ಅಮೇರಿಕಾ ಮತ್ತು ಭಾರತ ನಡುವಿನ ವ್ಯತ್ಯಾಸ

                                             

ಸ್ನೇಹಿತರೆ ಭಾರತ ಹಾಗೂ ಅಮೇರಿಕಾ ದೇಶಗಳು ಪ್ರಪಂಚದಲ್ಲಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶಗಳಾಗಿವೆ ಹಾಗಾಗಿ ಈ ಎರಡು ದೇಶಗಳ ವ್ಯತ್ಯಾಸಗಳನ್ನ ನಾವೀಗ ತಿಳಿದುಕೊಳ್ಳೋಣ

ಭಾರತ  - ಇಂಡಿಯಾ

ಭಾರತ 1947 ರಲ್ಲಿ ಸ್ವತಂತ್ರ್ಯಗೊಂಡು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸುತ್ತಿದೆ.ಬಾರತದ ಜನಸಂಖ್ಯೆ ಸುಮಾರು 140 ಕೋಟಿ ಇದೆ.ಈ ದೇಶದ ರಾಜಧಾನಿ ನವದೆಹಲಿ.ಹಾಗೆಯೇ ದೇಶದ ಆಡಳಿತ ಪ್ರಧಾನಮಂತ್ರಿಗಳ ಮುಖಾಂತರ ನಡೆಯುತ್ತದೆ.

ಅಮೇರಿಕಾ - ಯುನೈಟೆಡ್‌ ಸ್ಟೇಟ್ಸ್‌ 

ಅಮೇರಿಕಾ 1776 ರಲ್ಲಿಯೇ ಸ್ವತಂತ್ರ್ಯಗೊಂಡು ಈ ದೇಶವು ಕೂಡಾ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸುತ್ತಿದೆ. ಈ ದೇಶದ ಜನಸಂಖ್ಯೆ ಸುಮಾರು 33 ಕೋಟಿ ಇದೆ ಹಾಗೇಯೇ ಅಮೇರಿಕಾದ ರಾಜಧಾನಿ ವಾಷಿಂಗ್ಟನ್‌ ಡಿ.ಸಿ. ಅಂದಹಾಗೆ ಆಡಳಿತ ವ್ಯವಸ್ಥೆ ಸಂಸತ್ತಿನ ಪ್ರಜಾಪ್ರಭುತ್ವದ ಎಲ್ಲಾಅಧಿಕಾರಗಳು ಅಧ್ಯಕ್ಷರ ಕಂಟ್ರೋಲ್‌ನಲ್ಲಿ ಇರುತ್ತದೆ.

ಅಂದಹಾಗೆ ಅಮೇರಿಕಾ ವಿಶ್ವದ ಅತಿದೊಡ್ಡ ಆರ್ಥಿಕಶಕ್ತಿಯಾಗಿದೆ, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.

ಅಮೇರಿಕಾದ ದೊಡ್ಡ ಕಂಪನಿಗಳು

  1. ಮೈಕ್ರೋಸಾಫ್ಟ್‌
  2. ಗೂಗಲ್‌
  3. ಆಪಲ್‌
ಬಾರತದ ಪ್ರಮುಖ ಕಂಪನಿಗಳು
  1. ರಿಲಯನ್ಸ್‌ ಇಂಡಸ್ಟ್ರೀಸ್‌
  2. ಟಾಟಾ ಗ್ರೂಪ್

ಸಂಸ್ಕೃತಿ ಮತ್ತು ಭಾಷೆ

  1. ಭಾರತ ಕನ್ನಡ, ಹಿಂದಿ,ತಮಿಳು ಪಂಜಾಬಿ,ಮರಾಠಿ ಹೀಗೆ ಅನೇಕ ಭಾಷೆಗಳನ್ನೊಳಗೊಂಡಂತೆ ವಿಭಿನ್ನ ಸಂಸ್ಕೃತಿಗಳಿಂದ ಕೂಡಿದೆ.
  2. ಅಮೇರಿಕಾ ಮುಖ್ಯವಾಗಿ ಇಂಗ್ಲಿಷ್‌ ಭಾಷೆ ಬಳಸುತ್ತದೆ ಹಾಗೂ ಬಹುಜನಾಂಗಿಯ ಸಮಾಜದಿಂದ ಕೂಡಿದೆ
  ಸೈನಿಕ ಶಕ್ತಿ
  1. ಅಮೇರಿಕಾ ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಸೇನೆಯನ್ನು ಹೊಂದಿದೆ.
  2. ಭಾರತ ಕೂಡಾ ದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಸೇನೆ ಹೊಂದಿದೆ.
 ಒಟ್ಟಾರೆಯಾಗಿ ನೊಡುವುದಾದರೆ ಅಮೇರಿಕಾ ಆರ್ಥಿಕ ಶಕ್ತಿಯಲ್ಲಿ ಮುಂಚೂಣೀಯಲ್ಲಿದ್ದರೆ, ಭಾರತ ಜನಸಂಖ್ಯೆ ಮತ್ತು ವೈವಿದ್ಯಮಯ ಸಂಸ್ಕೃತಿ ಹಾಗೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ..