ಹಿಂದಿನ ಕರ್ಮ ಬೆನ್ನಟ್ಟಿ ಬರುತಿರಲು, ವಾಸ್ತವದ ಅರಿವು ನೆಲೆಗಟ್ಟಿನಲ್ಲಿ ಕರ್ಮವ ಕಳೆದುಕೊ ಕಣ್ಣಿಟ್ಟು , ಅರಿವಿನ ನೆಲೆಯಲ್ಲಿ ಮನಸಿಟ್ಟಿ ಜೀವನ ಬಂಗಾರ ಮಾಡಿಕೊ, ಮದ್ದುಮಾವನ. ಲೇಖಕ: ಶಿವಲಿಂಗಯ್ಯ ಕುಲಕರ್ಣಿ, ಕಾವ್ಯ ಡಿಜಿಟಲ್ ಗಂಗಾವತಿ ಹಿಂದಿನ ಕರ್ಮ ನಮ್ಮ ನೆರಳು: ನಾವು ಇಂದು ಅನುಭವಿಸುವ ಹಲವಾರು ಘಟನೆಗಳು ಕೇವಲ ಇವತ್ತಿನ ಫಲವಲ್ಲ, ಅದು ನಮ್ಮ ಹಿಂದಿನ ಕರ್ಮಗಳ ಪ್ರತಿಫಲ. ಹಿಂದಿನ ದಿನಗಳಲ್ಲಿ ನಾವು ಮಾಡಿದ ಒಳ್ಳೆಯದೋ, ಕೆಟ್ಟದೋ ಕರ್ಮಗಳು ನಮ್ಮನ್ನು ಅನುಸರಿಸುತ್ತವೆ. ಅದನ್ನು ತಪ್ಪಿಸಲಾಗದು, ಬದಲಾಯಿಸಲಾಗದು. ಆದರೆ, ಅದು ನಮ್ಮನ್ನು ಬೆನ್ನಟ್ಟಿ ಬರುತ್ತದೆ ಎಂಬ ಸತ್ಯವನ್ನು ಅರಿಯುವುದು ಮುಖ್ಯ. ಅರಿವೇ ಶಕ್ತಿ: ಹಿಂದಿನ ಕರ್ಮಗಳ ಭಾರವನ್ನು ಎಳೆಯುತ್ತಿರುವಾಗ, ಅದು ನಮ್ಮ ಕೈಯಲ್ಲಿ ಇಲ್ಲ ಎಂಬ ಭ್ರಮೆಯಲ್ಲ ಬದುಕಬೇಡಿ. ಏಕೆಂದರೆ ಈಗಿನ "ಅರಿವು" ನಮ್ಮ ಕೈಯಲ್ಲಿದೆ. ಅರಿವಿನಿಂದ ನಾವು ನಮ್ಮ ಮುಂದಿನ ಹಾದಿಯನ್ನು ರೂಪಿಸಬಹುದು. ನಮ್ಮೊಳಗಿನ ಜಾಗೃತಿ, ನಮ್ಮ ಮನಸ್ಸು ಹೇಗೆ ಕೆಲಸ ಮಾಡಬೇಕು ಎಂಬುದರ ಮೇಲೆ ನಮ್ಮ ಭವಿಷ್ಯ ಅಡಹುಕೊಂಡಿದೆ. ಕರ್ಮವ ಕಳೆದುಕೊ ಕಣ್ಣಿಟ್ಟು: ಪಾಪ-ಪುಣ್ಯದ ಲೆಕ್ಕಾಚಾರದಿಂದ ಹೊರಬರಲು ಒಂದು ಮಾತ್ರ ದಾರಿ ಇದೆ – ನಿಷ್ಕಾಮ ಕರ್ಮ. ಕರ್ಮವನ್ನು ಮಾಡುವಾಗ ಫಲದ ನಿರೀಕ್ಷೆ ಇಲ್ಲದಿದ್ದರೆ, ಅದು ಶುದ್ಧವಾಗುತ್ತದೆ. ಸುದೃಢವಾದ ಮನಸ್ಸಿನಿಂದ, ದೃಢ ನಿಟ್ಟಿನಿಂದ, ಕರ್ಮವನ್ನು ಕಳೆದುಕೊಳ್ಳಬೇ...
ಎಲ್ಲಾ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲಿ, ಸಲ್ಲುವ ಕೆಲಸ ಎಲ್ಲರಿಗೂ ಇಲ್ಲ, ಇರುವ ಕಾಯಕಮಾಡು ಕಿರಿದೆನದೆ ಮನವಿಟ್ಟು ಎಲ್ಲರೊಳಗೊಂದಾಗೂ ಮುದ್ದುಮಾನವ.. ಬಲ್ಲವನು, ಮಾಡುವವನು, ಮುದ್ದುಮಾನವ: ಜೀವನದ ಸಾರ್ಥಕತೆ ✍️ ಲೇಖಕ: ಶಿವಲಿಂಗಯ್ಯ ಕುಲಕರ್ಣಿ, ಕಾವ್ಯ ಡಿಜಿಟಲ್ ಸ್ಟುಡಿಯೋ, ಗಂಗಾವತಿ ಪರಿಚಯ: "ಎಲ್ಲಾ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲಿ, ಸಲ್ಲುವ ಕೆಲಸ ಎಲ್ಲರಿಗೂ ಇಲ್ಲ, ಇರುವ ಕಾಯಕಮಾಡು ಕಿರಿದೆನದೆ, ಮನವಿಟ್ಟು ಎಲ್ಲರೊಳಗೊಂದಾಗು ಮುದ್ದುಮಾನವ." ಈ ಸಾಲುಗಳು ನಮ್ಮ ಬದುಕಿಗೆ ಬಹಳ ದೊಡ್ಡ ಪಾಠವನ್ನು ನೀಡುತ್ತವೆ. ನಾವು ಬಯಸುವುದೇನು? ದೊಡ್ಡ ಕನಸುಗಳಾ? ಜ್ಞಾನ ಪೂರಿತ ಜೀವನವಾ? ಎಲ್ಲರಿಗೂ ಸಹಾಯ ಮಾಡಬೇಕೆಂಬ ಇಚ್ಛೆನಾ? ಆದರೆ ಇಲ್ಲಿಯೊಲ್ಲಿಯೆ ನಿಲ್ಲಿ. ಒಂದು ಸತ್ಯವನ್ನು ಅರಿತುಕೊಳ್ಳಿ – ಎಲ್ಲರೂ ಎಲ್ಲವನ್ನೂ ಬಲ್ಲವರಲ್ಲ, ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಲಾರರು. ಎಲ್ಲಾ ಬಲ್ಲವರಿಲ್ಲ: ಪ್ರಪಂಚದಲ್ಲಿ ಎಲ್ಲವನ್ನೂ ಬಲ್ಲವನು ಯಾರೂ ಇಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾತ್ರ ಪರಿಣತಿ ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ನಾವು ಈ ನಿಜವನ್ನು ಮರೆತು, ‘ಅವನು ಎಲ್ಲವನ್ನೂ ಗೊತ್ತಿರಬೇಕು’ ಎಂದು ನಿರೀಕ್ಷಿಸುತ್ತೇವೆ. ಅದು ಸತ್ಯವಲ್ಲ. ಬಲ್ಲವರು ಬಹಳಿಲ್ಲಿ: ಜ್ಞಾನಿ ಎಂಬದು ಎಲ್ಲರೂ ಆಗಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಕೆಲವೇ ಜನರು ತಮ್ಮ ಕ್ಷೇತ್ರದಲ್ಲಿ ಪರಿಣಿತರಾಗಿರುತ್ತಾರ...