ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-04

              

                              

                     ಸ್ನೇಹಿತರೆ ಭಾರತ ಸ್ವತಂತ್ರ್ಯ ಪಡೆದುಕೊಳ್ಳುವ  ದಿನ ಹಾಗೂ ಹೋರಾಟದ ಫಲ ಕೈ ಸೇರುವ ದಿನಗಳು ಹತ್ತಿರವಾಗುತ್ತಿದ್ದಂತೆ ಬ್ರಿಟಿಷರು ಸಾಕಿದ ಗಿಣಿ (ಆಲ್‌ ಇಂಡಿಯಾ ಮುಸ್ಲಿಂ ಲೀಗ್)‌ ಭಾರತವನ್ನ ಹದ್ದಾಗಿ ಕುಕ್ಕಲು ತಯಾರಿ ನಡೆಸಿತ್ತು. 1906 ರಲ್ಲಿ ರಚನೆಯಾದ ಮುಸ್ಲೀಂ ಲೀಗ್‌ 1947 ರಲ್ಲಿ ಧರ್ಮದ ಅಮಲಿನಲ್ಲಿ ರಾಕ್ಷಸ ರೂಪ ತಾಳಿತ್ತು. ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಭಾರತೀಯ ನೌಕಪಡೆ ಸೈನಿಕರು ಕೂಡಾ ಬ್ರಿಟಿಷರ ವಿರುದ್ದ ದಂಗೆ ಶುರು ಮಾಡಿದ್ದರು. ಒಟ್ಟಾರೆಯಾಗಿ ಭಾರತದ ಸ್ವತಂತ್ರ್ಯ ಹತ್ತಿರ ಬಂದಂತೆ ಮುಸ್ಲಿಂ ಲೀಗ್‌ ಪ್ರತ್ಯೇಕ ಮುಸ್ಲೀಂ ರಾಷ್ಟಕ್ಕಾಗಿ ಕಾದು ಕುಳುತಿತ್ತು. ಮೊದಲಿನಿಂದಲು ಇಂತಹ ಸಮಯಕ್ಕಾ ಕಾದು ಕುಳಿತಿದ್ದ ಬ್ರಿಟಿಷರು. 1911ರಲ್ಲಾದ ಬಂಗಾಳ ವಿಭಜನೆ ರದ್ಧತಿ ಸೇಡನ್ನ ತಿರಿಸಿಕೊಂಡಿತ್ತು. ಅಂದಹಾಗೆ ಹಿಂದುಗಳಿಗೆ ಹಿಂದುಸ್ತಾನ ಮುಸ್ಲಿಮರಿಗೆ ಪಾಕಿಸ್ತಾನ ಮಾಡಿದ್ದರು. ಇಲ್ಲೂ ಕೂಡಾ ಬ್ರಿಟಿಷರು ಭಾರತ ದೊಡ್ಡ ದೊಡ್ಡ ಭೂಭಾಗಗಳನ್ನೆ ವಿಭಾಗ ಮಾಡ್ತಾರೆ. ಬಾರತದಲ್ಲಿದ್ದ ದೊಡ್ಡ ಸಂಪತ್ಬರಿತ ಭೂಭಾಗಳೆಂದು ಗುರುತಿಸಿಕೊಂಡಿದ್ದ, ದೊಡ್ಡ ರಾಜ್ಯಗಳಾದ ಬಂಗಾಳವನ್ನ ಮತ್ತು ತನ್ನದೇ ಆದ ಇತಿಹಾಸ ಹೊಂದಿದ ಪಂಜಾಬ್‌ ರಾಜ್ಯಗಳನ್ನ ಭಾಗ ಮಾಡಿ ಪಾಕಿಸ್ತಾನಕ್ಕೆ ನಿಡಲಾಗುತ್ತದೆ. ಇಲ್ಲಿ ಫಲವತ್ತಾದ ಭೂಭಾಗಗಳು ಭಾರತದ ಕೈತಪ್ಪಿಹೋದವು.

ಅಂದಹಾಗೆ ಭಾರತದ ಸ್ವತಂತ್ರ್ಯಕ್ಕೆ ಹಲವು ಕಾರಣಗಳಿದ್ದವು,

  •  ದ್ವಿತಿಯ ಮಹಾಯುದ್ಧದಲ್ಲಿ ಬ್ರಿಟನ್‌ ಆರ್ಥಿಕವಾಗಿ ದಿವಾಳಿಯಾಗಿತ್ತು ಭಾರತದಂತಹ     ದೊಡ್ಡ   ರಾಷ್ಟ್ರದಲ್ಲಿ ಆಡಳಿತ ಮುಂದುವರೆಸಲು ಕಷ್ಟವಾಗಿತ್ತು.
  • ಮುಂಬೈ ಸೇರಿದಂತೆ ಅನೇಕ ಬಂಧರುಗಳಲ್ಲಿ ನೌಕಾಪಡೆಯ ಸೈನಿಕರು ಬ್ರಿಟಿಷರ ವಿರುದ್ಧ ದಂಗೆಯೆದ್ದರು.
  • ದ್ವಿತಿಯ ಮಹಾಯುದ್ಧದ ನಂತರ ಆದ ಒಪ್ಪಂದಗಳು ವಸಾಹತು ಯೂರೋಪ್‌ನ ಯಾವ ದೇಶಗಳು ವಸಾಹತುಗಳನ್ನ ಹೊಂದುವಂತಿಲ್ಲ.
  • ಭಾರತೀಯರು ಕಾಲನಂತರದಲ್ಲಿ ಶೈಕ್ಷಣಿಕವಾಗಿ ಪ್ರಬುದ್ಧರಾಗಿದ್ದರು. ಬ್ರಿಟಿಷರ ಎಲ್ಲಾ ಕುತಂತ್ರಗಳನ್ನ ಗಮನಿಸುತ್ತಿದ್ದರು.
ಹೀಗೆ ಹಲವಾರು ಕಾರಣಗಳಿಂದ ಬಾರತಕ್ಕೆ ಸ್ವತಂತ್ರ್ಯ ಸಿಗುತ್ತದೆ

