ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-02

                                                  

      ಭಾರತದ ಸ್ವತಂತ್ರ್ಯ ಚಳುವಳಿಗಳಲ್ಲಿ ಎಂತಹ ಹೋರಾಟಗಳು ನಡೆದರು ಬ್ರಿಟಿಷರು ಅದನ್ನ ಹತ್ತಿಕ್ಕುತ್ತಲೇ ಬಂದಿರ್ತಾರೆ. ಅದ್ಯಾವದಕ್ಕೂ  ಜಗ್ಗದ ಬಾರತೀಯರು ಹೋರಾಟಗಳನ್ನ ನಡೆಸುತ್ತಲೇ ಇರ್ತಾರೆ. ಬಂಗಾಳ ವಿಭಜನೆ, ಇದು ಭಾರತದ ಮೊದಲ ವಿಭಜನೆ ಎಂದರೆ ತಪ್ಪಾಗಲಿಕ್ಕಿಲ್ಲ ಈ ವಿಭಜನೆ ರಾಷ್ಟ್ರೀಯವಾದದ ಉದ್ದೇಶವನ್ನ ದುರ್ಬಲಗೊಳಿಸಿತು ಹಾಗೂ ಹಿಂದು ಮುಸ್ಲೀಂ ಮುಖಂಡರುಗಳಲ್ಲಿ ಮತ್ತು ಸಾರ್ವಜನಿಕರ ಮನದಲ್ಲಿ ನಾವು ಬೇರೆ ಬೇರೆ ಎನ್ನುವ ಮನಸ್ಥಿತಿಯನ್ನ ಹುಟ್ಟುಹಾಕಿತು. ಇದಕ್ಕೆ ಇನ್ನೊಂದು ಕಾರಣವು ಇದೆ, ಅದುವೇ ಮುಸ್ಲಿಂ ಲೀಗ್.

          ಸ್ನೇಹಿತರೇ ಮುಸ್ಲಿಂ ಲೀಗ್‌ ನ್ನು ಬಂಗಾಳದ ನವಾಬ ಖ್ವಾಜಾ ಸಲೀಮುಲ್ಲಾ,ಆಗಾ ಖಾನ್‌, ನವಾಬ್‌  ಉಲ್-ಮಲ್ಕ್‌ ಇವರುಗಳು ಡಿಸೆಂಬರ್‌ 30 1906 ರಲ್ಲಿ ಡಾಕಾದಲ್ಲಿ  ಸ್ಥಾಪನೆ ಮಾಡ್ತಾರೆ. ಇವರು ಮುಸ್ಲಿಮರ ರಾಜಕೀಯ ಹಕ್ಕನ್ನ ರಕ್ಷಿಸಿ ಬ್ರಿಟಿಷ್‌ ಸರ್ಕಾರಕ್ಕೆ ನಿಷ್ಠೆಯನ್ನ ವ್ಯಕ್ತಪಡಿಸುವ ಉದ್ದೇಶದಿಂದ ಮುಸ್ಲಿಂ ಲೀಗ್‌ ಸ್ಥಾಪನೆ ಮಾಡಿರ್ತಾರೆ. 

      ಅಂದಹಾಗೆ ಈ ಮುಸ್ಲಿಂ ಲೀಗ್‌ ಬಂಗಾಳ ವಿಭಜನೆ ಬಗ್ಗೆ ಹಾಗೂ ಸ್ವತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಳ್ಳುವುದಿಲ್ಲ. ಬದಲಾಗಿ ದೇಶದ ಮುಸ್ಲಿಂ ಭಾಂದವರ ಬಗ್ಗೆ ಇವರಿಗೆ ಪ್ರತ್ಯೇಕ ಮೂಲಭೂತ ಸೌಕರ್ಯಗಳ ವಿಚಾರಗಳ ಬಗ್ಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ ಲಾಲಾ ಲಜಪತ್‌ರಾಯ್‌, ಬಾಲಗಂಗಾಧರ ತಿಲಕ, ಬಿಪಿನ್‌ಚಂದ್ರಪಾಲ್‌ ಇವರು ಬ್ರಿಟಿಷರ ವಿರುದ್ಧ ಅಂಖಂಢ ಬಾರತಕ್ಕಾಗಿ ತಿವ್ರವಾದ ಹೋರಾಟ ಮಾಡ್ತಾರೆ. 

     ಅಂದಹಾಗೆ 1905ರ ಬಂಗಾಳವಿಭಜನೆಯನ್ನ ವಿರೋಧಿಸಿ ನಡೆದ ಸ್ವದೇಶಿ ಆಂದೋಲನದಲ್ಲಿ ಲಾಲ್-ಬಾಲ್-ಪಾಲ್ (ಲಾಲಾ ಲಜಪತ್‌ರಾಯ್‌, ಬಾಲಗಂಗಾಧರ ತಿಲಕ, ಬಿಪಿನ್‌ಚಂದ್ರಪಾಲ್‌)  ತ್ರಿಮೂರ್ತಿಗಳು ಪ್ರಮುಖ ಪಾತ್ರ ವಹಿಸಿದರು. ಇವರು ಬ್ರಿಟಿಷ್‌ ಸರಕುಗಳ ಬಹಿಷ್ಕಾರ,ಸ್ವದೇಶಿ ವಸ್ತುಗಳ ಬಳಕೆ,ರಾಷ್ಟ್ರೀಯ ಶಿಕ್ಷಣ ಮತ್ತು ಸ್ವರಾಜ್ಯ ಕಲ್ಪನೆಯನ್ನ ಜನಪ್ರಿಯಗೊಳಿಸುವ ಮೂಲಕ ಬಂಗಾಳದ ಪ್ರತಿಭಟನೆಯನ್ನ ದೇಶಾದ್ಯಂತ ಪಸರಿಸಿ ಸ್ವಾತಂತ್ರ್ಯ ಚಳುವಳಿಯಾಗಿ ಬದಲಾಯಿಸಿದರು.

