ವಿಚಾರಗಳು ಸಾರ್ವಜನಿಕ ಚರ್ಚೆಯ ವಿಷಯ.

ಎಲ್.ಪಿ.ಜಿ ಎಂದರೇನು ?

ಎಲ್.ಪಿ.ಜಿ ಎಂದರೆ ದ್ರವೀಕೃತ ಪೆಟ್ರೋಲಿಯಂ ಅನಿಲ. ಭಾರತ ಹಲವು ಕ್ಷೇತ್ರಗಳು, ರೆಸ್ಟೋರೆಂಟ್, ಕೈಗಾರಿಕೆಗಳು, ಮನೆಗಳಲ್ಲಿ ಅಡುಗೆ ಮತ್ತು ‌ಎಲ್.ಪಿ.ಜಿ ಸಿಲಿಂಡರಗಳ ಮೇಲೆ ಅವಲಂಬಿತವಾಗಿದೆ.

ಭಾರತದಲ್ಲಿ ಎಲ್.ಪಿ.ಜಿ ಬಳಕೆ ಪ್ರಮಾಣ.

       ಭಾರತವು ವಿಶ್ವದಲ್ಲಿಯೇ ಹೆಚ್ಚು ಎಲ್.ಪಿ.ಜೆ ಬಳಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಗ್ರಾಮಿಣ ಪ್ರದೇಶದಲ್ಲಿ ಇಂಧನವನ್ನ (ಸಿಮೆಎಣ್ಣೆ) ಕಡಿಮೆ ಮಾಡಿ ಎಲ್.ಪಿ.ಜಿ ಬಳಕೆಗೆ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ವಿಷೇಶವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಮೂಲಕ ಹಲವಾರು ಬಡಕುಟುಂಬಗಳಿಗೆ ಉಚಿತ ಅಥವಾ ಸಬ್ಸಿಡಿ ಎಲ್.ಪಿ.ಜಿ ಸಂಪರ್ಕ ಸೌಲಭ್ಯಗಳು ಕೊಟ್ಟಿದೆ. ಇದರಿಂದ  ದೇಶದ ಕಡುಬಡವರು ಕೂಡಾ ಎಲ್.ಪಿ.ಜಿ ಬಳಸುವಂತಾದರು. 

ಭಾರತಕ್ಕೆ ಎಲ್.ಪಿ.ಜಿ. ಎಲ್ಲಿಂದ ಬರುತ್ತದೆ ?

ಭಾರತ ತನ್ನ ಅಗತ್ಯವಿರುವ ಎಲ್.ಪಿ.ಜಿ ಯನ್ನು ಬಹುಪಾಲು ವಿದೇಶಗಳಿಂದ ಅಮದು ಮಾಡಿಕೊಳ್ಳುತ್ತದೆ. ಮುಖ್ಯವಾಗಿ ಸೌದಿ ಅರೇಬಿಯಾ,ಕತಾರ್‌,ಯು.ಎ.ಇ ಮತ್ತು ಮದ್ಯಪೂರ್ವದೇಶಗಳಿಂದ ಎಲ್.ಪಿ.ಜೆ ಬರುತ್ತದೆ. ಭಾರತ ಒಟ್ಟು ಎಲ್.ಪಿ.ಜೆ ಬೆಡಿಕೆಯಲ್ಲಿ ಸುಮಾರು 55% ರಿಂದ 60% ವಿದೇಶಗಳಿಂದ ಅಮದು ಮಾಡಿಕೊಳ್ಳುತ್ತದೆ. ಉಳಿದ ಭಾಗವನ್ನ ದೇಶದ ರಿಫೈನರಿಗಳು ನಡೆಸುತ್ತವೆ.

ಈಗ ಸಮಸ್ಯೆ ಏಕೆ ಉಂಟಾಗಿದೆ ?

