ಈ ದೇಶಗಳಲ್ಲಿ ಕೇಲವು ತಿಂಗಳು ಕತ್ತಲೇ ಆಗುವುದಿಲ್ಲ. ಆಶ್ಚರ್ಯಕರ ಪ್ರಕೃತಿ ಘಟನೆ.

          


        ಭೂಮಿಯಲ್ಲಿ ಕತ್ತಲೇ ಆಗದ ದೇಶಗಳು ಯಾವದು ಇಲ್ಲ. ಆದರೆ ಪ್ರಕೃತಿಯ ಆಟದಲ್ಲಿ ಬೆಸಿಗೆಯಲ್ಲಿ ಕೆಲವು ತಿಂಗಳುಗಳ ಕಾಲ ಕತ್ತಲೇ ಆಗುವುದಿಲ್ಲ.ಹೌದು ಸ್ನೇಹಿತರೆ ಕೇಲವು ಉತ್ತರ ದ್ರುವದ ಹತ್ತಿರದ ದೇಶಗಳಲ್ಲಿ ಬೇಸಿಗೆಯ ಕೇಲವು ತಿಂಗಳುಗಳಲ್ಲಿ ರಾತ್ರಿ ಕತ್ತಲೇ ಆಗುವುದಿಲ್ಲ. ಸೂರ್ಯ ಮುಳುಗಿದರು ಕೂಡಾ ಬೆಳಕು ಕಡಿಮೆ ಆಗುವುದೇ ಇಲ್ಲ.  

       ಪ್ರಕೃತಿಯ ಈ ಘಟನೆಯನ್ನ Midnight Sun ಎಂದು ಕರೆಯುತ್ತಾರೆ. ಅಂದರೆ ಅರ್ಧರಾತ್ರಿಯಲ್ಲೂ ಸೂರ್ಯನ ಬೆಳಕು ಕಾಣಿಸುವದು ಎಂದು ಅರ್ಥ.

ಈ ತರ ವಿಚಿತ್ರದ ಘಟನೆ ನಡೆಯುವ ದೇಶಗಳು ಎಂದರೆ ..

1. ನಾರ್ವೆ 

        ನಾರ್ವೆ ದೇಶವನ್ನ ರಾತ್ರಿ ಇಲ್ಲದ ದೇಶ ಎಂದು ಕೂಡಾ ಕರೆಯಲಾಗುತ್ತದೆ. ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ದೇಶದ ಉತ್ತರ ಭಾಗಗಳಲ್ಲಿ 24 ಗಂಟೆ ಗಳಷ್ಟು ಬೆಳಕು ಇರುತ್ತದೆ. ಜನರು ಮಧ್ಯರಾತ್ರಿಯಲ್ಲೂ ಹೊರಗಡೆ ನಡೆದಾಡುತ್ತಾರೆ.

2. ಐಸ್‌ಲ್ಯಾಂಡ್

       ಈ ಸುಂದರ ದ್ವಿಪದಲ್ಲಿ ಜೂನ್‌ ತಿಂಗಳಲ್ಲಿ ಸೂರ್ಯ ಬಹಳ ಹೊತ್ತು ಕಾಣೀಸುತ್ತಾನೆ ರಾತ್ರಿ ಬಂದರು ಪೂರ್ಣ ಕತ್ತಲೆ ಆಗುವುದೇ ಇಲ್ಲ. ಸಾಯಂಕಾಲದಂತೆ ಬೆಳಕು ಇರುತ್ತದೆ.

3. ಫೀನ್‌ಲ್ಯಾಂಡ

        ಫೀನ್‌ಲ್ಯಾಂಡ ನ ಉತ್ತರ ಭಾಗಗಳಲ್ಲಿ 70 ದಿನಗಳ ಕಾಲ ಸುರ್ಯ ಮುಳುಗುವುದೇ ಇಲ್ಲ. ಆದ್ದರಿಂದ ಜನರು ಬೇಸಿಗೆಯಲ್ಲಿ ಹೆಚ್ಚು ಸಮಯವನ್ನ ಪ್ರಕೃತಿಯಲ್ಲಿ ಆನಂದಿಸುತ್ತಾರೆ.

4. ಸ್ವೀಡನ್‌ 

   ಸ್ವೀಡನ್‌ನ ಉತ್ತರ ಭಾಗದಲ್ಲಿ ಬೇಸಿಗೆಯಲ್ಲಿ ಸೂರ್ಯ ಬಹಳ ಹೊತ್ತು ಮುಳುಗುವುದಿಲ್ಲ ರಾತ್ರಿಯಾದರು ಬೆಳಕು ಉಳಿದಂತೆಯೇ ಇರುತ್ತದೆ.

ಇದು ಏಕೆ ಹೀಗಾಗುತ್ತದೆ ?

           ಭೂಮಿ ತನ್ನ ಅಕ್ಷದ ಮೇಲೆ ಸ್ವಲ್ಪ ಓರೆಯಾಗಿ ತಿರುಗುತ್ತದೆ. ಈ ಕಾರಣದಿಂದ ಉತ್ತರ ದ್ರುವದ ಹತ್ತಿರದ ದೇಶಗಳಿಗೆ ಬೆಸಿಗೆಯಲ್ಲಿ ಸೂರ್ಯ ಸಂಪೂರ್ಣವಾಗಿ ಮುಳುಗುವುದಿಲ್ಲ.ಆದರೆ ಅದೇ ದೇಶಗಳಲ್ಲಿ ಚಳಿಗಾಲದಲ್ಲಿ ಬಹಳ ದಿನಗಳವರೆಗೆ ಸೂರ್ಯ ಉದಯಿಸುವುದಿಲ್ಲ. ಇದನ್ನ Polar night ಎಂದು ಕರೆಯಲಾಗುತ್ತದೆ.

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?