      ಸ್ನೇಹಿತರೆ ದೇಶದ  ಸ್ವಾತಂತ್ರ್ಯ ಹೋರಾಟದಲ್ಲಿ ಲಾಲ್-ಬಾಲ್-ಪಾಲ್ ಇವರ ಪಾತ್ರ  ಪ್ರಮುಖವಾದು ಪಂಜಾಬ್‌ನ  ಲಾಲಾ ಲಜಪತ್‌ರಾಯ್‌,ಬಾಂಬೆಯ ಬಾಲಗಂಗಾಧರ ತಿಲಕ ಬಂಗಾಳದ ಬಿಪಿನ್‌ಚಂದ್ರಪಾಲ್‌   ಮೂರು ತ್ರಿಮೂರ್ತಿಗಳನ್ನ ಲಾಲ್-ಬಾಲ್-ಪಾಲ್‌ ಎಂದು ಜನಪ್ರಿಯವಾಗಿ ಕರೆಯಲ್ಪಟ್ಟರು. ಇವರು ಬಾರತೀಯ  ಸ್ವಾತಂತ್ರ್ಯ ಚಳುವಳಿಯ ರಾಜಕೀಯ ದಿಕ್ಕನ್ನೆ ಬದಲಿಸಿದರು. ಇವರನ್ನ ಬಾರತ ಸ್ವತಂತ್ರ್ಯ ಹೋರಾಟದ ತಿವ್ರಗಾಮಿಗಳು ಎಂದು ಕರೆಯಲಾಗಿದೆ. ಇವರ ಹೋರಾಟಗಳು ಕೇವಲ ಬಂಗಾಳಕ್ಕೆ ಮಾತ್ರ ಸಿಮಿತವಾಗಲಿಲ್ಲ. ತಿಲಕರು ಯುವಕರನ್ನ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಾರ್ವಜನಿಕ ಗಣೆಶ ಮೂರ್ತಿ ಕುರಿಸಿ ಹಬ್ಬಕ್ಕೆ ಕರೆ ನೀಡುತ್ತಾರೆ ಎಲ್ಲಾರೂ ಒಟ್ಟಾಗಿ ಸೇರಿ ಹಬ್ಬ ಆಚರಣೆ ಮಾಡುವಂತೆ ವಿಭಿನ್ನ ರಿತಿಯ ಹೋರಾಟಕ್ಕೆ ಕರೆ ನೀಡ್ತಾರೆ. ಮಹರಾಷ್ಟ್ರದಲ್ಲಿ ಶಿವಾಜಿ ಜಯಂತಿ ಆಚರಣೆ ಮಾಡಿ ಕರೆ ನೀಡ್ತಾರೆ.  ಹೀಗೆ ಹಲವು ಹಂತಗಳಲ್ಲಿ ಹೋರಾಟಗಳು ನಡೆದವು. ರವಿಂದ್ರ ನಾಥ ಟ್ಯಾಗೊರ ಅಮರ ಸೋನಾರ ಬಾಂಗ್ಲಾ ಗೀತೆಯನ್ನ ರಚನೆ ಮಾಡಿ ಚಳುವಳಿಗೆ ಶಕ್ತಿ ತುಂಬುತ್ತಾರೆ.   

            ಇವರೆಲ್ಲರ ಹೋರಾಟದ ಫಲವಾಗಿ ಬ್ರಿಟಿಷ ಸರ್ಕಾರ 1911  ರಲ್ಲಿ ಬಂಗಾಳ ವಿಭಜನೆ ಆದೇಶದನ್ನ ರದ್ದುಪಡಿಸುತ್ತದೆ. ಇಲ್ಲಿ ಸೋತ ಬ್ರಿಟಿಷರು 1906 ರಲ್ಲಿ ಸ್ಥಾಪಿತವಾಗಿದ್ದ ಅಲ್‌ ಇಂಡಿಯಾ ಮುಸ್ಲೀಂ ಲೀಗ್‌ ನ ಬೆಳೆಸುತ್ತಾ ಬರ್ತಿರ್ತಾರೆ. ಇದು ಮುಂದೊಂದು ದಿನಾ ಬಾರತಕ್ಕೆ ದೊಡ್ಡ ಪೆಟ್ಟು ಕೊಡುತ್ತದೆ.   

                                                                                                         ಮುಂದುವರೆಯುತ್ತದೆ.....