ಭಾರತದ ವಿಭಜನೆಗೆ ಕಾರಣಗಳು 

                    ವಿಭಜನೆ ಹಾದಿ ಹಠಾತನೆ ಆಗಿದ್ದಲ್ಲ ಇದು ಎರಡು ದೊಡ್ಡ ಧಾರ್ಮಿಕ ಸಮುದಾಯಗಳ ನಡುವಿಕ ನಂಬಿಕೆಯ ಕುಸಿತದ ಫಲವಾಗಿತ್ತು. ಹಲವಾರು ಪ್ರಮುಖ ಬೆಳವಣಿಗೆಗಳು ಏಕೀಕೃತ ಸ್ವಾತಂತ್ರ್ಯ ಚಳುವಳಿಗಳನ್ನ ಎರಡು ರಾಷ್ಟ್ರದ ಬೇಡಿಕೆಯಾಗಿ ಪರಿವರ್ತಿಸಿದವು. ಏಕೀಕೃತ ರಾಷ್ಟ್ರೀಯವಾದ ರಂಗವನ್ನ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದ ಬ್ರಿಟಿಷ್‌ ಸರ್ಕಾರವು ಕೊಮು ಗಲಬೆಗಳನ್ನ ಪ್ರೋತ್ಸಾಹಿಸಿತು.ಇದರ ನಂತರ ದ್ವಿರಾಷ್ಟ್ರ  ಸಿದ್ದಾಂತವು ಅಸ್ತಿತ್ವಕ್ಕೆ ಬಂದಿತು. ಮೊಹಮದ್‌ ಅಲಿ ಜಿನ್ನಾ ಈ ದ್ವಿರಾಷ್ಟ್ರ ಸಿದ್ದಾಂತ ಪ್ರತಿಪಾದಿಸಿದರು.   ಹಿಂದುಗಳು ಮತ್ತು ಮುಸ್ಲಿಮರು ಕೇವಲ ಎರಡು ಧಾರ್ಮಿಕ ಗುಂಪುಗಳಲ್ಲ, ಆದರೆ ವಿಭಿನ್ನ ಸಾಂಸೃತಿಕ ಮತ್ತು ವಿಭಿನ್ನ ರಾಜಕೀಯ ಗುರಿಯನ್ನ ಹೊಂದಿರುವ ಎರಡು ಪ್ರತ್ಯೇಕ ದೇಶಗಳು ಎಂದು ಕರೆದರು. 

       ಅಂದಹಾಗೆ 1930 ದಶಕದ ಅಂತ್ಯ ಮತ್ತು 1940 ರ ದಶಕದ ಆರಂಭದಲ್ಲಿ ನಡೆದ ರಾಜಕೀಯ ಘಟನೆಗಳು  ಹಿಂದು-ಮುಸ್ಲಿಮರಿಗೆ ಅಂತಿಮ ಪ್ರಚೋದನೆಯಾಗಿ ಕಾರ್ಯನಿರ್ವಹಿಸಿದವು.  ಮುಸ್ಲಿಮರು ಪ್ರಜಾಪ್ರಭುತ್ವ  ಭಾರತದಲ್ಲಿ ಹಿಂದುಗಳ ಪ್ರಾಭಲ್ಯಕ್ಕೆ ಭಯಬಿಳುತ್ತಾರೆ. ಅಂದಹಾಗೆ ಕ್ಯಾಬಿನೆಟ್‌ ಮಿಷನ್‌ ನಂತಹ ಹಲವಾರು ರಾಜಿ ಯೊಜನೆಗಳ ವೈಫಲ್ಯಗಳು 1947ರ ಹೊತ್ತಿಗೆ ವಿಭಜನೆ ಮಾಡಲು ಮುಂದಾಗುತ್ತಾರೆ. ಬ್ರಿಟಿಷ ಮತ್ತು ಭಾರತದ ನಾಯಕರಿಗೆ ಶಾಂತಿಯುತ ಅಧಿಕಾರ ವರ್ಗಾವಣೆ ಖಚಿತಪಡಿಸಿಕೊಳ್ಳಲು ಭೂಮಿಯನ್ನು ವಿಭಜಿಸುವುದನ್ನ ಬಿಟ್ಟು ಬೇರೆ ದಾರನ್ನ ನೋಡಲೇ ಇಲ್ಲ. 

          ಹೀಗೆ ಹಲವಾರು ಕಾರಣಗಳಿಂದ ಬಾರತ 15 ಅಗಸ್ಟ್‌ 1947 ರಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸ್ವಾತಂತ್ರ್ಯವಾಯಿತು. ಪಾಕಿಸ್ತಾನ 14 ಅಗಸ್ಟ್‌ 1947 ರಂದು ಧರ್ಮುದ ಆಧಾರದ ಮೇಲೆ ಮುಸ್ಲಿಂ ದೇಶವಾಗಿ ಸ್ವಾತಂತ್ರ್ಯವಾಗುತ್ತದೆ. 


   

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?