ನಮ್ಮ ಜೀವನದಲ್ಲಿ ಬರುವ ಅನೇಕ ಪರಿಸ್ಥಿತಿಗಳು ನಮ್ಮ ಮನಸ್ಸನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತವೆ. ಆದರೆ ನಮ್ಮ ವ್ಯಕ್ತಿತ್ವ – ಅದು ನಮ್ಮ ಆತ್ಮದ ಪ್ರತಿಬಿಂಬ. ಅದನ್ನು ಯಾವ ಕಾರಣಕ್ಕೂ ಬದಲಾಯಿಸಬಾರದು. ವ್ಯಕ್ತಿತ್ವವೇ ನಮ್ಮ ನಿಜವಾದ ಶಕ್ತಿ, ನಮ್ಮ ಗುರುತು. ಆದರೆ, ವಿಚಾರಗಳನ್ನು ಬದಲಾಯಿಸುವ ಸಾಮರ್ಥ್ಯ ನಮ್ಮನ್ನು ನವೀಕರಿಸುತ್ತದೆ. ಕೆಟ್ಟ ಚಿಂತನೆಗಳು ಮನಸ್ಸನ್ನು ಹಾಳು ಮಾಡುತ್ತವೆ, ಒಳ್ಳೆಯ ಚಿಂತನೆಗಳು ಜೀವನವನ್ನೇ ಬದಲಿಸುತ್ತವೆ. 🌿 ಅಸೂಯೆ, ಕಿಳಿರಿಮೆ, ಅಹಂಕಾರ – ಇವು ಮನಸ್ಸನ್ನು ಮಾತ್ರವಲ್ಲ, ಸುತ್ತಲಿನ ಜನರ ನೆಮ್ಮದಿಯನ್ನೂ ಕಸಿದುಕೊಳ್ಳುತ್ತವೆ. ಈ ವಿಷಗಳು ನಮ್ಮವರನ್ನು ಕಷ್ಟದ ಆಳಕ್ಕೆ ತಳ್ಳುತ್ತವೆ. ಸದ್ಗುಣಗಳ ಮಾರ್ಗ ಸದ್ಗುಣಗಳು – ನಂಬಿಕೆ, ಪ್ರೀತಿ, ದಯೆ, ಸಹನೆ – ಇವು ನಮ್ಮ ವ್ಯಕ್ತಿತ್ವಕ್ಕೆ ಬಲ ನೀಡುತ್ತವೆ. ಸತ್ಕಾರ್ಯಗಳು – ಸಣ್ಣ ಸಹಾಯದಿಂದ ದೊಡ್ಡ ಸೇವೆಯವರೆಗೆ – ನಮ್ಮ ಆತ್ಮವನ್ನು ಶುದ್ಧಗೊಳಿಸುತ್ತವೆ. ಯಾವ ಕಷ್ಟ ಬಂದರೂ, ಸದ್ಗುಣ ಮತ್ತು ಸತ್ಕಾರ್ಯಗಳು ನಮ್ಮನ್ನು ಪಾರು ಮಾಡುತ್ತವೆ. 🙏 ನಾವು ಯಾವಾಗಲೂ ಒಳ್ಳೆಯ ಚಿಂತನೆ, ಒಳ್ಳೆಯ ಹಾದಿ, ಒಳ್ಳೆಯ ಕಾರ್ಯಗಳಲ್ಲಿ ಮುಂದುಸರಿದರೆ – ಜೀವನ ಶಾಂತಿಯುತವಾಗುತ್ತದೆ. 🌟 ✍ ಶಿವಲಿಂಗಯ್ಯ ಕುಲಕರ್ಣಿ
" ಇತಿಹಾಸ ಮತ್ತು ಕಥೆಗಳ ಲೋಕ" "Confidence, Creativity, and Culture