ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ನಿಜಸ್ಥಿತಿ ಭಾಗ - 01

                    


         ನಮಸ್ಕಾರ ಸ್ನೇಹಿತರೇ, "ಭಾರತ" ತಾಯ್ನಾಡಿಗಾಗಿ ಪ್ರಾಣ ಬಿಟ್ಟ ವೀರರು ಶೂರರಿಗೆ ಜನ್ಮ ನೀಡಿದ ಪುಣ್ಯಭೂಮಿ. ಈ ಭೂಮಿಯಲ್ಲಿ ಅಖಂಢ ಭಾರತಕ್ಕಾಗಿ ಹೋರಾಡಿ ಮಡಿದ ಸಿಂಹಸ್ವಪ್ನಗಳು ಎಣಿಕೆಗೆ ಸಿಗದಷ್ಟು ಅದಾಗ್ಯೂ ಕೂಡಾ ಚಂದ್ರಶೇಖರ್‌ ಆಜಾದ, ಮದನಲಾಲ್‌ ದಿಂಗ್ರಾ ,ಕುದಿರಾಮ್‌ ಬೊಸ್‌,ಭಗತ್‌ಸಿಂಗ್‌,ಲಾಲಾಲಜಪತ್‌ ರಾಯ್‌, ಬಾಲಗಂಗಾಧರ ತಿಲಕ,ಬಿಪಿನ್‌ ಚಂದ್ರಪಾಲ್ ‌,ಸುಭಾಷ‌ ಚಂದ್ರಬೋಸ್ ಹೀಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ  ಹೆಸರುಗಳು ಬೆಳೆಯುತ್ತಾ ಹೊಗುತ್ತವೆ. ಅಂದಹಾಗೆ ಭಾರತ ಸ್ವಾತಂತ್ರ್ಯದಲ್ಲಿ ಕೇಲವು ಮಹಾಪುರುಷರು ಮುಂಚುಣಿಯಲ್ಲಿದ್ದು ಹೋರಾಟ ನಡೆಸಿದರು. ಅವರ ಹೋರಾಟ ತಟಸ್ಥರೂಪ ತಾಳಿ ಹೋರಾಟವನ್ನ ನಿಷ್ಟ್ರೀಯವಾಗಿಸಿ ಬ್ರಿಟಿಷರು ಅಂದಕೊಂಡದ್ದನ್ನ ಸಾಧಿಸಿ ಭಾರತಕ್ಕೆ ಸ್ವಾತಂತ್ರ್ಯ ನೀಡ್ತಾರೆ. 

          ಅಂದಹಾಗೆ ಭಾರತಕ್ಕೆ ಸ್ವಾತಂತ್ರ್ಯ ನಿಡುವದು ಬ್ರಿಟಿಷರ ಕನಸಿನಲ್ಲೂ ಇರಲಿಲ್ಲವೆನೊ ಇದಕ್ಕೆಲ್ಲಾ  ಯೂರೋಪ್‌ ದೇಶಗಳ ಒತ್ತಡ ಹಾಗೂ ಭಾರತೀಯರ ಬಿಟ್ಟುಬಿಡದ ತಿವ್ರವಾದ ಹೋರಾಟಗಳಿಂದಾಗಿ ಬಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ. ಬಾರತಿಯರಿಗೆ ಬ್ರಿಟಿಷರು ಸಂಪೂರ್ಣ ಸ್ವಾತಂತ್ರ್ಯ ನೀಡುವುದಾದರೆ ಬಂಗಾಳ ವಿಭಜನೆ ಮಾಡುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ  ಸಹೋದರರಂತೆ ಒಂದಾಗಿದ್ದ ಹಿಂದು ಮುಸ್ಲಿಂರು ಒಗ್ಗಟ್ಟಾಗಿ ಹೋರಾಟ ನಡೆಸಿರುತ್ತಾರೆ ಇವರಲ್ಲಿ ಯಾವುದೆ ಭೇದ ಇರುವುದಿಲ್ಲ, ಇವರಲ್ಲಿ ಧರ್ಮದ ವಿಷಬಿಜ ಬಿತ್ತಿದ ಬ್ರಿಟನ್‌ ಭಾರತವನ್ನ ಹಾಳುಮಾಡುವಲ್ಲಿ ಮೊದಲ ಹೆಚ್ಚೆಇಡುತ್ತದೆ.. ಸ್ನೇಹಿತರೆ ಏನಿದು ಬಂಗಾಳ ವಿಭಜನೆ, ಇವರ ಹೋರಾಟ ಹೇಗಿದ್ದವು, ಇದಲ್ಲಿ ಲಾಲ್‌ ಬಾಲ್‌ ಪಾಲ್‌ ಇವರ ಪಾತ್ರವೇನು ಬಂಗಾಳ ವಿಭಜನೆಯಲ್ಲಿ ಗೆದ್ದರು ನಂತರ ವರ್ಷಗಳಲ್ಲಿ ಭಾರತ ಸೋತಿದ್ದು ಹೇಗೆ ಎನ್ನುವುದನ್ನ ನಾವೀಗ ತಿಳಿದುಕೊಳ್ಳೋಣ.   

