ಅಮೇರಿಕಾ ಜಗತ್ತಿನ ಮೇಲೆ ಹೇಗೆ ಇಷ್ಟುಹಿಡಿತ ಹೊಂದಿದೆ ?

                                       


ನಮಸ್ಕಾರ ಸ್ನೇಹಿತರೆ ಯೂರೋಪ್‌ ಮತ್ತು ಇಂಗ್ಲೇಂಡ್‌ ಪ್ರಪಂಚವನ್ನ ಹೇಗೆ ಹಿಡಿದಿಟ್ಟುಕೊಂಡಿವೆ ಎನ್ನುವದನ್ನ ನಾವು ಈ ಆರ್ಟಿಕಲ್‌ನಲ್ಲಿ ತಿಳಿದುಕೊಳ್ಳೋಣ. 

ಸ್ನೇಹಿತರೆ ಪ್ರಪಂಚವನ್ನ ನಾವು ಯಾವ ದೃಷ್ಠಿಯಿಂದ ನೋಡುತ್ತೇವೊ ಸೃಷ್ಠಿಯು ನಮಗೆ ಹಾಗೆ ಕಾಣುತ್ತದೆ.ಇದರ ಕೊನೆಯಲ್ಲಿ ಸತ್ಯ ಯಾವುದು ಅಸತ್ಯಯಾವುದು ಎಂದು ನಾವೇ ನಿರ್ಧರಿಸಬೇಕಾಗುತ್ತದೆ. ಅಂದಹಾಗೆ ಮೊದಲಿನಿಂದಲು ಪ್ರಪಂಚಕ್ಕೆ ಒಬ್ಬ ದೊಡ್ಡಣ್ಣ ದೇಶ ಅಂತಾ ಇದ್ದೆ ಇತ್ತು.  18ನೇ ಶತಮಾನದಲ್ಲಿ ಪ್ರಾನ್ಸ್‌,ಜರ್ಮನಿ, ಹೀಗೆ ಹಲವು ದೇಶಗಳ ಜೊತೆ ಯುದ್ದ ಮಾಡಿದ್ದ ಇತಿಹಾಸ ಹೊಂದಿದ ಬ್ರಿಟನ್‌ ತನ್ನ ವ್ಯಾಪಾರಗಳ  ಹಾಗೂ ಅಸ್ತಿತ್ವದ ಮೂಲಕ  ತನ್ನ ಹಿರಿಮೆಯ ಅಧಿಪತ್ಯವನ್ನ ಪ್ರಪಂಚದ ಮೇಲೆ ಪ್ರತಿಪಾಧಿಸುತ್ತಲೇ ಬಂದಿರುತ್ತದೆ. ಭಾರತದಲ್ಲಂತು ತನ್ನ ಸಾರ್ವಭೌಮತ್ವವನ್ನ ತುಸು ಹೆಚ್ಚೆ ಸಾಧಿಸಿರುತ್ತದೆ. 

ಅಂದಹಾಗೆ ಬ್ರೀಟನ್ ತನ್ನ ಶಕ್ತಿ ಬಲಗೊಳ್ಳುವುದಕ್ಕೊಸ್ಕರ ತನ್ನ  ಪ್ರಭಲ ವಸಾಹತು ದೇಶಗಳಾಗಿದ್ದ ಭಾರತ,ಅಮೇರಿಕಾ,ಆಸ್ಟ್ರೇಲಿಯಾ ,ಆಫ್ರಿಕಾದ ಹಲವು ದೇಶಗಳು  ಸಂಪತ್ತು ಮತ್ತು ಸೈನಿಕ ಶಕ್ತಿಗಳನ್ನ ಉಪಯೋಗಿಸಿಕೊಂಡು ಪ್ರಪಂಚವನ್ನ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿತ್ತು. ಮೊದಲಿನಿಂದ ಯೂರೋಪ್‌{ಬ್ರೀಟನ್} ಪ್ರಪಂಚದ ದೊಡ್ಡಣ್ಣನೇ ಆಗಿತ್ತು.‌ ರಷ್ಯಾ ದೊಡ್ಡಣ್ಣನ ಸ್ಥಾನಕ್ಕಾಗಿ ಹಪಹಪಿಸುತ್ತಿದ್ದರು. ಯೂರೋಪ್‌ ರಷ್ಯಾಗೆ  ತೊಂದರೆ ಕೊಡ್ತಾನೆ ಬರ್ತಿದೆ‌. ಇದಕ್ಕೆ ಕಾರಣ  ಅಮೇರಿಕಾ, ಬ್ರೀಟನ್‌ ಯಾವ ಕಾರಣಕ್ಕೂ ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ಇವರದ್ದು ಒಂಥರಾ ಗಂಡ-ಹೆಂಡತಿ ಸಂಬಂಧ ಎಂದು ಹೇಳಲಾಗುತ್ತದೆ.

ಸ್ನೇಹಿತರೇ, ಮೊದ ಮೊದಲು ಕ್ರಿ.ಶ 1900ರ ಸಮಯದಲ್ಲಿ ಬ್ರೀಟನ್‌ ವಿಶ್ವದ ದೊಡ್ಡ ಆಗಿದ್ದುಇದಕ್ಕೆ ಟಕ್ಕರ್‌ ಕೊಡಲು ಜರ್ಮನಿ ಪ್ರಥಮ ಹಾಗೂ ದ್ವಿತಿಯ ಮಹಾಯುದ್ದವನ್ನ ನಡೆಸುತ್ತದೆ. ಇದರಲ್ಲಿ ಅಪಾರ ಪ್ರಮಾಣದ ಆಸ್ತಿನಷ್ಠ ಪ್ರಾಣಹಾನಿ ಉಂಟಾಗಿ ಬ್ರೀಟನ್‌ ಯುದ್ದದಲ್ಲಿ ಗೆದ್ದರು ಕೂಡಾ ಅನೇಕ ದೇಶಗಳು ಇದರಿಂದ ಸ್ವಾತಂತ್ರ್ಯ ಪಡೆದುಕೊಳ್ಳುತ್ತವೆ ಇದರಲ್ಲಿ ಭಾರತವು ಒಂದು.ಒಂದೇ ಮಾತಲ್ಲಿ ಹೇಳುವುದಾದರೆ ಯುದ್ಧದಲ್ಲಿ ಗೆದ್ದವನು ಸೋತ ಸೋತವನು ಸತ್ತ ಎನ್ನುವಂತ ಸ್ಥಿತಿ ಬ್ರಿಟನ್‌ ಜರ್ಮನಿದಾಗಿತ್ತು. ಈ ಯುದ್ಧಗಳಲ್ಲಿ ಅಮೇರಿಕಾ ಪಾಲ್ಗೊಂಡರು ಕೂಡಾ ಅದಕ್ಕೆ ಪ್ರತಿಯಾಗಿ ಅನೇಕ ದೇಶಗಳಿಗೆ ಯುದ್ಧಸಾಮಾಗ್ರಿಗಳನ್ನ ನೀಡಿ ವ್ಯಾಪಾರ ಮಾಡುತ್ತದೆ. ಈ ಯುದ್ಧಗಳಲ್ಲಿ ಅಮೇರಿಕಾ ಹೆಚ್ಚು ನಷ್ಟಹೊಂದಿವುದಿಲ್ಲ ಹಾಗಾಗಿ ಅಮೇರಿಕಾ ಪ್ರಪಂಚದ ಮುನ್ನಲೇಗೆ ಬರುತ್ತದೆ.ಮತ್ತೊಂದೆಡೆ  ಬಾರತ 1947 ರಲ್ಲಿ ಸ್ವಾತಂತ್ರ್ಯ ಹೊಂದುತ್ತದೆ.ಇಲ್ಲಿ ಭಾರತವನ್ನ 3 ಭಾಗವಾಗಿ ಮಾಡಿ. ಇದಕ್ಕೂ ಮೊದಲು 1776 ರಲ್ಲಿ ಅಮೇರಿಕಾವನ್ನ ಯಾವುದೆ ಭಾಗ ಮಾಡದೆ ಬಿಟ್ಟಿದ್ದರು.

