ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-03

                                  

               ಸ್ನೇಹಿತರೇ ಬಂಗಾಳ ವಿಭಜನೆ ರದ್ದತಿಯಾದ ನಂತರ ಭಾರತೀಯ ಹೋರಾಟಗಾರರಿಗೆ ಒಂದು ದೊಡ್ಡ ಮನೊಬಲ ಬರುತ್ತದೆ. ಹಾಗೆಯೇ ಸ್ವತಂತ್ರ್ಯ ಹೋರಾಟ ನಿರ್ಣಾಯಕ ಘಟ್ಟಕ್ಕೆ ತಲುಪಿತು. ಈ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಕೇಲವ ಮೇಲ್ವರ್ಗದ ಚರ್ಚೆಯಾಗಿ ಉಳಿಯದೆ. ಸಾಮಾನ್ಯ ಜನರ ಚಳುವಳಿಯಾಗಿ ಮಾರ್ಪಟ್ಟಿತು. ಈ ಬದಲಾವಣೆಯಲ್ಲಿ ಲಾಲ್-ಬಾಲ್-ಪಾಲ್‌ ಇವರ ಪಾತ್ರ ದೊಡ್ಡದಿರುತ್ತದೆ.

           ಅಂದಹಾಗೆ 1911 ರಲ್ಲಿ ಬಂಗಾಳ ವಿಭಜನೆ ರದ್ದತಿ ನಂತರ ರಾಜಧಾನಿಯನ್ನ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು. ಇದಾದ ನಂತರ  ರೌಲತ್‌ ಕಾಯಿದೆ ಮತ್ತು ಜಾಲಿಯನ್‌ ವಾಲ್‌ ಭಾಗ ಹತ್ಯಾಕಾಂಡ ಹೀಗೆ ಬ್ರಿಟಿಷರ ದಮನಕಾರಿ ನೀತಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದವು.      ಅಸಹಕಾರ ಚಳುವಳಿ 1920-22 ಗಾಂಧಿಜಿಯವರ ನೇತೃತ್ವದಲ್ಲಿ ನಡೆದ ಈ ಬೃಹತ್‌ ಚಳುವಳಿಗೆ ಲಾಲ್-ಬಾಲ್-ಪಾಲ್‌ ಇವರು ಹಾಕಿಕೊಟ್ಟ ಸ್ವದೇಶಿ ತತ್ವವೇ ಅಡಿಪಾಯವಾಗಿತ್ತು.

               ಲಾಲ್-ಬಾಲ್-ಪಾಲ್‌ ಈ ಮೂವರು ನಾಯಕರು ಕಾಂಗ್ರೇಸ್‌ನಲ್ಲಿ ತಿವ್ರಗಾಮಿಗಳೆಂದು ಗುರುತಿಸಿಕೊಂಡು ಹೊರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇವರು ಬ್ರಿಟಿಷರಲ್ಲಿ ಪ್ರಾರ್ಥನೆ ಮಾಡುವ ಬದಲು ಹಕ್ಕು ಕೇಳುವ ಹಾದಿಯನ್ನ ತುಳಿದರು.  

                                                      ಬಾಲ್‌ ಗಂಗಾದರ ತಿಲಕ್‌ (ಬಾಲ್)

ಸ್ವದೇಶಿ ಘೊಷಣೆ ;-  ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕ‌ ಅದನ್ನ ಪಡೆದೆ ತಿರುತ್ತೇನೆ ಎಂದು ಹೆಳಿದರು ಈ ಮಾತು ಲಕ್ಷಾಂತರ ಯುವಕರಲ್ಲಿ ಸ್ಪೂರ್ತಿ ತುಂಬಿತು.

ಹೋಮ್‌ ರೂಲ್‌ ಲೀಗ್:-‌ 1916 ರಲ್ಲಿ ಹೋಮ್‌ ರೂಲ್‌ ಚಳುವಳಿನ್ನ ಆರಂಭಿಸಲಾಯಿತು. ಬಾಲ ಗಂಗಾಧರ ತಿಲಕರು ಭಾರತಕ್ಕೆ ಸ್ವಯಂ ಆಡಳಿತ ಬೆಕೆಂದು ಹಳ್ಳಿ ಹಳ್ಳಿಗೂ ಸ್ವತಂತ್ರ್ಯದ ಆಶಯವನ್ನು ತಲುಪಿಸಿದರು.