  • ಮಧ್ಯಪೂರ್ವದಲ್ಲಿ ಉಂಟಾಗುವ ಯುದ್ಧ ಸಮುದ್ರ ಹಡಗು ಸಂಚಾರದ ಮೇಲೆ ಹಾಗೂ ಇಂಧನ ಸಾಕಾಣಿಕೆಯ ಮೇಲೆ ಪರಿಣಾಮ ಬೀರಿದೆ.
  • ಏಷ್ಯಾಬರುವ ಅನೇಕ ಇಂಧನದ ಹಡಗುಗಳು ಇರಾನ್ ನ ಹಾರ್ಮುಜ್ ಜಲಸಂಧಿ ಮೂಲಕವೇ ಬರುತ್ತವೆ. ಕಾರಣ ಇರಾನ್ ಇಲ್ಲಿ ಬರುವ ಹಡಗುಗಳನ್ನು ತಡೆಯುತ್ತಿದೆ.
  • ಇದರಿಂದಾಗಿ ಜಾಗತಿಕ ಬೆಲೆ ಏರಿಕೆ ಉಂಟಾಗುತ್ತಿದೆ. ಕಾರಣ ಎಲ್.ಪಿ.ಜಿ ಬೆಲೆ ಏರಿಕೆ ಅದರು ಪರಿಣಾಮ ಭಾರತಕ್ಕೂ ತಲುಪುತ್ತದೆ. 

ಮನೆಗಳಿಗೆ ಎಲ್.ಪಿ.ಜಿ ಸಿಗುತ್ತಿದೆಯೇ ?

         ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರ ಮೊದಲು ಗೃಹಬಳಕೆ ಎಲ್.ಪಿ.ಜಿ ಸಿಲಿಂಡರಗಳಿಗೆ ಮೊದಲ ಆದ್ಯತೆ ನೀಡುತ್ತಿದೆ. ಹೋಟೆಲ್‌,ರೆಸ್ಟೊರೆಂಟ್‌,ವಾಣಿಜ್ಯ ಎಲ್.ಪಿ.ಜೆ ಮೇಲೆ ಮಾತ್ರ ಕೆಲವೊಮ್ಮೆ ಒತ್ತಡ ಹೆರುವ ಸಾದ್ಯತೆ ಇದೆ. 

ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು

         ಭಾರತ ಸರ್ಕಾರ ಮತ್ತು ತೈಲ ಕಂಪನಿಗಳು ಗ್ಯಾಸ್‌ ಸರಬರಾಜು ಸ್ಥಿರವಾಗಿರಲು ಹಲವು ಕ್ರಮಗಳನ್ನ ಕೈಗೊಂಡಿದೆ.

  • ದೇಶದ ರಿಫೈನರಿಗಳಲ್ಲಿ ಉತ್ಪಾದನೆ ಹೆಚ್ಚಿಸುವದು
  • ಹೊಸ ದೇಶಗಳಿಂದ ಎಲ್.ಪಿ.ಜಿ ಅಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳುವದು.
  • ಸಂಗ್ರಹಣಾ ಹೆಚ್ಚಿಸುವದು.
  • ಅಕ್ರಮ ಸಂಗ್ರಹಣೆಗಳನ್ನ ತಡೆಗಟ್ಟುವದು

          ಭವಿಷ್ಯದಲ್ಲಿ ಭಾರತವು ಎಲ್.ಪಿ.ಜಿ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಲು ಮತ್ತು ಪರ್ಯಾಯ ಶಕ್ತಿಯ ಬಳಕೆಯನ್ನು ಪ್ರಯತ್ನಿಸುತ್ತಿದೆ.ಸೌರಶಕ್ತಿ ವಿದ್ಯುತ್‌ ಅಡುಗೆ ಸಾಧನೆಗಳು ಮತ್ತು ಬಯೊಗ್ಯಾಸ್‌ ಮುಂತಾದ ಪರ್ಯಾಯ ಇಂಧನಗಳ ಬಳಕೆ ಹೆಚ್ಚಿಸುವ ಯೋಜನೆಗಳು ಅಗತ್ಯ ಕ್ರಮ ಮುಂದುವರೆಯುತ್ತಿವೆ.

          ಒಟ್ಟಾರೆಯಾಗಿ ನೋಡಿದರೆ ಭಾರತದಲ್ಲಿ ಎಲ್.ಪಿ.ಜಿ. ಸಂಪೂರ್ಣವಾಗಿ ನಿಲ್ಲುವುದಿಲ್ಲ. ತಾತ್ಕಾಲಿಕ ತೊಂದರೆ ಆಗಬಹುದು. ಆದರೆ ಸರ್ಕಾರ ಮತ್ತು ತೈಲಕಂಪನಿಗಳು ಸರಬರಾಜು ಸ್ಥಿರವಾಗುವಂತೆ ನೋಡಿಕೊಳ್ಳುತ್ತಿವೆ. ಜನರು ಆತಂಕ ಪಡುವ ಅಗತ್ಯವಿಲ್ಲ. 

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?