ಅಂದಹಾಗೆ ವಿಷಯಕ್ಕೆ ಬರುವುದಾದರೆ ಇಂಗ್ಲೇಂಡ್‌ 18ನೇ ಶತಮಾನದಲ್ಲಿ ವ್ಯಾಪಾರಕ್ಕಾಗಿ ಭಾರತ ಹಾಗೂ ಅಮೇರಿಕಾ ಆಸ್ಟೇಲಿಯಾ, ಆಫ್ರಿಕಾ ದೇಶಗಳು ಹೀಗೆ ನಾನಾ ದೇಶಗಳನ್ನ ಅವಲಂಬಿಸಿತ್ತು. ಆದರೆ ಇವರಿಗೆ ಪ್ರಾಚೀನ ಕಾಲದಿಂದಲು ವ್ಯಾಪಾರ ವ್ಯವಹಾರ ಹಾಗೂ ಉತ್ತಮು ಸಮುದ್ರ ಮಾರ್ಗ ಭೂಮಾರ್ಗ ಇರುವುದೆ ಏಷ್ಯಾ ಹಾಗೂ ಭರತಉಪಖಂಢದ ಜೊತೆಗೆ ಇದನ್ನ ಹೇಗಾದರು ಮಾಡಿ ಬಿಡಬಾರದು ಎಂದು ಜಿದ್ದಿಗೆ ಬಿದ್ದೊರಗತಿ ಹೊರಾಟ ಮಾಡಿದ ಇಂಗ್ಲೇಂಡ್‌ 1776 ರಲ್ಲಿ ಅಮೇರಿಕಾಗೆ ಸ್ವಾತಂತ್ರ ನೀಡಿ ಭಾರತದಲ್ಲಿ ತಮ್ಮ ಈಸ್ಟ್‌ ಇಂಡಿಯಾ ಕಂಪನಿ ಮೂಲಕ ಭಾರತದಲ್ಲಿ ತಮ್ಮ ಆಡಳಿತ ವಿಸ್ತರಣೆ ಮಾಡುತ್ತದೆ. ಅಮೇರಿಕಾವನ್ನ ಉತ್ತಮ ವ್ಯಾಪಾರಿ ದೇಶವಾಗಿ ಬೆಳೆಸುವಲ್ಲಿ ಯುರೋಪ್‌ನ ಪಾತ್ರ ಪ್ರಮುಖ ಅಂತಾನೆ ಹೇಳಬಹುದು. ಏಕೆಂದರೆ ಅಮೇರಿಕಾವನ್ನ ಬೆಳೆಸುದವರಲ್ಲಿ ಹೆಚ್ಚಿನವರು ಯುರೋಪ್‌ ಪ್ರಜೆಗಳೆ ಆಗಿದ್ದಾರೆ ಇವರ ಹೆಳಿದ ಹಾಗೆ ಜಗತ್ತು ಕೇಳಬೇಕು ಎನ್ನುವ ಕಾಲವನ್ನ ನಿರ್ಮಾಣ ಮಾಡಿಕೊಳ್ಳುತ್ತಾರೆ. 

ಮುದುವರೆದು,  ಪ್ರಸ್ತುತ 140 ಕೊಟಿ ಪ್ರಜೆಗಳನ್ನ ಹೊಂದಿದ ಭಾರತವನ್ನ ವ್ಯಾಪಾರಿ ಕೇಂದ್ರವಾಗಿದೆ .  ಅಮೇರಿಕಾ  ಇಲ್ಲಿ ಉತ್ತಮ ಬ್ಯುಸಿನೆಸ್‌ ಮಾಡುತ್ತದೆ. ಅಂದಹಾಗೆ ಬಾರತಕ್ಕೆ ಸ್ವಾತಂತ್ರ್ಯ ಬಂದ ನಂತರವು ಕೂಡಾ ಯುರೋಪ್{ಬ್ರೀಟೆನ್}‌ಭಾರತವನ್ನ ನಿರ್ಲಕ್ಷ್ಯ ಮಾಡುತ್ತಲೇ ಬರುತ್ತಿದೆ.. ಓಂದೆ ಮಾತಲ್ಲಿ ಹೇಳುವುದಾದರೆ ಬ್ರಿಟನ್‌ ಹಾಗೂ ಯುರೋಪ್‌ ದೇಶಗಳು ನೇರವಾಗಿ ಅಲ್ಲದೇ ಇದ್ದರು ಅಮೇರಿಕಾದ ಮೂಲಕ ಪ್ರಪಂಚವನ್ನ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದೆ.. ಇದು ಒಂದು ಕಡೆಯಿಂದ ಉತ್ತಮ ನಿರ್ದಾರ ಎನ್ನಿಸಿದರು ಅತಿಯಾದರೆ ಅಮೃತವೂ ವಿಷ ಎನ್ನುವುದನ್ನ ಯಾರು ಮರೆಯಬಾರದು. 

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?