ಜನಜಾಗೃತಿ :- ಮೊದಲೆ ಹೆಳಿದಂತೆ ಗಣೇಶೋತ್ಸವ ಮತ್ತು ಶಿವಾಜಿ ಜಯಂತಿಗಳ ಮೂಲಕ ದೇಶದ ಜನರನ್ನ ಒಗ್ಗೂಡಿಸಿದರು.

                                                 ಲಾಲಾ ಲಜಪತ್‌ ರಾಯ್‌‌ (ಲಾಲ್)

            ಪಂಜಾಬ ಕೆಸರಿ ಎಂದು ಕರೆಯಿಸಿಕೊಂಡಿದ್ದ ಇವರು ಉತ್ತರ ಭಾರತದಲ್ಲಿನ ಚಳುವಳಿಯ ನೇತೃತ್ವ ವಹಿಸಿಕೊಂಡಿದ್ದರು.

ಸೈಮನ್‌ ಕಮಿಷನ್‌ ವಿರೋಧ 1928: 1911 ರ ನಂತರದ ಕಾಲಘಟ್ಟದಲ್ಲಿ ಸೈಮನ್‌ ಕಮಿಷನ್‌ ವಿರುದ್ಧ ಹೊರಾಟ ಪ್ರಮುಖವಾದದರು. ಸೈಮನ್‌ ಗೋಬ್ಯಾಕ್‌ ಚಳುವಳಿಯ ನೇತೃತ್ವ ವಹಿಸಿದ್ದಾಗ ಬ್ರೀಟಿಷರ ಲಾಠಿ ಏಟುಗಳಿಂದ ಗಾಯಗೊಂಡು ಹುತಾತ್ಮರಾದರು. 

ಆರ್ಥಿಕ ಜಾಗೃತಿ :- ಇವರು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು ಹಾಗೂ ಭಾರತಿಯರು ಆರ್ಥಿಕವಾಗಿ ಸ್ವಾವಲಂಭಿಯಾಗಬೆಂಕೆಂದು ಪ್ರತಿಪಾದಿಸಿದರು.

                                         ಬಿಪಿನ್‌ ಚಂದ್ರ ಪಾಲ್‌ (ಪಾಲ್)‌

                   ಇವರು ಕ್ರಾಂತಿಕಾರಿ ವಿಚಾರಗಳ ಪಿತಾಮಹ ಎಂದೆ ಕರೆಯಲ್ಪಡುತ್ತಾರೆ 

ಸ್ವದೇಶಿ ಮತ್ತು ಬಹಿಷ್ಕಾರ :- ಬ್ರಿಟಿಷರ ಸರಕುಗಳನ್ನ ಬಹಿಷ್ಕರಿಸುವ ಭಾರತೀಯ ಶಿಕ್ಷಣಕ್ಕೆ ಒತ್ತು ನೀಡುವ ವಿಚಾರವನ್ನ ಬಲವಾಗಿ ಪ್ರತಿಪಾದಿಸಿದರು.

ಪತ್ರಿಕೋದ್ಯಮ:-ವಂದೇ ಮಾತರಂ ಪತ್ರಿಕೆಯ ಮೂಲಕ ಬ್ರಿಟಿಷರ ಶೋಷಣೆಯನ್ನ ಜನರು ಮುಂದೆ ತಂದಿಟ್ಟರು.

                                            ಲಾಲ್-ಬಾಲ್-ಪಾಲ್‌ ಇವರ ಪರಂಪರೆ

       ಗಾಂಧೀಜಿಯವರು 1915ರಲ್ಲಿ ಬಾರತಕ್ಕೆ ಆಗಮಿಸುತ್ತಾರೆ. ಅದಾಗಲೇ 1911ರಲ್ಲಿ ಬಾರತಿಯರಿಗೆ ಬ್ರಿಟಿಷರ ವಿರುದ್ದ ಗೆಲುವಾಗಿತ್ತು. ಅದೇ ಬಂಗಾಳ ವಿಭಜನೆ ರದ್ದತಿ. ನಂತರ ಗಾಂಧಿಜಿಯವರು ಬಾರತ ರಾಜಕಾರಣ ಪ್ರವೇಶಿಸಿದಾಗ ಅವರಿಗೆ ಅದಾಗಲೇ ಸಿದ್ಧವಾಗಿದ್ದ ಜನಪರ ವೇದಿಕೆ ಸಿಕ್ಕಿತು.ಲಾಲ್‌- ಬಾಲ್‌- ಪಾಲ್ ಅವರು ಜನರಲ್ಲಿ ಮೂಡಿಸಿದ್ದ "ಬ್ರಿಟಿಷರ ಭಯವಿಲ್ಲದ ಮನೋಭಾವ" ಮುಂದಿನ ಚಳುವಳಿಗಳಿಗೆ ಇಂಧನವಾಯಿತು.