          ಸ್ನೇಹಿತರೆ ಬ್ರಿಟಿಷರು ಮೊದಲು ಕ್ರಿ.ಶ 1600 ಡಿಸೆಂಬರ್ 30     ರಲ್ಲಿ ಬಾರತಕ್ಕೆ ಬಂದರು ಇಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಸ್ಥಾಪಿಸಿದರು. ಕ್ರಿ.ಶ. 1612 ರಲ್ಲಿ ಕಂಪನಿ ಭಾರತದಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಲು ಮೊಘಲ್ ಚಕ್ರವರ್ತಿ ಜಹಾಂಗೀರ್ ಬಳಿ ಅನುಮತಿ ಪಡೆಯಿತು. ಹಾಗಾಗಿ ಬ್ರಿಟಿಷರು ಸೂರತ್, ಬಾಂಬೆ, ಮದ್ರಾಸ್ ಕಲ್ಕತ್ತಾ, ಗಳಲ್ಲಿ ತಮ್ಮ ಮುಖ್ಯ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸುತ್ತಾರೆ. ಆರಂಭದಲ್ಲಿ ಇದರ ಉದ್ದೇಶ ಏಷ್ಯಾ ದೇಶಗಳೊಂದಿಗೆ ವ್ಯಾಪಾರ ನಡೆಸುವುದಾಗಿತ್ತು. ಕಾಲ ನಂತರದಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ವ್ಯಾಪಾರ ಹೊರತುಪಡಿಸಿ  ರಾಜಕೀಯ ಆಡಳಿತಕ್ಕೆ ಕೈ ಹಾಕುತ್ತದೆ. ಹಾಗಾಗಿ  ಕ್ರಿ.ಶ 1757 ಪ್ಲಾಸಿ ಕದನವನ್ನು ನಡೆಸಿ, 1765 ರಲ್ಲಿ ಬಕ್ಸಾರ್ ಕದನ ನಡೆಸುವ ಮೂಲಕ ಭದ್ರವಾಗಿ ಭಾರತದಲ್ಲಿ ನೆಲೆ ಕಂಡುಕೊಳ್ಳುತ್ತದೆ. ಎರಡು ಕದನಗಳು ಭಾರತ ದೇಶದ ಭವಿಷ್ಯ ಬದಲಿಸುತ್ತದೆ ಹಾಗೂ ಫಲವತ್ತಾದ ಬಂಗಾಳ ಸಂಪೂರ್ಣವಾಗಿ ಬ್ರಿಟಿಷರ ಕೈಗೆ ಸಿಗುವಂತೆ ಮಾಡುತ್ತವೆ. ಕ್ರಿ.ಶ 1799 ರಲ್ಲಿ ಮೈಸೂರು ರಾಜ್ಯ ಅವನತಿ ಇದರೊಟ್ಟಿಗೆ ಕ್ರಿ.ಶ 1818 ರಲ್ಲಿ ಮರಾಠ ಸಾಮ್ರಾಜ್ಯವು ಕೂಡಾ ಬ್ರಿಟಿಷರ ಕೈವಶವಾಗುತ್ತದೆ. ಕ್ರಿ.ಶ 1857ರಲ್ಲಿ ದೊಡ್ಡಮಟ್ಟದಲ್ಲಿ ಭಾರತದ ಪ್ರಥಮ ಸ್ವತಂತ್ರ ಸಂಗ್ರಾಮ ವಾಗುತ್ತದೆ.. ಇದಾದ ನಂತರ ಕಂಪನಿ ಆಡಳಿತವನ್ನು ತೆಗೆದು ಬ್ರಿಟಿಷರು ನೇರವಾಗಿ ಭಾರತದ ಆಡಳಿತವನ್ನ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. 

        ಅಂದಹಾಗೆ ಕ್ರಿ.ಶ 1857ರ ನಂತರ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಗಳು  ನಡೆಯುತ್ತವೆ. ಇದು ಕ್ರಿ.ಶ 1900 ರ ನಂತರ ತಿವ್ರವಾಗುತ್ತದೆ. ಇದನ್ನ ತಡೆಗಟ್ಟಲು ಭಾರತೀಯರಲ್ಲಿ ಐಕ್ಯೆತೆ ಒಡೆಯಲು ಬ್ರಿಟಿಷ್‌ ಅಧಿಕಾರಿ ಭಾರತದ ವೈಸರಾಯ್‌ ಆಗಿದ್ದ ಲಾರ್ಡ ಕರ್ಜನ್‌ 1905ರ ಅಕ್ಟೋಬರ್‌ 16 ರಂದು ಬಂಗಾಳವನ್ನ ಎರಡು ಭಾಗ ಮಾಡಿ ಪೂರ್ವ ಬಂಗಾಳವನ್ನ ಮುಸ್ಲಿಮರಿಗೆ ಪಶ್ಚಿಮ ಬಂಗಾಳವನ್ನ ಹಿಂದುಗಳಿಗೆ ಎಂದು ಭಾಗ ಮಾಡಿ ಇಲ್ಲಿ ಒಡೆದು ಆಳುವ ನೀತಿಗೆ ಚಾಲನೆ ನೀಡ್ತಾನೆ. ಇಲ್ಲಿಂದಲೇ ಭಾರತದಲ್ಲಿನ  ಸ್ವತಂತ್ರ್ಯ ಹೋರಾಟಗಾರರಲ್ಲಿ ಒಡಕು ಮೂಡಲಾರಂಭಿಸುತ್ತದೆ. 

                                                                                                ಮುಂದುವರೆಯುತ್ತದೆ......................