ಆಧುನಿಕ ಪ್ರಪಂಚದಲ್ಲಿ ಪೋಟೊಗ್ರಾಫರ್‌ ಸಂಕಷ್ಟಗಳು.


       ಆಧುನಿಕ ಪ್ರಪಂಚದಲ್ಲಿ ಪೋಟೋಗ್ರಾಫ‌ರ್ ಗಳ ಜೀವನ ಹೊರಗೆ ನೋಡಲು ತುಂಬಾ ಸುಂಧರವಾಗಿ ಕಾಣುತ್ತದೆ. ಆದರೆ ಇವರ ಕ್ಯಾಮರಾ ಹಿಂದೆ ಇರುವ ಕಥೆ ತುಂಬಾ ಕಠಿಣ. ಲಕ್ಷ ಲಕ್ಷ ಖರ್ಚು ಮಾಡಿ ಕ್ಯಾಮೇರಾ,ಲೆನ್ಸ್‌,ಡ್ರೋನ್‌,ಲೈಟ್ಸ್‌ ಎಲ್ಲವನ್ನು ಖರಿದಿಸುತ್ತಾನೆ. ಆದರೆ ಆ ಹಣ ಮರಳಿ ಬರುತ್ತದೆ ಎಂಬ ಖಾತರಿ ಇಲ್ಲ. ಒಂದು ಕಾರ್ಯಕ್ರಮ ಸಿಕ್ಕರೆ ಸಂತೋಷ... ಸಿಗದಿದ್ದರೆ ಸಿಗುವವರೆಗೂ ಕಾಯುವ ಪರಿಸ್ಥಿತಿ. ಸೀಸನ್ ತಿಂಗಳು ಆರ್ಡರ್‌ ಮಾಡಿದರೆ ಇನ್ನೂಳಿದ ತಿಂಗಳಲ್ಲಿ ಕಾಲಿ ಇರುವ ಪರಿಸ್ಥಿತಿ.

              ಮಳೆ ಬಂದರು ಹೋಗಬೇಕು,ಬಿಸಿಲು ಇದ್ದರು ಹೋಗಲೇಬೇಕು,ರಾತ್ರಿ 2 ಗಂಟೆ ಅದ್ರು ಇರಬೇಕು 4 ಗಂಟೆಯಾದರು ಇರಬೇಕು. ದುಬಾರಿ ಕ್ಯಾಮರಾಗಳನ್ನ ಹೊತ್ತು ಹಗಲು ರಾತ್ರಿ ಎನ್ನದೆ ಕಾರ್ಯಕ್ರಮಗಳಿಗೆ ಹಾಜರಿರಬೇಕು. ಮದುವೆ ಮನೆಗಳಲ್ಲಿ ಸಂಭ್ರಮಗಳಲ್ಲಿ ಎಲ್ಲರೂ ಸಂಭ್ರಮಿಸಿರುತ್ತಾರೆ, ಪೋಟೋಗ್ರಾಫರ ಮಾತ್ರ ತನ್ನ ಧಣಿವನ್ನ ಮರೆತು ಕೆಲಸ ಮಾಡುತ್ತಿರುತ್ತಾರೆ. ಕೆಲವು ಬಾರಿ ಮೊದಲೇ ಹೇಳಿದಹಾಗೆ ರಾತ್ರಿ ಕೆಲಸ ಮುಗಿಸಿ ಮನೆಗೆ ಮರುಳುವಾ ಕೆಲವು ಬಾರಿ ಕಳ್ಳ ಖದಿಮರು ಪೋಟೋಗ್ರಾಫರ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಕ್ಯಾಮಗಳನ್ನ ಕಸಿದುಕೊಂಡು ಹೋಗಿರುವ ಉದಾರಣೆಗಳು ಉಂಟು.

          ಒಂದು ಚೆನ್ನಾಗಿರುವ ಪೋಟೋ ಬರಬೇಕಾದರೆ ಅವನು ಗಂಟೆಗಳ ಕಾಲ ಕಾಯುತ್ತಾನೆ. ಒಂದು ಕ್ಷಣ ತಪ್ಪಿದರೆ ಆ ಕ್ಷಣ ಮತ್ತೆ ಬರುವುದಿಲ್ಲ. ಆದ್ದರಿಂದ ಆತ ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾನೆ. ಇಂದು ಮೊಬೈಲ್‌ ಕ್ಯಾಮರಾಗಳು ಬಂದ ಮೇಲೆ ಪೋಟೋ ತೆಗೆಯುವದು ಏನು ದೊಡ್ಡ ಕೆಲಸ ಎಂದು ಪ್ರಶ್ನಿಸುವ ಜನರು ಇದ್ದಾರೆ. ಅವರಿಗೆ ಗೊತ್ತಿಲ್ಲ ಒಂದು ಪೋಟೋ ಹಿಂದೆ ಇರುವ ಕಲೆ,ಅನುಭವ,ಸಹನೆ ಮತ್ತು ಹೃದಯದ ಭಾವನೆ ಇರುತ್ತದೆ ಎಂದು.

        ಫೋಟೋಗ್ರಾಫರ್‌ ಕೇವಲ ಪೋಟೋ ತೆಗೆಯುವವನಲ್ಲ. ಅವನು ಜನರ ಜೀವನದ ಅಮೂಲ್ಯ ಕ್ಷಣಗಳನ್ನ ಸಂಗ್ರಹಿಸುವ ಸೃಷ್ಠಿಕರ್ತ. ಮದುವೆಯಲ್ಲಿನ ಒಂದು ನಗು, ತಾಯಿಯ ಕಣ್ಣಿರಿನ ಒಂದು ಹನಿ, ಮಗುವಿನ ಜೀವನದ ಹೆಜ್ಜೆ ಗುರುತುಗಳು ಎಲ್ಲವನ್ನ ಕಾಲ ಕಳೆದ ಸಮಯವನ್ನ ಪೋಟೋಗಳಲ್ಲಿ ಸಂಗ್ರಹಿಸಿ ಕೊಡೊದು ಇದೆ ಪೋಟೋಗ್ರಾಫರ್, ಇದು ಇವರ ಜವಬ್ದಾರಿ ಕೂಡಾ. ಆದರೆ ಆ ಕ್ಷಣಗಳನ್ನ ಉಳಿಸುವವನ ಜೀವನದ ಕಷ್ಟಗಳನ್ನ ಕೇಳುವವರು ಬಹಳ ಕಡಿಮೆ.


  • ಕ್ಯಾಮರಾ ಹಿಂದೆ ನಿಂತಿರುವ ಪೋಟೋಗ್ರಾಫರ್‌ ..                                                                    
  • ಅವನ ಕಣ್ಣುಗಳಲ್ಲಿ ಕನಸುಗಳಿಗೆ,
  • ಅವನ ಹೆಜ್ಜೆಗಳಲ್ಲಿ ಹೋರಾಟವಿದೆ,
  • ಆದರೆ ಅವನ ಹೃದಯದಲ್ಲಿ ಒಂದು ಆಶಯವಿದೆ.

      ಒಂದು ದಿನ ನನ್ನ ಕಲೆಗೂ ಅದರ ಮೌಲ್ಯ ಸಿಗುತ್ತದೆ...



Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?