ಕೃತಕ ಬುದ್ಧಿಮತ್ತೆ (AI) ಭವಿಷ್ಯದಲ್ಲಿ ಜಗತ್ತನ್ನು ರೂಪಿಸುತ್ತಿರುವ ತಂತ್ರಜ್ಞಾನ.

         


      ಇಂದಿನ ಡಿಜಿಟಲ್‌ ಯುಗದಲ್ಲಿ ಕೃತಕಬುದ್ಧಿಮತ್ತೆ (Artificial intelligence - AI) ಮಾನವನ ಜಿವನದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಆರಂಭಿಸಿದೆ.ಮೊದಲು ಕಂಪ್ಯೂಟರ್‌ ಲೆಕ್ಕ ಮಾಡುವ ಸಾಧನಗಳಾಗಿದ್ದವು. ಆದರಿಗ ಕಂಪ್ಯೂಟರಗಳು ಯೊಚಿಸುವದು,ಕಲಿಯುವದು ಮತ್ತು ನಿರ್ಧಾರ ತೆಗೆದುಕೊಳ್ಳುವದು ಕೂಡಾ ಸಾಧ್ಯವಾಗುತ್ತಿದೆ. ಇದೆಲ್ಲವೂ AI ತಂತ್ರಜ್ಞಾನದ ಮೂಲಕ ಸಾಧ್ಯವಾಗಿದೆ.

             AI ಎಂದರೆ ಮಾನವನ ಬುದ್ಧಿಯನ್ನ ಅನುಕರಣೆ ಮಾಡುವಂತಹ ಕಂಪ್ಯೂಟರ್ ವ್ಯವಸ್ಥೆ. ಇದು ಡಾಟಾವನ್ನ ವಿಶ್ಲೇಷಿಸಿ ಅದರ ಅನುಭವದಿಂದ ಕಲಿಯುತ್ತವೆ ಮತ್ತು ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತವೆ. ಇಂದು ಆರೊಗ್ಯ,ಶಿಕ್ಷಣ,ಕೃಷಿ,ಬ್ಯಾಂಕಿಂಗ್‌, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ AI ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಉದಾಹರಣೆಗೆ ಆರೋಗ್ಯ ಕ್ಷೇತ್ರದಲ್ಲಿ AI ರೊಗಗಳನ್ನ ಬೇಗ ಪತ್ತೆಹಚ್ಚಲು ಸಹಾಯ ಮಾಡುತ್ತಿದೆ. ವೈದ್ಯಕೀಯ ಚಿತ್ರಗಳನ್ನ ವಿಶ್ಲೇಷಿಸಿ ಕ್ಯಾನ್ಸರನಂತಹ ರೋಗಗಳನ್ನಆರಂಭದಲ್ಲೆ ಗುರುತಿಸಲು ಸಾಧ್ಯವಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ AI ಆಧಾರಿದ ಪ್ಲಾಟ್‌ಫಾರ್ಮಗಳು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಕಲಿಕೆ ನೀಡುತ್ತಿವೆ.

          ಕೃಷಿ ಕ್ಷೇತ್ರದಲ್ಲಿಯೂ AI ಮಹತ್ವದ ಬದಲಾವಣೆಯನ್ನ ತರುತ್ತಿದೆ.ಹವಾಮಾನ ಮಾಹಿತಿ ಮಣ್ಣಿನ ಗುಣಮಟ್ಟ  ಮತ್ತು ಬೆಳೆಗಳ ಸ್ಥಿತಿಯನ್ನ ವಿಶ್ಲೇಷಿಸಿ ರೈತರಿಗೆ ಸರಿಯಾದ ಸಲಹೆಯನ್ನ ನೀಡಲಾಗುತ್ತಿದೆ.ಇದರಿಂದ ರೈತರಿಗೆ ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಆದರೆ AI ತಂತ್ರಜ್ಞಾನಕ್ಕೆ ಕೆಲವು ಸವಾಲುಗಳಿವೆ. ಉದ್ಯೋಗಗಳ ಮೇಲೆ ಪರಿಣಾಮ ಬಿರುವ ಸಾಧ್ಯತೆಗಳಿವೆ ಎಂಬ ಆತಂಕವೂ ಇದೆ. ಆದ್ದರಿಂದ ಏಐ ಬಳಕೆ ಜವಬ್ದಾರಿಯುತವಾಗಿರಬೇಕು.

 ಒಟ್ಟಾರೆಯಾಗಿ AI ತಂತ್ರಜ್ಞಾನ ಮಾನವನಿಗೆ ಪ್ರತಿಸ್ಪರ್ದಿಯಲ್ಲ ಬದಲಾಗಿ ಸಹಕಾರಿಯಾಗಿದೆ.ಸರಿಯಾದ ರೀತಿಯಲ್ಲಿ ಬಳಸಿದರೆ ಇದು ಮಾನವನಿಗೆ ತುಂಬಾ ದೊಡ್ಡಮಟ್ಟದಲ್ಲಿ ಸಹಕಾರಿಯಾಗಲಿದೆ. ಭವಿಷ್ಯದ ಜಗತ್ತಿನಲ್ಲಿ AI ಇಲ್ಲದೆ ಯಾವುದೇ ಕ್ಷೇತ್ರವಿಲ್ಲ ಎನ್ನುವಂತಾಗುತ್ತದೆ.ಎಐ ಇಲ್ಲದೇ ಯಾವುದೇ ಕ್ಷೇತ್ರಗಳಿರುವುದಿಲ್ಲ ಎಂದರೆ ತಪ್ಪಾಗುವುದಿಲ್ಲ.

       AI ಮಾನವನ ಬುದ್ದಿಯನ್ನ ಬದಲಾಯಿಸುವುದಿಲ್ಲ,ಅದರೆ ಬದಲಾಗಿ ಬುದ್ದಿಶಕ್ತಿಯನ್ನ ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡುತ್ತದೆ.

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?