                                                                    ಗಾಂಧಿ ಯುಗ

           ಸ್ನೇಹಿತರೆ ಗಾಂಧಿಯವರು ಬಾರತಕ್ಕೆ ಬಂದ ನಂತರ ಇವರು ಕೂಡಾ ಅನೇಕ ಚಳುವಳಿಗಳನ್ನ ಮುನ್ನಡೆಸುತ್ತಾರೆ. ರೌವಲತ್‌ ಕಾಯ್ದೆ, ಅಸಹಕಾರ ಚಳುವಳಿ,ಖೇಡಾ ಸತ್ಯಾಗ್ರಹ,‌ ಹೀಗೆ ಇನ್ನೂ ಅನೇಕ ಚಳುವಳಿಗಳನ್ನ ಹಮ್ಮಿಕೊಳ್ತಾರೆ. ಭಾರತ ಸ್ವತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 1919 ರಿಂದ 1948 ರನ್ನ ಗಾಂಧಿಯುಗ ಎಂದೆ ಗುರುತಿಸಲಾಗಿದೆ. ಈ ಸಮಯಗಳಲ್ಲಿ ಭಗತ್‌ ಸಿಂಗ್‌ ಪೋಲಿಸ್‌   ಅಧಿಕಾರಿ  ಸ್ಯಾಂಡರ್ಸ್‌ನ ಹತ್ಯೆ ಮಾಡಿ ಲಾಲಾ ಲಜಪತ್‌ ರಾಯ್‌ ಇವರ ಸಾವಿಗೆ ಪ್ರತಿಕಾರ ತಿರಿಸಿಕೊಳ್ತಾರೆ. ಚಂದ್ರಶೇಖರ್‌ ಆಜಾದ್‌ ಬ್ರಟಿಷ್‌ರು ಹೊರಟಿದ್ದ ರೈಲುಗಳ ಮೇಲೆ ದಾಳಿ ಅವರ ಸಂಪತ್ತನ್ನ ದೊಜಲು ಪ್ಲಾನ್‌ ಮಾಡ್ತಾರೆ ಆ ಸಂಪನ್ನ ಸ್ವತಂತ್ರ್ಯ ಚಳುವಳಿಗೆ ಬಳಸುತ್ತಿದ್ದರು.ಸುಭಾಷ್‌ ಚಂದ್ರ ಬೋಸ್‌ ಇವರು ಬ್ರಿಟಿಷರ ವಿರುದ್ಧ ಭಾರತಿಯ ಸೇನೆಯನ್ನೆ ತಯಾರಿಸಿದರು ಇದರ ಹೆಸರು ಆಜಾದ್‌ ಹಿಂದ್‌ ಫೌಜ್‌ ಇದನ್ನ INA (indian nationl army) ಎಂದು ಕೂಡಾ ಕರೆಯಲಾಗಿ. ಇವರು ಅಂಡಮಾನ್‌ ಮತ್ತು ನಿಕೊಬಾರ ದ್ವೀಪದಲ್ಲಿ ಮೊದಲ ಬಾರಿಗೆ ಸ್ವಂತ ಭಾರತ ಸರ್ಕಾರವನ್ನ ಸ್ಥಾಪನೆ ಮಾಡಿ ಆಡಳಿತ ನಡೆಸುತ್ತಾರೆ ಹಾಗೂ ಬ್ರೀಟಿಷರ ವಿರುದ್ಧ ಸೈನಿಕ ಶಕ್ತಿ ಬಳಸಿದರು.ಇವರ ಸರ್ಕಾರವನ್ನ ಜಪಾನ್‌ ಸೇರಿದಂತೆ ಹಲವು ದೇಶಗಳು ಮಾನ್ಯತೆ ನೀಡಿದವು. ನನಗೆ ರಕ್ತ ಕೋಡಿ ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ಇದು ಇವರ ಘೋಷವಾಕ್ಯವಾಗಿರುತ್ತದೆ.

        ಹೀಗೆ ಇನ್ನೂ ಅನೇಕ ಜನರ ಹೋರಾಟದ ಫಲವಾಗಿ ಭಾರತಕ್ಕೆ ಸ್ವತಂತ್ರ್ಯವಾಗುವ ಕಾಲ ಹತ್ತಿರ ಬರುತ್ತದೆ. 

                                                                                           ಮುಂದುವರೆಯುತ್ತದೆ.............

   

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?